News Kannada
Thursday, December 01 2022

ಕರ್ನಾಟಕ

ರಾಷ್ಟ್ರೀಯ ಕಾಡಿನ ಮಕ್ಕಳ ಹಬ್ಬಕ್ಕೆ ಚಾಲನೆ

Photo Credit :

ರಾಷ್ಟ್ರೀಯ ಕಾಡಿನ ಮಕ್ಕಳ ಹಬ್ಬಕ್ಕೆ ಚಾಲನೆ

ಮಡಿಕೇರಿ: ಮಡಿಕೇರಿ ಆಕಾಶವಾಣಿ ಕೇಂದ್ರ ಹಾಗೂ ತಂಜಾಪೂರಿನ ದಕ್ಷಿಣ ಭಾರತ ಸಾಂಸ್ಕೃತಿಕ ಕೇಂದ್ರದ ಸಹಯೋಗದಲ್ಲಿ ನಗರದ ಗಾಂಧಿ ಮೈದಾನದಲ್ಲಿ ಏರ್ಪಡಿಸಿರುವ 6ನೇ ವರ್ಷದ ಕಾಡಿನ ಮಕ್ಕಳ ಹಬ್ಬವನ್ನು ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನೀಲ್ ಸುಬ್ರಮಣಿ ಉದ್ಘಾಟಿಸಿದರು.

ನಗರಸಭಾಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಜಿಲ್ಲಾಧಿಕಾರಿ ಶ್ರೀವಿದ್ಯಾ, ಆಕಾಶವಾಣಿ ನಿಲಯ ನಿರ್ದೇಶಕರಾದ ಬಿ.ಎಂ.ರಾಘವೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಮೂರು ದಿನಗಳ ಕಾಲ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್, ಛತ್ತೀಸ್ ಗಡ್, ಅಸ್ಸಾಂ, ಒಡಿಸ್ಸಾ, ಜಾರ್ಖಂಡ್ ಮತ್ತು ಅರುಣಾಚಲ ಪ್ರದೇಶದ ಬುಡಕಟ್ಟು ಸಮುದಾಯಗಳ ಕಲಾವಿದರು ವಿಶಿಷ್ಟ ವಿಭಿನ್ನ ಕಲಾ ಪ್ರಕಾರಗಳನ್ನು ಪ್ರದರ್ಶಿಸುತ್ತಿದ್ದಾರೆ. ಈಶಾನ್ಯ ರಾಜ್ಯಗಳು, ಕರ್ನಾಟಕ ಮತ್ತು ಕೊಡಗಿನ ಅಂದಾಜು 350ಕ್ಕೂ ಹೆಚ್ಚಿನ ಕಲಾವಿದರು ಕಾಡಿನ ಮಕ್ಕಳ ಹಬ್ಬದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕಾಡಿನ ಮಕ್ಕಳ ಹಬ್ಬದಲ್ಲಿ ಕರ್ನಾಟಕದ ವಿವಿಧೆಡೆಗಳಲ್ಲಿನ ಹಕ್ಕಿ ಪಿಕ್ಕಿ ಸಮೂಹದ ಪರ್ಡಿ, ಸಿದ್ದಿ ನೃತ್ಯ, ತಂಬೂರಿ ಪದ, ಬುಡಕಟ್ಟು ಹಾಡು, ಮುಳ್ಳು ಕುಣಿತ, ಕೋರಲ್ ನೃತ್ಯ ಮತ್ತು ಗೂರ್ಕನ ನೃತ್ಯ ಸೇರಿದಂತೆ ಆರು ತಂಡಗಳು ಹಾಗೂ ಕೊಡಗಿನ ಬುಡಕಟ್ಟು ಸಮುದಾಯಗಳಾದ ಬೆಟ್ಟ ಕುರುಬ, ಜೇನು ಕುರುಬ, ಮಲೆ ಕುಡಿಯ, ಸೋಲಿಗ, ಯರವ ಸಮುದಾಯದ ಕಲಾಪ್ರಕಾರ, ಡೊಳ್ಳು ಕುಣಿತ, ಪರೆಕೊಟ್ಟ್ ಕಾರ್ಯಕ್ರಮಗಳು ಮೂಡಿ ಬರಲಿದೆ. ಇದರೊಂದಿಗೆ ಕೊಡಗಿನ ಸಾಂಪ್ರದಾಯಿಕ ಬಾಳೋಪಾಟ್, ಉಮ್ಮತ್ತಾಟ್, ಕೊಡವ ವಾಲಗ ಮೊದಲಾದವುಗಳ ಪ್ರದರ್ಶನ ಕಲಾಭಿಮಾನಿಗಳ ಗಮನ ಸೆಳೆಯುತ್ತಿದೆ.

See also  ವಿಧಾನಸಭಾ ಚುನಾವಣೆ: ಅಗತ್ಯ ಸಿದ್ಧತೆಗೆ ಶಿವಯೋಗಿ ಕಳಸದ ನಿರ್ದೇಶನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು