News Kannada
Friday, December 09 2022

ಕರ್ನಾಟಕ

ಮಡಿಕೇರಿಗೆ ಬಂದೇ ಬಿಡ್ತು ಇಂದಿರಾ ಕ್ಯಾಂಟೀನ್: ಫೆಬ್ರುವರಿಯಲ್ಲಿ ಉದ್ಘಾಟನೆ

Photo Credit :

ಮಡಿಕೇರಿಗೆ ಬಂದೇ ಬಿಡ್ತು ಇಂದಿರಾ ಕ್ಯಾಂಟೀನ್: ಫೆಬ್ರುವರಿಯಲ್ಲಿ ಉದ್ಘಾಟನೆ

ಮಡಿಕೇರಿ: ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಇಂದಿರಾ ಕ್ಯಾಂಟೀನ್ ನ ಸಿದ್ಧಪಡಿಸಿದ ಗೋಡೆಗಳು ಮಡಿಕೇರಿಯ ನೂತನ ಖಾಸಗಿ ಬಸ್ ನಿಲ್ದಾಣದ ಆವರಣಕ್ಕೆ ಬಂದು ತಲುಪಿದೆ.

ಪ್ರಿಕಾಸ್ಟ್ ಕನ್’ಸ್ಟ್ರಕ್ಷನ್ ತಂತ್ರಜ್ಞಾನ ಬಳಸಿ ಬೇರೆಡೆ ಅಗತ್ಯ ನಿರ್ಮಾಣ ಸಾಮಗ್ರಿ ಸಿದ್ಧಪಡಿಸಿ ಮಡಿಕೇರಿಗೆ ಕ್ರೇನ್ ಮೂಲಕ ತಂದು ಜೋಡಿಸಲಾಗುತ್ತಿದೆ. ಇದು 60 ವರ್ಷ ಬಾಳಿಕೆ ಬರಲಿದ್ದು, ಮಿಷನ್’ನಿಂದ ಫಿನಿಶಿಂಗ್ ನೀಡುವುದರಿಂದ ವೈಜ್ಞಾನಿಕ ರೂಪದಲ್ಲಿ ಆಕರ್ಷಣೆ ಪಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಳಾಂಗಣ ಮತ್ತು ಹೊರಾಂಗಣಕ್ಕೆ ಅಂತಿಮ ಸ್ಪರ್ಷ ನೀಡುವ ಕಾರ್ಯ ಶೀಘ್ರ ಆರಂಭಗೊಳ್ಳಲಿದ್ದು, ಫೆಬ್ರವರಿ ತಿಂಗಳಿನಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೊಳ್ಳಲಿದೆ ಎಂದು ಹೇಳಿದ್ದಾರೆ.

ಕ್ಯಾಂಟೀನ್ ಹೀಗಿರುತ್ತದೆ
* ಒಂದು ಕ್ಯಾಂಟೀನ್ ನಿರ್ಮಾಣಕ್ಕೆ ಅಂದಾಜು 32 ಲಕ್ಷ ವೆಚ್ಚ
* ಪ್ರತಿ ಕ್ಯಾಂಟೀನ್’ನಲ್ಲೂ 2 ಶೌಚಾಲಯ, ಸಿಸಿಟಿವಿ ವ್ಯವಸ್ಥೆ
* ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಒಂದು ಅಡುಗೆ ಮನೆ.
ಕ್ಯಾಂಟೀನ್ ನಿರ್ವಹಣೆ ಹಾಗೂ ಅಡುಗೆ ಸಿದ್ಧಪಡಿಸಲು ಸ್ವಯಂಸೇವಕ ಸಂಘ, ಸ್ತ್ರೀ ಶಕ್ತಿ ಸಂಘ ಹಾಗೂ ಸರ್ಕಾರೇತರ ಸಂಘಗಳಿಂದ ಟೆಂಡರ್ ಆಹ್ವಾನಿಸಲಾಗುವುದು.

ಮೆನು ಹೀಗಿದೆ
ಬೆಳಗಿನ ಉಪಾಹಾರ: ಇಡ್ಲಿ ಸಾಂಬಾರ್, ರೈಸ್ ಬಾತ್, ಅವಲಕ್ಕಿ ಉಪ್ಪಿಟ್ಟು, ಖಾರಾ ಉಪ್ಪಿಟ್ಟು, ಇಡ್ಲಿ ಸಾಂಬಾರ್, ಚಿತ್ರಾನ್ನ, ಖಾರಾ ಪೊಂಗಲ್ (ಪ್ರತಿ ದಿನ ಇವುಗಳಲ್ಲಿ ಒಂದು)
ಮಧ್ಯಾಹ್ನದ ಊಟ: ಅನ್ನ, ಸಾರು, ಉಪ್ಪಿನಕಾಯಿ, ಹಪ್ಪಳ
ರಾತ್ರಿ ಭೋಜನ: ಅನ್ನ ಸಾಂಬಾರು, ಉಪ್ಪಿನ ಕಾಯಿ, ಹಪ್ಪಳ
ಭಾನುವಾರ: ಬಿಸಿ ಬೇಳೆ ಬಾತ್, ತರಕಾರಿ ಅನ್ನ, ಪುಳಿಯೋಗರೆ, ಜೀರಿಗೆ ಅನ್ನ (ಪ್ರತಿ ಭಾನುವಾರ ಇವುಗಳಲ್ಲಿ ಒಂದು)

ಆಹಾರ ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದೆ. ಈಗ ಒಂದು ಊಟಕ್ಕೆ 40 ರಿಂದ 50 ರೂ. ನೀಡಬೇಕಾದ ಪರಿಸ್ಥಿತಿ ಇದೆ. ಆದರೆ, ಇಂದಿರಾ ಕ್ಯಾಂಟೀನ್ ನಲ್ಲಿ 5 ರೂ.ಗೆ ತಿಂಡಿ ಮತ್ತು 10 ರೂ.ಗೆ ಊಟ ನೀಡುವುದು ಉತ್ತಮ ಕಾರ್ಯವಾಗಿದ್ದು, ಶ್ರಮಿಕ ವರ್ಗದವರಿಗೆ ಕಡಿಮೆ ದರದಲ್ಲಿ ಆಹಾರ ನೀಡುವ ಕಾರ್ಯ ಶ್ಲಾಘನೀಯವೆಂದು ನಗರ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಯು.ಅಬ್ದುಲ್ ರಜಾಕ್ ತಿಳಿಸಿದ್ದಾರೆ.

ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ್ದ ಅವರು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.

See also  ಅಂಗಾಂಗ ದಾನ: ಸಿ.ಎಂ ಬಸವರಾಜ ಬೊಮ್ಮಾಯಿ ವಾಗ್ದಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು