News Kannada
Thursday, October 06 2022

ಕರ್ನಾಟಕ

ಜೆಡಿಎಸ್ ನಲ್ಲಿ ಅಸಮಾಧಾನ ಸ್ಫೋಟ - 1 min read

Photo Credit :

ಜೆಡಿಎಸ್ ನಲ್ಲಿ ಅಸಮಾಧಾನ ಸ್ಫೋಟ

ಮಡಿಕೇರಿ: ಜನತಾ ಪರಿವಾರದ ಹಿರಿಯ ಮುಖಂಡರಾದ ಎಂ.ಸಿ. ನಾಣಯ್ಯ ಅವರನ್ನು ಜಾತ್ಯತೀತ ಜನತಾದಳದ ರಾಜ್ಯ ವರಿಷ್ಠರು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿ ನಾಣಯ್ಯ ಬಣದ ಪ್ರಮುಖರು ಸಭೆ ನಡೆಸಿ ರಾಜ್ಯದ ನಾಯಕರ ನಿರ್ಲಕ್ಷ್ಯ ಧೋರಣೆಗೆ ಆಕ್ಷೇಪ ವ್ಯಕ್ತಪಡಿಸಿದರು. ಸಭೆಯಲ್ಲಿ ಮಾಜಿ ಸಚಿವ ಬಿ.ಎ.ಜೀವಿಜಯ ಅವರ ವಿರುದ್ಧ ಅಸಮಾಧಾನ ವ್ಯಕ್ತವಾಯಿತಲ್ಲದೆ, ಸಾಮೂಹಿಕವಾಗಿ ಜೆಡಿಎಸ್ ತೊರೆಯುವ ಬಗ್ಗೆ ಗಂಭೀರ ಚರ್ಚೆ ನಡೆಯಿತು.

ನಗರದ ಹೋಟೆಲ್ ವ್ಯಾಲಿವ್ಯೂನಲ್ಲಿ ನಡೆದ ಜೆಡಿಎಸ್ ಅತೃಪ್ತರ ಸಭೆಯಲ್ಲಿ ಪಕ್ಷದ ಹಿರಿಯರಾದ ಮಾತಂಡ ರಮೇಶ್, ಗಣೇಶ್ ನಂಜಪ್ಪ, ಕೋಲತಂಡ ಬೋಪಯ್ಯ, ಎಂ.ಪಿ. ಮುತ್ತಪ್ಪ, ಹರೀಶ್ ಪೆರಾಜೆ, ಯಾಕೂಬ್, ಬಿ.ಎ. ಗಣಪತಿ, ಕೆ.ಜಿ. ಹರೀಶ್, ಕೋಡಿ ಮೋಟಯ್ಯ, ಬಿ.ವೈ.ರಾಜೇಶ್, ಕಾಶಿ ಕಾವೇರಪ್ಪ, ಎಸ್.ಐ.ಮುನೀರ್ ಅಹಮ್ಮದ್, ವಿಶ್ವನಾಥ್, ಅಶ್ರಫ್ ಮತ್ತಿತರ ಪ್ರಮುಖರು ರಾಜಕೀಯವಾಗಿ ಎಂ.ಸಿ.ನಾಣಯ್ಯ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರು ಬದ್ಧರೆಂದು ಘೋಷಿಸಿದರು.

ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಬಿ.ಎ.ಜೀವಿಜಯ ಅವರು ಗೆಲುವು ಸಾಧಿಸಲಿದ್ದಾರೆ ಎನ್ನುವ ಬಗ್ಗೆ ಅತೀ ವಿಶ್ವಾಸದಲ್ಲಿರುವ ಜೆಡಿಎಸ್ ನ ರಾಜ್ಯ ಮುಖಂಡರು ಎಂ.ಸಿ.ನಾಣಯ್ಯ ಅವರನ್ನು ಕಡೆಗಣಿಸಿದ್ದಾರೆ. ಅಲ್ಲದೆ, ಪಕ್ಷ ನಿಷ್ಟರ ಬಗ್ಗೆ ಜೀವಿಜಯ ಅವರು ಅಸಡ್ಡೆ ತೋರುತ್ತಿರುವ ಕುರಿತು ವರಿಷ್ಟರ ಗಮನಕ್ಕೆ ತಂದಿದ್ದರೂ ಯಾವುದೇ ನಿರ್ಧಾರ ಕೈಗೊಳ್ಳುತ್ತಿಲ್ಲ. ಎಂ.ಸಿ.ನಾಣಯ್ಯ ಬಣದಲ್ಲಿ ಗುರುತಿಸಿಕೊಂಡಿರುವವರನ್ನು ಜೀವಿಜಯ ಅವರ ಪರವಾಗಿರುವ ಮುಖಂಡರುಗಳು ನಿರ್ಲಕ್ಷಿಸುತ್ತಿದ್ದು, ಇದು ಖಂಡನೀಯ.

ಜನತಾ ಪರಿವಾರದ ಹಿರಿಯ ಮುಖಂಡರಾದ ಜೆ.ಹೆಚ್. ಪಟೇಲ್, ರಾಮಕೃಷ್ಣ ಹೆಗಡೆ, ಹೆಚ್.ಡಿ. ದೇವೇಗೌಡರ ಸಮಕಾಲೀನರಾಗಿರುವ ಎಂ.ಸಿ. ನಾಣಯ್ಯ ಅವರನ್ನು ಇತ್ತೀಚಿನ ದಿನಗಳಲ್ಲಿ ಜೆಡಿಎಸ್ ನ ರಾಜ್ಯ ಮುಖಂಡರುಗಳು ನಿರ್ಲಕ್ಷಿಸುತ್ತಲೆ ಬಂದಿದ್ದಾರೆ. ರಾಜ್ಯದಲ್ಲಿ ಪಕ್ಷದ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿರುವ ನಾಣಯ್ಯ ಅವರ ಕಡೆಗಣನೆಯನ್ನು ನಮ್ಮಿಂದ ತಡೆಯಲು ಸಾಧ್ಯವಿಲ್ಲ ಎಂದು ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದರು. ನಾಣಯ್ಯ ಅವರು ನಡೆಯುವ ರಾಜಕೀಯ ಹಾದಿಯಲ್ಲೆ ನಾವು ಸಾಗಬೇಕಾಗಿದ್ದು, ಪಕ್ಷ ತೊರೆಯುವುದಕ್ಕು ಸಿದ್ಧರಾಗಿದ್ದೇವೆ ಎಂದರು. ಮುಂದಿನ ಹತ್ತು ದಿನಗಳಲ್ಲಿ ಜೆಡಿಎಸ್ ಅತೃಪ್ತರ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವ ಕುರಿತು ಸಭೆ ನಿರ್ಣಯ ಕೈಗೊಂಡಿತು.

ಚುನಾವಣೆ ಸಮೀಪಿಸುವ ಸಂದರ್ಭ ಕೊಡಗು ಜೆಡಿಎಸ್ ನ ಬಿ.ಎ.ಜೀವಿಜಯ ಸೇರಿದಂತೆ ಹಲವರು ಹೆಚ್ಚು ಚಟುವಟಿಕೆಯಿಂದ ರಾಜಕಾರಣದಲ್ಲಿ ತೊಡಗಿದ್ದರು. ಆದರೆ ಇದೀಗ ಪಕ್ಷದಲ್ಲಿ ಮೂಡಿರುವ ಒಡಕು ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯೆಂದು ಬಿಂಬಿಸಲಾಗಿರುವ ಬಿ.ಎ.ಜೀವಿಜಯ ಅವರ ಗೆಲುವಿನ ಕನಸಿಗೆ ತಣ್ಣೀರೆರಚುವ ಸಾಧ್ಯತೆಗಳಿದೆ ಎಂದು ತಟಸ್ಥರು ಅಭಿಪ್ರಾಯಪಡುತ್ತಿದ್ದಾರೆ.

See also  ರೈಲಿನಡಿಗೆ ಸಿಲುಕಿ ಚಹಾ ಮಾರುತ್ತಿದ್ದ ಯುವಕನ ಕಾಲು ಕಟ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು