News Kannada
Monday, September 26 2022

ಕರ್ನಾಟಕ

2.50 ಲಕ್ಷ ರೂ. ಅಕ್ರಮ ಗೋವಾ ಮದ್ಯ ವಶ - 1 min read

Photo Credit :

2.50 ಲಕ್ಷ ರೂ. ಅಕ್ರಮ ಗೋವಾ ಮದ್ಯ ವಶ

ಕಾರವಾರ: ಖಚಿತ ಮಾಹಿತಿಯ ಮೇರೆಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮೈಂಗಿಣಿ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಗೋವಾದ ಅಕ್ರಮ ಮದ್ಯದ ಬಾಟಲಿಗಳನ್ನು ಇಲ್ಲಿನ ಅಬಕಾರಿ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.

ಜಪ್ತಿ ಮಾಡಿಕೊಂಡ ಮದ್ಯದ ಮೌಲ್ಯ ಒಟ್ಟೂ 2.50 ಲಕ್ಷ ರೂ. ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ. ಅರಣ್ಯ ಮಾರ್ಗದಿಂದ ಅಕ್ರಮವಾಗಿ ಐದು ವಾಹನದಲ್ಲಿದ್ದ 51 ಚೀಲದಲ್ಲಿ ಒಟ್ಟೂ 186.840 ಲೀಟರ್ ಗೋವಾದ ಮದ್ಯ ಮತ್ತು 1,035 ಲೀ. ಗೋವಾ ಫೆನ್ನಿ ಜಪ್ತಿ ಮಾಡಿಕೊಳ್ಳಲಾಗಿದೆ. ಸಾಗಾಟಕ್ಕೆ ಬಳಸಲಾಗಿದ್ದ ಐದು ವಾಹನವನ್ನು ಸಹ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ವಾಹನ ಮೌಲ್ಯ 30,000 ರೂ. ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಐದು ಜನ ಆರೋಪಿಗಳು ನಂಬರ್ ಪ್ಲೇಟ್ ಇಲ್ಲದ ಸ್ಕೂಟರಿನಲ್ಲಿ ಮೈಂಗಿಣಿಯ ಅರಣ್ಯ ಪ್ರದೇಶ ಗೋವಾ ಗಡಿಭಾಗದಿಂದ ಗೋಪಶಿಟ್ಟಾ ರಸ್ತೆಯಲ್ಲಿ ಗೋವಾದ ಅಕ್ರಮ ಮದ್ಯಗಳನ್ನು ಸಾಗಿಸುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಬೇಕು ಎಂದು ಅಬಕಾರಿ ಅಧಿಕಾರಿಗಳು ಕಾಯುತ್ತ ನಿಂತಿದ್ದ ವೇಳೆಯಲ್ಲಿ ಆರೋಪಿಗಳು ಇಲಾಖೆಯ ವಾಹನಗಳನ್ನು ನೋಡಿದ ತಕ್ಷಣ ವಾಹನ ಹಾಗೂ ಅದರಲ್ಲಿದ್ದ ಅಕ್ರಮ ಮದ್ಯವನ್ನು ಬಿಟ್ಟು ಅರಣ್ಯ ಮಾರ್ಗವಾಗಿ ಪರಾರಿಯಾಗಿದ್ದಾರೆ. ಕತ್ತಲೆಯಾಗಿದ್ದರಿಂದ ಆರೋಪಿಗಳನ್ನು ಹಿಡಿಯಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.

ಪರಾರಿಯಾದ ಆರೋಪಿಗಳನ್ನು ಅಬಕಾರಿ ಸಿಬ್ಬಂದಿ ಗುರುತಿಸಿದ್ದು, ಅವರಲ್ಲಿ ಹೋಟೆಗಾಳಿಯ ರಾಜೇಂದ್ರ ಪಡವಳಕರ್, ಪಂಕಜ ಕಾಂಬಳೆ, ದೀಪಕ ಪಡುವಳಕರ್ ಎಂದು ತಿಳಿದು ಬಂದಿದೆ. ಈ ಹಿಂದೆಯೂ ಇವರ ವಿರುದ್ಧ ಅಕ್ರಮ ಮದ್ಯ ಸಾಗಾಟಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಆಯುಕ್ತ ಎನ್. ಎಸ್. ಶಾಮಾಜೋಯಿಸ್ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕ ಮಂಜುನಾಥ ವಿ. ಅರೆಗುಳಿ, ಅಬಕಾರಿ ರಕ್ಷಕರಾದ ಆನಂದು ಪೊಂಡೇಕರ, ಎಂ.ಎಂ. ನಾಯ್ಕ, ಟಿ. ಬಿ. ಗೊಂಡಾ, ವಿಶಾಲ ನಾಯ್ಕ ಮತ್ತು ವಾಹನ ಚಾಲಕರಾದ ಶಾಮನೂರು ಜಮಾಧಾರ, ರವಿಚಂದ್ರ ನಾಯ್ಕ, ವಿನೋದ ನಾಯ್ಕ, ಪರೇಶ ದೇಸಾಯಿ ಮತ್ತು ದಿನೇಶ ರಾಣೆ ಇದ್ದರು. ಅಬಕಾರಿ ನಿರೀಕ್ಷಕ ಮಂಜುನಾಥ ಅರೆಗುಳಿ ಅವರು ಪ್ರಕಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಶೋಧ ಕಾರ್ಯ ಮುಂದುವರಿದಿದೆ.

See also  ರೈತನನ್ನು ಕೊಂದ ನರಭಕ್ಷಕ ಹುಲಿಯ ಸೆರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು