News Kannada
Saturday, November 26 2022

ಕರ್ನಾಟಕ

ಅಭಿವೃದ್ಧಿಯಲ್ಲಿ ಸಾಂಸ್ಕೃತಿಕವಾಗಿ ಬೆಳೆದರೆ ಸೌಹಾರ್ದತೆ: ಸಚಿವ ರೇವಣ್ಣ - 1 min read

Photo Credit :

ಅಭಿವೃದ್ಧಿಯಲ್ಲಿ ಸಾಂಸ್ಕೃತಿಕವಾಗಿ ಬೆಳೆದರೆ ಸೌಹಾರ್ದತೆ: ಸಚಿವ ರೇವಣ್ಣ

ಕಾಸರಗೋಡು: ರಾಜಕೀಯವಾಗಿ ಒಂದು ಪ್ರದೇಶದ ರಸ್ತೆ, ನೀರು, ಮೂಲಭೂತ ಸೌಲಭ್ಯವಾದರೆ ಅಭಿವೃದ್ಧಿಯಲ್ಲಿ ಸಾಂಸ್ಕೃತಿಕವಾಗಿ ಬೆಳೆದರೆ ಮಾತ್ರ ನೆಮ್ಮದಿ, ಸೌಹಾರ್ದತೆ, ಸಹಬಾಳ್ವೆ ಬೆಳೆಯಬೇಕು ಎಂದು ಕರ್ನಾಟಕ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕವು ಕೇರಳ ರಾಜ್ಯ ಬ್ಯಾರಿ ಫೆಡರೇಶನ್ ಸಹಕಾರದೊಂದಿಗೆ ಗುರುವಾರ ಮಂಜೇಶ್ವರದ ರಾಷ್ಟ್ರಕವಿ ಗೋವಿಂದ ಪೈ ನಿವಾಸ ಗಿಳಿವಿಂಡುವಿನಲ್ಲಿ ಆಯೋಜಿಸಿದ್ದ “ಕನ್ನಡ, ಬ್ಯಾರಿ, ತುಳು ಜಾನಪದ ಸಮ್ಮಿಲನ” ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಇಂದು ಸಮಾಜ, ಕುಟುಂಬ ವ್ಯವಸ್ಥೆಯಲ್ಲಿ ಸಂಬಂಧ, ಸೌಹಾರ್ದತೆಗಳು ನಶಿಸುತ್ತಿರುವುದು ಗಂಭೀರ ವಿಷಯ. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ತಳಹದಿಯ ಪುನಶ್ಚೇತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಪರಿಣಾಮಕಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೇರಳ ರಾಜ್ಯ ಬ್ಯಾರಿ ಫೆಡರೇಶನ್ ಅಧ್ಯಕ್ಷ ಯು.ಕೆ.ಸೈಫುಲ್ಲಾ ತಂಙಳ್ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ಅರಣ್ಯ, ವಸತಿ ಮತ್ತು ವಿಹಾರಧಾಮ ನಿಗಮದ ಅಧ್ಯಕ್ಷ ಎ.ಎನ್.ಮಹೇಶ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕರಂಬಾರ್ ಮೊಹಮ್ಮದ್, ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷ ಎ.ಕೆ.ಎಂ.ಅಶ್ರಫ್, ಸದಸ್ಯ ಕೆ.ಆರ್.ಜಯಾನಂದ, ಕೇರಳ ಪಾರ್ತಿಸುಬ್ಬ ಕಲಾಕ್ಷೇತ್ರದ ಕಾರ್ಯದರ್ಶಿ ಸಂಕಬೈಲು ಸತೀಶ ಅಡಪ, ಮಂಜೇಶ್ವರ ಮರ್ಸಿ ಚರ್ಚ್ ಉಪಾಧ್ಯಕ್ಷೆ ಜೀನ್ ಲವೀನಾ ಮೊಮತೇರೋ, ಗಿಳಿವಿಂಡು ಟ್ರಸ್ಟ್ ಸದಸ್ಯ ಎಂ.ಜೆ.ಕಿಣಿ ಉಪಸ್ಥಿತರಿದ್ದ ರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದ್ಯರುಗಳಾದ ಕೆ.ಎಂ.ಶೆರೀಫ್, ಹುಸೈನ್ ಕಾಟಿಪಳ್ಳ, ಹಸನಬ್ಬ ಮೂಡಬಿದ್ರೆ, ಬಶೀರ್ ಬೈಕಂಪಾಡಿ, ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಕಾರ್ಯದರ್ಶಿ ಲಕ್ಷ್ಮಣ ಪ್ರಭು ಕುಂಬಳೆ ಮೊದಲಾದವರು ಉಪಸ್ಥಿತರಿದ್ದರು.

ರಾಜ್ಯ ಕಲೋತ್ಸವದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಎ ಗ್ರೇಡ್ ನೊಂದಿಗೆ ವಿಜೇತರಾದ ರಕ್ಷಾ ಕಾಮತ್ ಚೇವರು, ಬಾಲ ಯಕ್ಷಗಾನ ಕಲಾವಿದೆ ಉಪಾಸನಾ ಪಂಜರಿಕೆ, ಸ್ವಸ್ತಿಕ್ ಶರ್ಮಾ, ಚಿನ್ಮಯಕೃಷ್ಣ ಕಡಂದೇಲು, ಸಮನ್ವಿತಾ ಗಣೇಶ್ ಕಾಸರಗೊಡು, ಸರಿತಾ ಮಲ್ಲರನ್ನು ಅಭಿನಂದಿಸಲಾಯಿತು.

ಬೆಂಗಳೂರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಎರಡು ವೋಲ್ವೋ ಬಸ್ಸುಗಳನ್ನು ಶೀಘ್ರ ಒದಗಿಸಲಾಗುವುದು. ಈ ಬಗ್ಗೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು, ಪ್ರಯಾಣಿಕರ ಬೆಂಬಲವಿದ್ದಲ್ಲಿ ಅಗತ್ಯ ಸಂಚಾರ ಮಂಜೂರುಗೊಳಿಸಲಾಗುವುದು ಎಂದು ಸಚಿವ ರೇವಣ್ಣ ಭರವಸೆ ನೀಡಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡ ಯುವಕರಿಗೆ ಸಾಹಿತ್ಯ ಕಮ್ಮಟ ನಡೆಸಲು ಅನುದಾನ ಕೇಳಿದ್ದಾರೆ. ಸರಕಾರದಿಂದ ಹತ್ತು ಲಕ್ಷ ರೂ. ನೀಡುವ ಭರವಸೆಯನ್ನು ಸಚಿವರು ನೀಡಿದ್ದಾರೆ

See also  ನಟ ಚೇತನ್ ವಿರುದ್ಧ ದೂರು ನೀಡಿದ್ದೇಕೆ?
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು