News Kannada
Monday, October 03 2022

ಕರ್ನಾಟಕ

ಸಮಾನತೆಯ ಸಂದೇಶ ಸಾರಿದ ಕುವೆಂಪು ಜಗದ ಕವಿ: ಟಿ.ಪಿ.ರಮೇಶ್ - 1 min read

Photo Credit :

ಸಮಾನತೆಯ ಸಂದೇಶ ಸಾರಿದ ಕುವೆಂಪು ಜಗದ ಕವಿ: ಟಿ.ಪಿ.ರಮೇಶ್

ಮಡಿಕೇರಿ: ಮನುಜ ಮತ ಸರ್ವವ್ಯಾಪಿಯಾಗಿ ಬೆಳೆಯಬೇಕೆನ್ನುವ ಉದಾತ್ತ ಚಿಂತನೆಯನ್ನು ಹೊಂದಿದ್ದ ಕುವೆಂಪು ಅವರು ಸಮಾನತೆಯ ಪರಿಕಲ್ಪನೆಯಡಿ ವಿಶ್ವಮಾನವ ಸಂದೇಶವನ್ನು ಸಾರಿದ ಯುಗದ ಕವಿ ಜಗದ ಕವಿಯಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಕೊಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ವಿಶ್ವ ಮಾನವ ರಾಷ್ಟ್ರಕವಿ ಕುವೆಂಪು ಅವರ 113ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಕುಚಿತ ಮನೋಭಾವವನ್ನು ತೊರೆದು ಜಾತಿಮತಗಳನ್ನು ಮೆಟ್ಟಿನಿಂತು ಸಮಾನತೆಯ ಪರಿಕಲ್ಪನೆಯಡಿ ಕುವೆಂಪು ಅವರು ರಚಿಸಿರುವ ಸಾಹಿತ್ಯದ ಅಧ್ಯಯನಕ್ಕೆ ಯುವ ಸಮೂಹ ಆಸಕ್ತಿ ತೋರಬೇಕೆಂದು ಅವರು ಕರೆ ನೀಡಿದರು. ಮೌಢ್ಯತೆಯ ಸಮಾಜದಲ್ಲಿ ವೈಚಾರಿಕತೆಯನ್ನು ಬೆಳೆಸುವ ದೃಷ್ಟಿಯನ್ನು ಹೊಂದಿದ್ದ ಕುವೆಂಪು ಈ ತಮ್ಮ ದೃಷ್ಟಿಕೋನದಡಿ ಸಾಹಿತ್ಯ ರಚಿಸಿದವರಾಗಿದ್ದಾರೆ. ‘ಎಲ್ಲಾದರು ಇರು ನೀ ಕನ್ನಡಿಗನಾಗಿರುವ’ ಎನ್ನುವ ಸಂದೇಶವನ್ನು ನೀಡಿದ ರಾಷ್ಟ್ರಕವಿ ಕುವೆಂಪು ಅವರು ಕನ್ನಡ ಸಾಹಿತ್ಯವನ್ನು ತಮ್ಮ ಸಾಹಿತ್ಯ ಸೃಷ್ಟಿಯ ಮೂಲಕ ವಿಶ್ವ ಮಟ್ಟಕ್ಕೆ ಕೊಂಡೊಯ್ದ ಮಹನೀಯರಾಗಿದ್ದಾರೆ. ಕುವೆಂಪು ಅವರು ಕೇವಲ ಸಾಹಿತಿ ಮಾತ್ರವಲ್ಲ, ದಾರ್ಶನಿಕರು, ವಿಶ್ವಮಾನವ ಸಂದೇಶ ಸಾರಿದ ಅಗ್ರಮಾನ್ಯ ವ್ಯಕ್ತಿ ಎಂದು ಬಣ್ಣಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಮಾತನಾಡಿ, 12ನೇ ಶತಮಾನದ ಬಸವಣ್ಣನವರ ಬಳಿಕ ಇಡೀ ಜಗತ್ತಿಗೆ ವಿಶ್ವ ಮಾನವ ಸಂದೇಶವನ್ನು ಸಾರಿದ ವ್ಯಕ್ತಿ ಕುವೆಂಪು ಅವರಾಗಿದ್ದಾರೆ. ಇವರು ದೇವರ ಅಸ್ತಿತ್ವವನ್ನು ನಂಬುತ್ತಲೆ ತಮ್ಮ ಸುತ್ತಮುತ್ತಲಿನ ಕಂದಾಚಾರಗಳನ್ನು ಮೆಟ್ಟಿ ನಿಲ್ಲಬೇಕಾದ ಪರಿಕಲ್ಪನೆಯನ್ನು ಸಮಾಜದಲ್ಲಿ ಬಿತ್ತಿದವರು. ಕನ್ನಡ ಸಾಹಿತ್ಯ ಇರುವವರೆಗೆ ಕುವೆಂಪು ಅವರ ಹೆಸರು ಚಿರಸ್ಥಾಯಿಯಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಪ್ರತಿಯೊಬ್ಬರು ಮುನ್ನಡೆಯುವಂತೆ ಕರೆ ನೀಡಿದರು.

ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ಸಾಹಿತಿ ಬಿ.ಎ.ಷಂಶುದ್ದೀನ್ ಮಾತನಾಡಿ, ದೇಶ, ಭಾಷೆ, ವರ್ಣಗಳಿಗಿಂತ ಮನುಷ್ಯ ಧರ್ಮವೆನ್ನುವುದು ಮಾತ್ರ ಮೇಲು ಎನ್ನುವ ಉದಾತ್ತ ಸಂದೇಶವನ್ನು ಕುವೆಂಪು ಅವರು ನೀಡಿದ್ದಾರೆ. ಆದರೆ ಪ್ರಸ್ತುತ ಸಮಾಜ ವ್ಯವಸ್ಥೆ ಇದನ್ನರಿಯದಿರುವುದು ವಿಷಾದನೀಯವೆಂದರು. ಪ್ರಸ್ತುತ ವ್ಯವಸ್ಥೆಯಲ್ಲಿನ ಸಂಘರ್ಷಗಳಿಂದ ದೂರವಾಗಲು ಕುವೆಂಪು ಅವರ ವಿಶ್ವಮಾನವ ಸಂದೇಶವೇ ತಕ್ಕ ಉತ್ತರವಾಗಿದೆ ಎಂದರು.

ಸಮಾಜದಲ್ಲಿ ಆಳವಾಗಿ ಬೇರು ಬಿಟ್ಟಿರುವ ಮತ ಧರ್ಮಗಳ ಬಂಧನವೇ ನಮ್ಮೆಲ್ಲರ ಏಳಿಗೆಗೆ ಅಡ್ಡಿಯಾಗಿದೆ ಎನ್ನುವ ಅಭಿಪ್ರಾಯ ಹೊಂದಿದ್ದ ಕುವೆಂಪು ಅವರು, ತಾನು ಯಾವುದೇ ಜಾತಿ ಮತ ಧರ್ಮಗಳಿಗೆ ಸೀಮಿತವಾದವನಲ್ಲ. ನನ್ನದು ಮನುಜ ಪಥವೆಂದು ಸಾರಿದ್ದ ಧೀಮಂತ ವ್ಯಕ್ತಿಯಾಗಿದ್ದಾರೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಪ್ರಕೃತಿಯ ಆರಾಧಕ, ಕ್ರಾಂತಿಕಾರಿ ಚಿಂತನೆಗಳನ್ನು ಹೊಂದಿದ್ದ ಕುವೆಂಪು ಅವರು ಗಂಡು ಮತ್ತು ಹೆಣ್ಣು ಎನ್ನುವುದು ಎಂದಿಗೂ ಸಮಾನ ಮತ್ತು ಇವೆರಡು ಕುಟುಂಬದ ಕಣ್ಣುಗಳೆಂದು ಸಾರಿದ್ದರು. ಇಂತಹ ಮಹಾನ್ ಚೇತನದ ಸಂದೇಶಗಳನ್ನು ಪ್ರತಿಯೊಬ್ಬರು ಪಾಲಿಸುವಂತಾಗಬೇಕೆಂದರು. ವೇದಿಕೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖಾ ಉಪನಿರ್ದೇಶಕರಾದ ಭಾಗ್ಯ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮೋಹನ್, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಸಿದ್ದಲಿಂಗ ಮೂರ್ತಿ ಉಪಸ್ಥಿತರಿದ್ದರು. ಕಲಾವಿದರಾದ ಗೋಪಿ ಮತ್ತು ತಂಡ ಆರಂಭದಲ್ಲಿ ನಾಡಗೀತೆಯನ್ನು ಹಾಡಿ, ಗೀತ ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟಿತು.

See also  ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಲ್ಲ: ಸುಮಲತಾ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಬಾರ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಅವರು ಸ್ವಾಗತಿಸಿ, ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರಾದ ಸಾವಿತ್ರಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು