News Kannada
Tuesday, November 29 2022

ಕರ್ನಾಟಕ

ಚಿಕ್ಕಪ್ಪನ ದ್ವೇಷಕ್ಕೆ ಬಲಿಯಾದ ಯುವಕ - 1 min read

Photo Credit :

ಚಿಕ್ಕಪ್ಪನ ದ್ವೇಷಕ್ಕೆ ಬಲಿಯಾದ ಯುವಕ

ಮಂಡ್ಯ: ದ್ವೇಷಕ್ಕೆ ಯುವಕನನ್ನು ಆತನ ಚಿಕ್ಕಪ್ಪನೇ ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಮದ್ದೂರು ತಾಲೂಕಿನ ಕೊಣಸಾಲೆ ಗ್ರಾಮದಲ್ಲಿ ನಡೆದಿದೆ.

ಕೊಣಸಾಲೆ ಗ್ರಾಮದ ನಿವಾಸಿ ಬಾಂಕಿ ಬೋರಯ್ಯನ ಎಂಬುವರ ಪುತ್ರ ಪ್ರದೀಪ್ (32) ಎಂಬಾತನೇ ತನ್ನ ಚಿಕ್ಕಪ್ಪನಿಂದ ಹತೈಗೀಡಾದವನು. ಚಿಕ್ಕಪ್ಪ ನಿಂಗರಾಜು, ಚಿಕ್ಕಮ್ಮ ರುದ್ರಮ್ಮ ಮತ್ತು ಪುತ್ರ ಮನು ಹತ್ಯೆ ಮಾಡಿದ ಆರೋಪಿಗಳು.

ಹತ್ಯೆಗೀಡಾದ ಪ್ರದೀಪ್ ಮತ್ತು ಆತನ ಚಿಕ್ಕಪ್ಪ ರಂಗರಾಜುಗೂ ಹಿಂದಿನಿಂದಲೂ ದ್ವೇಷವಿತ್ತು ಎನ್ನಲಾಗಿದ್ದು, ಚಿಕ್ಕ ಪುಟ್ಟ ವಿಚಾರಕ್ಕೂ ಆತನೊಂದಿಗೆ ಚಿಕ್ಕಪ್ಪ ರಂಗರಾಜು ಮತ್ತು ಮನೆಯವರು ಜಗಳಕ್ಕಿಳಿಯುತ್ತಿದ್ದರು. ಕಳೆದ ವಾರ ಮೇಕೆ ಜಮೀನಿನಲ್ಲಿ ಬೆಳೆ ಮೇಯ್ದ ಬಗ್ಗೆ, ಗಾಡಿ ಹೊಡೆದ ವಿಚಾರವಾಗಿಯೂ ಜಗಳ ನಡೆದಿತ್ತು. ಈ ವೇಳೆ ಚಿಕ್ಕಪ್ಪ ರಂಗರಾಜುವಿನ ಮಗ ಮನು ಎಂಬಾತ ಕೊಲೆಗೈಯ್ಯುವ ಬೆದರಿಕೆ ಹಾಕಿದ್ದನು. ಆದರೆ ಅವರು ಕೊಲೆ ಮಾಡಬಹುದೆಂಬ ಚಿಕ್ಕ ಅನುಮಾನವೂ ಮೃತ ಪ್ರದೀಪ್ ಗೆ ಇರಲಿಲ್ಲ. ಹೀಗಾಗಿ ತನ್ನ ಪಾಡಿಗೆ ತಾನು ಎಂಬಂತೆ ಕೆಲಸದಲ್ಲಿ ನಿರತನಾಗಿದ್ದನು.

ಪ್ರದೀಪ್ ಕುಟುಂಬದವರು ಬಡವರಾಗಿದ್ದು, ಈತ ಕಷ್ಟಪಟ್ಟು ಕೃಷಿ ಮಾಡಿದ್ದರಿಂದ ಇತ್ತೀಚೆಗೆ ಅಭಿವೃದ್ಧಿ ಹೊಂದಿದ್ದನು. ಇದನ್ನು ಸಹಿಸಲಾಗದೆ ಚಿಕ್ಕಪ್ಪ ಮತ್ತು ಮನೆಯವರು ಜಗಳಕ್ಕಿಳಿಯುತ್ತಿದ್ದರು ಎನ್ನಲಾಗಿದೆ. ಈ ನಡುವೆ ಪ್ರದೀಪ್ ನ್ನು ಕೊಲೆಗೈಯ್ಯಲೇ ಬೇಕೆಂಬ ತೀರ್ಮಾನಕ್ಕೆ ಬಂದ ರಂಗರಾಜು ಮನೆಯವರು ಕಾದು ಕುಳಿತಿದ್ದಾರೆ, ಪ್ರದೀಪ್ ರಾತ್ರಿ ರೇಷ್ಮೆ ಹುಳುಗಳಿಗೆ ಸೊಪ್ಪು ಹಾಕಿ ಬರುತ್ತಿದ್ದಾಗ ಅಡ್ಡಹಾಕಿ ಚಿಕ್ಕಪ್ಪ ರಂಗರಾಜು ಮತ್ತು ಚಿಕ್ಕಮ್ಮ ರುದ್ರಮ್ಮ ಹಿಡಿದುಕೊಂಡರೆ, ಮಗ ಮನು ಕುಡುಗೋಲಿನಿಂದ ಕುತ್ತಿಗೆ ಭಾಗಕ್ಕೆ ಕಡಿದಿದ್ದಾನೆ. ಈ ವೇಳೆ ಪ್ರಾಣಭಯದಿಂದ ಪ್ರದೀಪ್ ಚೀರಾಡಿದ್ದು, ಅದನ್ನು ಕೇಳಿ ಸ್ಥಳಕ್ಕೆ ನಿತ್ಯಾನಂದ ಎಂಬ ರಕ್ಷಣೆಗೆ ಬಂದಿದ್ದು, ಆತನ ಮೇಲೆಯೂ ಹಲ್ಲೆ ಮಾಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಮನೆಯವರು ಮತ್ತು ಸ್ಥಳೀಯರು ಬಂದಿದ್ದು, ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರದೀಪ್ ನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಮದ್ದೂರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಆತ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನೆಯಲ್ಲಿ ಅಡಗಿದ್ದ ಆರೋಪಿಗಳಾದ ನಿಂಗರಾಜು, ರುದ್ರಮ್ಮರನ್ನು ವಶಕ್ಕೆ ಪಡೆದಿದ್ದಾರೆ. ಈ ನಡುವೆ ಆರೋಪಿ ಮನು ಹತ್ಯೆಗೈದ ನಂತರ ತಾನೇ ತಲೆ ಚಚ್ಚಿಕೊಂಡು ಆಸ್ಪತ್ರೆಗೆ ದಾಖಲಾಗಲು ಮುಂದಾಗಿದ್ದು ಆತನನ್ನು ಕೂಡ ಬಂಧಿಸಲಾಗಿದೆ. ಬೆಸಗರಹಳ್ಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ

See also  ಮಡಿಕೇರಿ ಭೂಕುಸಿತ ಪ್ರದೇಶದಲ್ಲಿ ಮೂರು ಮೃತದೇಹ ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು