News Kannada
Thursday, December 08 2022

ಕರ್ನಾಟಕ

ಬಹಿರ್ದೆಸೆಗೆ ಕುಳಿತಿದ್ದ ಗರ್ಭಿಣಿ ಮೇಲೆ ಕರಡಿ ದಾಳಿ: ಸಾವು

Photo Credit :

ಬಹಿರ್ದೆಸೆಗೆ ಕುಳಿತಿದ್ದ ಗರ್ಭಿಣಿ ಮೇಲೆ ಕರಡಿ ದಾಳಿ: ಸಾವು

ರಾಮನಗರ: ಬೆಳಿಗ್ಗೆ 5ಕ್ಕೆ ಬಹಿರ್ದೆಸೆಗೆ ತೆರಳಿದ್ದ ಗರ್ಭಿಣಿ ಮೇಲೆ ಕರಡಿ ದಾಳಿ ಕೊಂದು ಹಾಕಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಚೌಕಸಂದ್ರ ಗ್ರಾಮದಲ್ಲಿ ನಡೆದಿದೆ.

ಚೌಕಸಂದ್ರ ಗ್ರಾಮದ ಪ್ರದೀಪ್ ಕುಮಾರ್ ನಾಯಕ್ ಎಂಬವರ ಪತ್ನಿ ಸುಮಾಭಾಯಿ(25) ಕರಡಿ ದಾಳಿಗೆ ಮೃತರಾದವರು.ಬೆಳಿಗ್ಗೆ ಬಹಿರ್ದೆಸೆಗೆ ಕುಳಿತಿದ್ದಾಗ ಕರಡಿ ದಾಳಿ ನಡೆಸಿದ್ದು ಕುತ್ತಿಗೆ ಭಾಗದಲ್ಲಿ ಕಚ್ಚಿ, ಕೊರಳನ್ನು ಪರಚಿದೆ.

ಇನ್ನೂ ಕರಡಿ ಕುತ್ತಿಗೆ ಭಾಗ ಕಚ್ಚಿದ ಪರಿಣಾಮ ತೀವ್ರ ರಕ್ತಸ್ರಾವದಿಂದ ಸುಮಾಭಾಯಿ ಸಾವನ್ನಪ್ಪಿದ್ದಾರೆ. ಸುಮಭಾಯಿಗೆ ಈಗಾಗಲೇ ಒಂದು ಗಂಡು ಮಗುವಿದ್ದು, ಗರ್ಭಿಣಿಯಾಗಿದ್ದರು. ಇನ್ನೂ ಸುಮಭಾಯಿಯನ್ನು ಕಂಡ ಗ್ರಾಮಸ್ಥರು ಚಿರತೆ ದಾಳಿಯಿಂದ ಸಾವನ್ನಪ್ಪಿದ್ದಾಳೆ ಎಂದುಕೊಂಡಿದ್ದರು. ಆದರೆ ಕರಡಿ ಕುತ್ತಿಗೆ ಭಾಗದಲ್ಲಿ ಕಚ್ಚಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಕನಕಪುರ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕರಡಿ ದಾಳಿಯಿಂದ ಆಗಿರುವ ಸಾವು ಎಂದು ದೃಢಪಡಿಸಿದ್ದಾರೆ. ಕನಕಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

 

See also  ಮೈಕ್ರೋ ಫೈನಾನ್ಸ್‍ಗಳ ವಿರುದ್ಧ ನ.18ರಂದು ವೀರಾಜಪೇಟೆಯಲ್ಲಿ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು