News Kannada
Saturday, December 03 2022

ಕರ್ನಾಟಕ

ಕಾರವಾರ: ಉರುಳಿದ ಅಣುತ್ಯಾಜ್ಯ ಸಾಗಿಸುವ ಖಾಲಿ ಕಂಟೆನರ್

Photo Credit :

ಕಾರವಾರ: ಉರುಳಿದ ಅಣುತ್ಯಾಜ್ಯ ಸಾಗಿಸುವ ಖಾಲಿ ಕಂಟೆನರ್

ಕಾರವಾರ: ಅಣು ತ್ಯಾಜ್ಯಗಳನ್ನು ಸಾಗಿಸುವ ಭಾರಿ ವಾಹನವೊಂದು ತಾಲೂಕಿನ ಬೋಳೆ ಗ್ರಾಮದಲ್ಲಿ ಉರುಳಿಬಿದ್ದ ಪರಿಣಾಮ ಸ್ಥಳೀಯರಲ್ಲಿ ಆತಂಕಕ್ಕೆ ಒಳಗಾದ ಘಟನೆ ಬುಧವಾರ ಸಂಭಿವಿಸಿದೆ.

ಚೆನ್ನೈನಿಂದ ಕಾರವಾರ ಕೈಗಾ ಮಾರ್ಗವಾಗಿ ಅಣುವಿದ್ಯುತ್ ಸ್ಥಾವರಕ್ಕೆ ತೆರಳುತ್ತಿದ್ದ ಎರಡು ಭಾರಿ ವಾಹನಗಳ ಪೈಕಿ ಒಂದು ವಾಹನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಉರುಳಿ ಬಿದ್ದಿದೆ. ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ತೀವ್ರ ಆತಂಕಗೊಂಡಿದ್ದರು. ಅಲ್ಲದೆ ಕೂಡಲೇ ಸಂಬಂಧಪಟ್ಟ ಪೊಲೀಸರಿಗೆ ಹಾಗೂ ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಅಷ್ಟರಲ್ಲಿಯೇ ಆಗಮಿಸಿದ ಕೈಗಾ ಅಣುಸ್ಥಾವರದ ಅಧಿಕಾರಿಗಳು ವಾಹನದಲ್ಲಿದ್ದ ಕಂಟೆನರ್ ಖಾಲಿಯಾಗಿದ್ದು ಯಾವುದೇ ಅಪಾಯವಿಲ್ಲ ಎಂದು ತಿಳಿಸಿದರು.

ಆದರೆ ಗ್ರಾಮಸ್ಥರು ಈ ವೇಳೆ ಕೆಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಾರವಾರ ಕೈಗಾ ರಸ್ತೆಯಲ್ಲಿ ಎರಡನೇ ಭಾರಿ ಈ ರೀತಿ ಅವಘಡ ಸಂಭವಿಸುತ್ತಿದೆ. ಒಂದು ವೇಳೆ ಅಣು ತ್ಯಾಜ್ಯ ತುಂಬಿದ ಕಂಟೇನರ್ ಈ ರೀತಿ ಅವಘಡದಲ್ಲಿ ಬಿದ್ದರೇ ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ಸಾಗಾಟ ಮಾಡುವ ವೇಳೆ ಇನ್ನು ಹೆಚ್ಚಿನ ಭದ್ರತೆಯೊಂದಿಗೆ ಸ್ಥಳೀಯರಿಗೆ ಯಾವುದೇ ತೊಂದರೆಯಾಗದಂತೆ ಜಾಗರೂಕತೆ ವಹಿಸಬೇಕು ಎಂದು ಆಗ್ರಹಿಸಿದರು.

ಕೈಗಾ ಅಧಿಕಾರಿಗಳಿಂದ ಸ್ಪಷ್ಟನೆ: ಖಾಲಿ ಫ್ಲಾಸ್ಕ್ ಹೊತ್ತಿದ್ದ ಎರಡು ವಾಹನಗಳು ಕಾರವಾರದಿಂದ ಕೈಗಾಕ್ಕೆ ಬರುತ್ತಿದ್ದ ಸಮಯದಲ್ಲಿ ಒಂದು ವಾಹನದ ಟ್ರೈಲರ್ ಮೂಲ ವಾಹನದಿಂದ ಸಂಪರ್ಕ ಕಡಿತಗೊಂಡು ರಸ್ತೆಯ ಬಲಬದಿಯಲ್ಲಿ ಕೆಳಗೆ ಬಿದ್ದಿದೆ. ಈ ಸಂದರ್ಭದಲ್ಲಿ ಯಾವುದೇ ರೀತಿಯ ಗಾಯವಾಗಲಿ ಅಥವಾ ವಾಹನ ಸಂಚಾರಕ್ಕೆ ಅಡಚಣೆ ಆಗಿರುವದಿಲ್ಲ. ಮತ್ತೊಂದು ವಾಹನವು ಕೈಗಾಗೆ ಸುರಕ್ಷಿತವಾಗಿ ತಲುಪಿರುತ್ತದೆ. ಈ ಘಟನೆಯಿಂದ ಯಾವುದೇ ವಿಕಿರಣಯುತ ಪರಿಣಾಮವಿಲ್ಲ ಮತ್ತು ಪರಿಸರವು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಕೈಗಾ ಅಣುವಿಕಿರಣ ಕೇಂದ್ರದ ನಿರ್ದೇಶಕ ಸಂಜಯ ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

See also  ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು