News Kannada
Friday, December 09 2022

ಕರ್ನಾಟಕ

ಸಪ್ತಪದಿ ತುಳಿದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಂಧ ಜೋಡಿ

Photo Credit :

ಸಪ್ತಪದಿ ತುಳಿದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಂಧ ಜೋಡಿ

ಮಾಗಡಿ: ತಾಲ್ಲೂಕಿನ ಸೋಲೂರು ಹೋಬಳಿಯ ಮುಮ್ಮೇನಹಳ್ಳಿ ಗ್ರಾಮದ ಅಂಧ ನಾಗರತ್ನ ಹಾಗೂ ಮೈಸೂರಿನ ಭೀಮಣ್ಣ ಭಾನುವಾರ ಮಾಗಡಿ ಶ್ರೀರಂಗನ ಸನ್ನಿಧಿಯಲ್ಲಿ ಸಪ್ತಪದಿ ತುಳಿದು ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ನವ ವಧು ನಾಗರತ್ನ ಬೇಸಿಕ್ ಕಂಪ್ಯೂಟರ್ ಮುಗಿಸಿದ್ದು, ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ವರ ಭೀಮಣ್ಣ ಗಾರ್ಮೆಂಟ್ಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂಧಳಾಗಿದ್ದ ನಾಗರತ್ನ ಉದ್ಯೋಗ ನಿರ್ವಹಿಸಲು ಪ್ರತಿದಿನ ಬಸ್ಸಿನಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಈ ಸಮಯದಲ್ಲಿ ಅಂಧ ಭೀಮಣ್ಣನ ಪರಿಚಯವಾಗಿತ್ತು.

ಇವರಿಬ್ಬರು ವಿವಾಹ ಮಾಡಿಕೊಳ್ಳುವ ವಿಷಯವಾಗಿ ಸ್ನೇಹಿತರು ಮಧ್ಯಸ್ಥಿಕೆ ವಹಿಸಿದ್ದು, ಇಬ್ಬರ ಮನೆಯಲ್ಲಿಯೂ ವಿಷಯ ತಿಳಿಸಿ ಸಂಪ್ರದಾಯದಂತೆ ವಧುವನ್ನು ನೋಡುವ ಕಾರ್ಯ ಮುಗಿಸಿ ಅಂಧರಿಬ್ಬರೂ ಮದುವೆಯಾಗುವ ಹಂತಕ್ಕೆ ಬಂದಿದ್ದು, ಭಾನುವಾರ ರಂಗನಾಥಸ್ವಾಮಿಯ ಸನ್ನಿಧಿಯಲ್ಲಿ ದಂಪತಿಗಳು ಹೊಸ ಜೀವನಕ್ಕೆ ಕಾಲಿಟ್ಟರು.

ನವವಧು ನಾಗರತ್ನ ಮಾತನಾಡಿ, ತಾನು ಈಗ ಖಾಸಗಿ ಕಂಪನಿಯೊಂದರಲ್ಲಿ ಕಂಪ್ಯೂಟರ್ ಅಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ವಿಕಲಚೇತನ ಕೋಟಾದಲ್ಲಿ ಸರ್ಕಾರಿ ಕೆಲಸಕ್ಕೆ ಅರ್ಜಿಯನ್ನು ಸಲ್ಲಿಸಿದ್ದೇನೆ. ಕೆಲವೇ ದಿನಗಳಲ್ಲಿ ಸರ್ಕಾರಿ ನೌಕರಿ ಸಿಗುವ ಭರವಸೆ ಇದೆ. ತಾವಿಬ್ಬರೂ ಸಂತೋಷ, ನೆಮ್ಮದಿಯಿಂದ ಜೀವನ ನಡೆಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

See also  ಸರಕಾರದ ಹಣ ದುರುಪಯೋಗಪಡಿಸಿಕೊಂಡ ಸಿಬ್ಬಂದಿಗೆ 3 ವರ್ಷ ಜೈಲು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು