News Kannada
Wednesday, November 30 2022

ಕರ್ನಾಟಕ

ಬಂಡೀಪುರದಲ್ಲಿ ಪ್ರವಾಸಿಗರಿಗೆ ಆಟ.. ಪ್ರಾಣಿಗಳಿಗೆ ಸಂಕಟ… - 1 min read

Photo Credit :

ಬಂಡೀಪುರದಲ್ಲಿ ಪ್ರವಾಸಿಗರಿಗೆ ಆಟ.. ಪ್ರಾಣಿಗಳಿಗೆ ಸಂಕಟ...

ಗುಂಡ್ಲುಪೇಟೆ: ವಾರಾಂತ್ಯದಲ್ಲಿ ಬಂಡೀಪುರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಸಫಾರಿ ವೇಳೆ ವನ್ಯ ಪ್ರಾಣಿಗಳನ್ನು ನೋಡಿ ಸಂಭ್ರಮಿಸುತ್ತಿದ್ದಾರೆ. ಈ ಪ್ರಾಣಿಪ್ರಿಯರ ಸಂಭ್ರಮ ವನ್ಯ ಪ್ರಾಣಿಗಳಿಗೆ ಹಿಂಸೆಯಾಗಿ ಪರಿಣಮಿಸುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ.

ಇತ್ತೀಚೆಗೆ ಸಫಾರಿಗೆ ತೆರಳುವ ಮಂದಿ ವನ್ಯ ಪ್ರಾಣಿಗಳನ್ನು ನೋಡಿ ಕೇಕೆ ಹಾಕುವುದು, ಕೂಗಾಡುವುದು ಹೀಗೆ ವಿಚಿತ್ರವಾಗಿ ವರ್ತಿಸುತ್ತಿರುವುದರಿಂದಾಗಿ ಪ್ರಾಣಿಗಳು ಭಯಪಡುವಂತಾಗಿದೆ. ಅಷ್ಟೇ ಅಲ್ಲ ಸದ್ಯದ ಸ್ಥಿತಿ ಪ್ರವಾಸಿಗರಿಗೆ ಚೆಲ್ಲಾಟ ಪ್ರಾಣಿಗಳಿಗೆ ಸಂಕಟ ಎನ್ನುವಂತಾಗಿದೆ.

ಬಂಡೀಪುರದಲ್ಲಿ ಅರಣ್ಯ ಇಲಾಖೆ ವತಿಯಿಂದಲೇ ಪ್ರವಾಸಿಗರಿಗೆ ಸಫಾರಿ ವ್ಯವಸ್ಥೆ ಮಾಡಲಾಗಿದ್ದು, ಪ್ರತಿನಿತ್ಯ ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ನಡೆಯುತ್ತದೆ. ಈ ಸಫಾರಿಗೆ ನೂರಾರು ಮಂದಿ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಪಡೆದು ಸಾಗುತ್ತಾರೆ. ಹೀಗೆ ತೆರಳುವ ಪ್ರವಾಸಿಗರು ಪ್ರಾಣಿಗಳನ್ನು ಕಂಡಾಗ ಕುಣಿದು ಕುಪ್ಪಳಿಸುತ್ತಾರೆ. ಕೂಗಾಡುತ್ತಾರೆ. ಜತೆಗೆ ಸಫಾರಿಗೆ ಬಳಸುವ ವಾಹನಗಳನ್ನು ಚಾಲಕರು ನಿಯಮ ಉಲ್ಲಂಘಿಸಿ ಹೇಗೆಂದರೆ ಹಾಗೆ ಚಾಲನೆ ಮಾಡುವುದು ಕೂಡ ನಡೆಯುತ್ತಿದ್ದು, ಇದು ಕೆಲವು ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.

ಇತ್ತೀಚೆಗೆ ಸಫಾರಿ ತೆರಳಿದ ಸಂದರ್ಭ ಜಂಗಲ್ ಲಾಡ್ಜ್ಗೆ ಸೇರಿದ ಕೆಎ 10-6172 ವಾಹನದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಪ್ರವಾಸಿಗರು ಹುಲಿಯನ್ನು ಕಂಡು ಪುಳಕಿತರಾಗಿ ಕೂಗಾಡುತ್ತಾ ವಾಹನದ ಹೊರಗೆ ದೇಹವನ್ನು ಚಾಚಿ ಕ್ಯಾಮರಾದಲ್ಲಿ ಹುಲಿಯನ್ನು ಸೆರೆ ಹಿಡಿದಿದ್ದಾರೆ.

ಈ ವೇಳೆ ವಾಹನವನ್ನು ಚಾಲಕ ವೇಗವಾಗಿ ಚಾಲಿಸಿದ್ದಾನೆ. ಇದರಿಂದ ಬೆದರಿದ ಹುಲಿ ದಿಕ್ಕಾಪಾಲಾಗಿ ಓಡಿದೆ ಎಂಬುದು ಪ್ರತ್ಯಕ್ಷದರ್ಶಿಗಳ ಆರೋಪವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಂಡೀಪುರ ಹುಲಿ ಯೋಜನೆಯ ನಿರ್ದೇಶಕರಾದ ಅಂಬಾಡಿ ಮಾಧವ ಅವರು ಸಫಾರಿ ಸಂದರ್ಭ ಚಾಲಕರು ತಮಗಿಷ್ಟ ಬಂದಂತೆ ವರ್ತಿಸಿ ಕಾಡಿನ ನೀತಿ-ನಿಯಮಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಪ್ರಕರಣ ಗಮನಕ್ಕೆ ಬಂದಿದ್ದು, ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

See also  ಚಾಮರಾಜನಗರದಲ್ಲಿ ಸೋಂಕಿತ ಗರ್ಭಿಣಿಗೆ ಯಶಸ್ವಿ ಹೆರಿಗೆ: ತಾಯಿ ಮಗು ಕ್ಷೇಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು