News Kannada
Wednesday, November 30 2022

ಕರ್ನಾಟಕ

ಸೌಹಾರ್ದತೆಗಾಗಿ ಜ.30ರಂದು ರಾಜ್ಯಾದ್ಯಂತ ಮಾನವ ಸರಪಳಿ - 1 min read

Photo Credit :

ಸೌಹಾರ್ದತೆಗಾಗಿ ಜ.30ರಂದು ರಾಜ್ಯಾದ್ಯಂತ ಮಾನವ ಸರಪಳಿ

ಮಡಿಕೇರಿ: ರಾಷ್ಟ್ರದ ಶಕ್ತಿ ಮತ್ತು ಸೌಂದರ್ಯವಾಗಿರುವ ವಿಭಿನ್ನತೆಯ ಮೇಲಿನ ದಾಳಿ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಸ್ವಾತಂತ್ರ್ಯವನ್ನು ಕಸಿಯುವ ಪ್ರಯತ್ನಗಳಾಗುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸೌಹಾರ್ದತೆಯ ಸಂದೇಶ ಸಾರುವ ಅಗತ್ಯವಿರುವುದರಿಂದ ‘ಮಾನವ ಸರಪಳಿ’ ರಚಿಸುವ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಸೌಹಾರ್ದ ಕರ್ನಾಟಕ ಸಂಘಟನೆ ವತಿಯಿಂದ ಜನವರಿ 30ರಂದು ನಡೆಸಲಾಗುವುದೆಂದು ಸಂಘಟನೆಯ ಜಿಲ್ಲಾ ಸಮಿತಿ ಸಂಚಾಲಕರಾದ ಡಾ.ಇ.ರ. ದುರ್ಗಾಪ್ರಸಾದ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘಟನೆಯಿಂದ ರಾಜ್ಯ ವ್ಯಾಪಿ ಏಕಕಾಲಕ್ಕೆ ಮಾನವ ಸರಪಳಿ ರಚಿಸಿ ಸೌಹಾರ್ದತೆಯ ಸಂದೇಶ ಸಾರಲಾಗುತ್ತದೆ. ಅದರ ಭಾಗವಾಗಿ ಜಿಲ್ಲೆಯ ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ ಮತ್ತು ಕುಶಾಲನಗರದಲ್ಲಿ ಜ.30ರಂದು ಸಂಜೆ 4 ಗಂಟೆಗೆ ಸೌಹಾರ್ದ ಸಮಾಜ ನಿರ್ಮಾಣದಲ್ಲಿ ನಂಬಿಕೆಯನ್ನು ಹೊಂದಿದ ಪ್ರತಿಯೊಬ್ಬ ನಾಗರಿಕರ ಸಹಕಾರದೊಂದಿಗೆ ಮಾನವ ಸರಪಳಿ ರಚಿಸಲಾಗುತ್ತದೆ ಎಂದರು.

ಭಾರತವೆನ್ನುವುದು ವಿಭಿನ್ನ ಭಾಷೆ, ಧರ್ಮ, ಸಂಸ್ಕೃತಿ, ಮತಾಚರಣೆ, ಆಹಾರ ಪದ್ಧತಿಯನ್ನು ಹೊಂದಿರುವ ಸುಂದರ ನಾಡು. ಹೀಗಿದ್ದೂ ಇತ್ತೀಚೆಗೆ ತಾವು ಹೇಳಿದಂತೆ ಆಹಾರ ಪದ್ಧತಿಯನ್ನು ಹೊಂದುವಂತೆ, ಹೀಗೆ ಬದುಕುವಂತೆ ತಾಕೀತು ಮಾಡುವ ಮೂಲಕ ಸಂವಿಧಾನದಿಂದ ಕೊಡಮಾಡಿರುವ ಬದುಕಿನ ಹಕ್ಕನ್ನೇ ಕಸಿಯುವ ಆತಂಕಕಾರಿ ಬೆಳವಣಿಗೆ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸೌಹಾರ್ದತೆಯ, ಪರಸ್ಪರ ಗೌರವ ಮತ್ತು ವಿಶ್ವಾಸದ, ಸಹನೆಯ ಸಂದೇಶವನ್ನು ನಾಡಿನುದ್ದಕ್ಕೂ ಪಸರಿಸುವ ಉದ್ದೇಶದಿಂದ ಸೌಹಾರ್ದತೆಯ ಕರ್ನಾಟಕ ಸಂಘಟನೆ ರಚನೆಯಾಗಿದೆ ಎಂದು ತಿಳಿಸಿದ ಡಾ.ದುರ್ಗಾಪ್ರಸಾದ್ ಬಹುತ್ವದ ಶಕ್ತಿಯನ್ನು ಬಲಪಡಿಸಲು ಸಮಾಜದ ಪ್ರತಿಯೊಬ್ಬರು ಒಂದಾಗಬೇಕಾಗಿದೆ ಎಂದು ಕರೆ ನೀಡಿದರು.

ಸಂಘಟನೆಯ ಸದಸ್ಯರಾದ ಎಸ್.ಐ.ಮುನೀರ್ ಅಹಮ್ಮದ್,  ಸಂಘಟನೆಯ ಮಡಿಕೇರಿ ತಾಲ್ಲೂಕು ಸಂಚಾಲಕರಾದ ಬಿ.ಎ. ಷಂಶುದ್ದೀನ್, ಮತ್ತೋರ್ವ ತಾಲೂಕು ಸಂಚಾಲಕ ಕೆ.ಟಿ.ಬೇಬಿ ಮ್ಯಾಥ್ಯು, ವೀರಾಜಪೇಟೆ ತಾಲೂಕು ಸಂಚಾಲಕರಾದ ಸಂಕೇತ್ ಪೂವಯ್ಯ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

See also  ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರಲ್ಲಿ ನಿಗಮ ಸ್ಥಾಪನೆ ಮಾಡಲಾಗುವುದು : ಸಚಿವ ಸುನೀಲ್ ಕುಮಾರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು