News Kannada
Tuesday, October 04 2022

ಕರ್ನಾಟಕ

ರಸ್ತೆ ಸುರಕ್ಷತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ: ಎಸ್ಪಿ ಕೆ. ಅಣ್ಣಾಮಲೈ - 1 min read

Photo Credit :

ರಸ್ತೆ ಸುರಕ್ಷತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ: ಎಸ್ಪಿ ಕೆ. ಅಣ್ಣಾಮಲೈ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ 2017ರಲ್ಲಿ ಅಪಘಾತದಿಂದ ಮೃತಪಟ್ಟವರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿರುವುದು ಸಂತಸ ತಂದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ತಿಳಿಸಿದರು.

2017ರಲ್ಲಿ ರಸ್ತೆ ಅಪಘಾತದಲ್ಲಿ 181ರಷ್ಟು ಸಾವುಗಳು ಸಂಭವಿಸಿದೆ. ಇದು ಇತಿಹಾಸದಲ್ಲಿಯೇ ಕಡಿಮೆ ಪ್ರಮಾಣದ ಸಾವಾಗಿದ್ದು, ಇದರಿಂದ ರಸ್ತೆ ಸುರಕ್ಷತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿರುವುದು ವೇದ್ಯವಾಗುತ್ತದೆ ಎಂದು ಹೇಳಿದರು. ಸರಗಳ್ಳತನ ಪ್ರಕರಣಗಳು ಕಳೆದ ಹಲವು ವರ್ಷಗಳ ಹಿಂದಿನ ಹೊಲಿಕೆಗಿಂತ ಈ ವರ್ಷ ಗಣನೀಯವಾಗಿ ಇಳಿಮುಖ ಕಂಡಿದ್ದು, 4 ಪ್ರಕರಣಗಳಷ್ಟೇ ದಾಖಲಾಗಿದೆ ಎಂದು ಹೇಳಿದ ಅವರು, ಈ ಎಲ್ಲಾ ಯಶಸ್ವಿಗಳ ಸಂಪೂರ್ಣ ಹೊಣೆಗಾರಿಕೆಯನ್ನು ಪೊಲೀಸ್ ಇಲಾಖೆಯೇ ವಹಿಸಿಕೊಳ್ಳುವುದು ಸರಿಯಲ್ಲ. ಇದರಲ್ಲಿ ಸಾರ್ವಜನಿಕರ ಪಾತ್ರವೂ ಅನನ್ಯ ಎಂದರು.

ಇತ್ತೀಚಿನ ದಿನಗಳಲ್ಲಿ ನಡೆದ ಹಲವು ವಿಶೇಷ ಸಂದರ್ಭಗಳಲ್ಲಿ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜವಾಬ್ದಾರಿ ವಹಿಸಿಕೊಂಡು ಕರ್ತವ್ಯ ನಿರ್ವಹಿಸಿದ ಹಿಂದೂ ಹಾಗೂ ಮುಸ್ಲೀಂ ಸಂಘಟನೆಗಳು ಮತ್ತು ವಿವಿಧ ಸಂಘಟನೆಗಳ 47 ಮಂದಿಯನ್ನು ಗುರುತಿಸಲಾಗಿದ್ದು, ಅವರಿಗೆ ಇಲಾಖೆಯ ವತಿಯಿಂದ ಕೃತಜ್ಞತಾ ಪತ್ರ ನೀಡಲಾಗುವುದು. ವಿಶೇಷ ಸಂದರ್ಭದಲ್ಲಿ ಇಲಾಖೆಯ ವತಿಯಿಂದ ಅವರನ್ನು ಗೌರವಿಸಲಾಗುವುದು ಎಂದು ಹೇಳಿದರು.

ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎನ್ನಲಾದ ಪ್ರಕರಣವನ್ನು ಪೋಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೌರ್ಜನ್ಯಕ್ಕೊಳಗಾದ ಯುವತಿ ಪ್ರಾಂಶುಪಾಲರ ವಿರುದ್ದ ದೂರು ನೀಡಿದರೂ ಕ್ರಮಕೈಗೊಳ್ಳದ ಕಾಲೇಜಿನ ಪರವಾನಗಿ ನಿಷೇಧಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲು ಸಿದ್ದತೆ ನಡೆಸಲಾಗಿದೆ ಎಂದ ಅವರು, ಜಿಲ್ಲೆಯಲ್ಲಿ 2017ರ ವರ್ಷದಲ್ಲಿ ಸುಮಾರು 100 ಪೋಸ್ಕೋ ಪ್ರಕರಣಗಳು ದಾಖಲಾಗಿರುವುದು ದುರುದೃಷ್ಟಕರ. ಅದರಲ್ಲೂ ದೌರ್ಜನ್ಯಕ್ಕೊಳಗಾದ ಮಕ್ಕಳು ಬಡ ವರ್ಗದವರು ಮತ್ತು ಅವರ ಪೋಷಕರು ನಿರಕ್ಷಕರ ಕುಕ್ಷಿಗಳು ಎಂದರು.

ಇತ್ತೀಚಿನ ದಿನಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಶೇ.34ರಷ್ಟು ಫ್ಯಾಟ್ಲೀವರ್ ಶೇ.14ರಷ್ಟು ರಕ್ತದೊತ್ತಡ ಸೇರಿದಂತೆ ಹಲವು ಖಾಯಿಲೆಗಳಿಂದ ಬಳಲುತ್ತಿದ್ದು, ಅವರನ್ನು ದೈಹಿಕ ಮತ್ತು ಮಾನಸಿಕವಾಗಿ ಸಶಕ್ತಗೊಳಿಸಲು ಚಿಕ್ಕಮಗಳೂರು ನಗರಕ್ಕೆ ಟ್ರೆಡ್ಮೀಲ್, ವಾಕಿಂಗ್ಪಾಥ್, ಈಜುಕೊಳ ಸೇರಿದಂತೆ ಆಧುನಿಕ ಅಂಗಸಾಧನೆಯ ಸಲಕರಣೆಗಳನ್ನೊಳಗೊಂಡ ಆಧುನಿಕ ಓಫನ್ಹೇರ್ ಜಿಮ್ ನ ಮಂಜೂರು ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದ ಅವರು ಸರ್ಕಾರ ಮನವಿಗೆ ಪೂರಕವಾಗಿ ಸ್ಪಂದಿಸಿದೆ ಎಂದರು.

See also  ಕಾಸರಗೋಡಿನಲ್ಲಿ ನಾಲ್ಕು ಮಂದಿಗೆ ಎಚ್1 ಎನ್ 1 ಸೋಂಕು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

179
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು