News Kannada
Thursday, December 08 2022

ಕರ್ನಾಟಕ

ಬಾಳೆತೋಟವನ್ನು ನಾಶ ಮಾಡಿದ ಕಾಡಾನೆಗಳು!

Photo Credit :

ಬಾಳೆತೋಟವನ್ನು ನಾಶ ಮಾಡಿದ ಕಾಡಾನೆಗಳು!

ಗುಂಡ್ಲುಪೇಟೆ: ಬಂಡೀಪುರ ಅರಣ್ಯ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಶುರುವಾಗಿದ್ದು, ಆಹಾರವನ್ನು ಅರಸಿಕೊಂಡು ಅರಣ್ಯದಿಂದ ನೇರವಾಗಿ ರೈತರ ಜಮೀನಿನತ್ತ ಬರುತ್ತಿದ್ದು ಫಸಲನ್ನು ತಿಂದು, ತುಳಿದು ಹಾಳುಗೆಡುತ್ತಿದೆ.

ಇದೀಗ ತಾಲ್ಲೂಕಿನ ಶ್ರೀಕಂಠಪುರ ಗ್ರಾಮದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಬಾಳೆ ತೋಟಗಳನ್ನೇ ಗುರಿಯಾಗಿಟ್ಟುಕೊಂಡು ದಾಳಿ ಮಾಡಿದ್ದು, ಕಷ್ಟಪಟ್ಟು ಬೆಳೆಸಿದ್ದ ಬಾಳೆ ಗೊನೆ ಫಸಲು ಸಂಪೂರ್ಣ ನಾಶವಾಗಿದೆ. ಸಾಲ ಮಾಡಿ ಬಾಳೆ ಬೆಳೆದಿದ್ದ ರೈತ ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.

ರೈತ ಮಹದೇವಪ್ಪ ಎಂಬುವವರು ಕಾಡಾನೆ ದಾಳಿಯಿಂದ ಫಸಲನ್ನು ಕಳೆದುಕೊಂಡವರಾಗಿದ್ದಾರೆ. ಇವರು ಸುಮಾರು ಆರುನೂರುಕ್ಕೂ ಹೆಚ್ಚು ಬಾಳೆ ಗಿಡವನ್ನು ನೆಟ್ಟಿದ್ದು ಅವು ಬೆಳೆದು ಗೊನೆಬಿಟ್ಟಿದ್ದವು. ಆದರೆ ಅರಣ್ಯದಲ್ಲಿದ್ದ ಕಾಡಾನೆಗಳು ಓಂಕಾರ್ ಅರಣ್ಯ ವಲಯದ ಕಾಡಂಚಿನ ಮೂಲಕ ಜಮೀನಿಗೆ ಬಂದು ತಂತಿ ಬೇಲಿ ಅಳವಡಿಸಿದ್ದರೂ ಅದನ್ನು ನಾಶಪಡಿಸಿ ಹಿಂಡು ಸಹಿತ ಬಾಳೆತೋಟಕ್ಕೆ ನುಗ್ಗಿವೆ.

ಅಲ್ಲದೆ ಎರಡು ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಗೊನೆಬಿಟ್ಟಿದ್ದ ಬಾಳೆಯನ್ನು ತಿಂದು, ತುಳಿದು ನಾಶಪಡಿಸಿವೆ.

ಇದರಿಂದ ಲಕ್ಷಾಂತರ ರೂಪಾಯಿಗಳ ಬೆಳೆ ನಾಶವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ಯಾವುದೇ ಅಧಿಕಾರಿಯೂ ಸ್ಥಳಕ್ಕೆ ಆಗಮಿಸಿಲ್ಲ ಎಂದು ರೈತ ಮಹದೇವಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಕಾಡಾನೆಗಳ ದಾಳಿ ನಿರಂತರವಾಗಿ ನಡೆಯುತ್ತಿದ್ದರೂ ಅರಣ್ಯ ಇಲಾಖೆಯವರು ಇವುಗಳ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಕೈಗೊಂಡಿಲ್ಲದಿರುವುದು ಈ ವ್ಯಾಪ್ತಿಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

See also  ಸಿದ್ದಾರ್ಥ್ ಗೆ ರಾಜಕಾರಣಿಯೊಬ್ಬರ ಕಿರುಕುಳವಿತ್ತು: ಎಸ್.ಆರ್.ಹಿರೇಮಠ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು