News Kannada
Saturday, December 03 2022

ಕರ್ನಾಟಕ

ಮೀನು ಮಾರುಕಟ್ಟೆಯಾದ ಮಡಿಕೇರಿ ನಗರಸಭೆಯ ಸಾಮಾನ್ಯ ಸಭೆ

Photo Credit :

ಮೀನು ಮಾರುಕಟ್ಟೆಯಾದ ಮಡಿಕೇರಿ ನಗರಸಭೆಯ ಸಾಮಾನ್ಯ ಸಭೆ

ಮಡಿಕೇರಿ: ಮಡಿಕೇರಿ ನಗರಸಭೆಯ ಸಾಮಾನ್ಯ ಸಭೆ ಅಕ್ಷರಶ: ಮೀನು ಮಾರುಕಟ್ಟೆಯಂತ್ತಾಯಿತು. ಸಭಾ ಗೌರವವನ್ನು ದಿಕ್ಕರಿಸಿದ ಸದಸ್ಯರು ಒಂದು ಮೀನು ಅಂಗಡಿಗಾಗಿ ಜಗಳವಾಡಿದರು, ಏಕವಚನದಲ್ಲಿ ಬೈದಾಡಿದರು. ಅಂಗಡಿಗೆ ಅನುಮತಿ ನೀಡುವ ನಿರ್ಧಾರವನ್ನು ಮತಕ್ಕೆ ಹಾಕೋಣವೆಂದು ಉಪಾಧ್ಯಕ್ಷರು ಹೇಳುವ ಮೂಲಕ ನಗರಸಭೆಯ ಘನತೆ ಯಾವ ಹಂತಕ್ಕೆ ಹೋಗಿದೆ ಎನ್ನುವುದು ಸಾಬೀತಾಯಿತು.

ನಗರಸಭಾ ಅಧ್ಯಕ್ಷರಾದ ಕೂಡಕಂಡಿ ಕಾವೇರಮ್ಮ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಗರಸಭೆಯ ಸಾಮಾನ್ಯ ಸಭೆ ನಡೆಯಿತು. ನಗರದ ಅಭಿವೃದ್ಧಿಯ ಬಗ್ಗೆ ಗಂಭೀರ ಚಿಂತನೆ ನಡೆಸದ ಸಭೆ ಮಹದೇವಪೇಟೆ ರಸ್ತೆ ಅವ್ಯವಸ್ಥೆ, ಇಂದಿರಾ ಕ್ಯಾಂಟೀನ್ ಜಾಗದ ವಿವಾದ, ಯುಜಿಡಿ ಒಳಚರಂಡಿ ಕಾಮಗಾರಿಯಿಂದಾಗಿ ರಸ್ತೆಗಳು ಹದಗೆಡುತ್ತಿರುವುದು ಸೇರಿದಂತೆ ಕೇವಲ ಒಂದು ಮೀನಿನ ಅಂಗಡಿಗಾಗಿ ಸಾಕಷ್ಟು ಸಮಯವನ್ನು ವ್ಯರ್ಥ ಮಾಡಿತು. ನಗರದ ಗಣಪತಿ ಬೀದಿಯಲ್ಲಿ ಅನುಮತಿ ಇಲ್ಲದೆ ಮೀನಿನ ಅಂಗಡಿಯೊಂದು ನಡೆಯುತ್ತಿದ್ದು, ಯಾಕೆ ಅವಕಾಶ ನೀಡುತ್ತಿದ್ದೀರಿ ಎಂದು ಬಿಜೆಪಿ ಸದಸ್ಯ ಪಿ.ಡಿ.ಪೊನ್ನಪ್ಪ ಪ್ರಶ್ನಿಸಿದರು.

ನಗರದೊಳಗೆ ಮೀನು ಮತ್ತು ಮಾಂಸ ಮಾರಾಟಕ್ಕೆ ನೂತನ ಮಳಿಗೆಗಳಿಗೆ ಅನುಮತಿ ನೀಡಬಾರದೆಂದು ಈ ಹಿಂದೆ ಸಭೆ ನಿರ್ಣಯ ಕೈಗೊಂಡಿದ್ದರೂ ಗಣಪತಿ ಬೀದಿಯಲ್ಲಿ ಮೀನು ಮಾರಾಟಕ್ಕೆ ಯಾಕೆ ಅವಕಾಶ ನೀಡಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿಯ ಇತರ ಸದಸ್ಯರು ಕೂಡ ಧ್ವನಿಗೂಡಿಸಿ ಆಕ್ಷೇಪ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಮಾನವೀಯತೆಯ ದೃಷ್ಟಿಯಿಂದ ಕೋಲ್ಡ್ ಸ್ಟೋರೇಜ್ ಗೆ ಅನುಮತಿ ನೀಡಲಾಗಿದೆಯೇ ಹೊರತು ಮೀನು, ಮಾಂಸವನ್ನು ಕಡಿದು ಮಾರುವಂತ್ತಿಲ್ಲವೆಂದರು.

ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿಜೆಪಿಯ ಕೆ.ಎಸ್.ರಮೇಶ್ ಮೊಬೈಲ್ ನಲ್ಲಿ ದೃಶ್ಯಗಳನ್ನು ಪ್ರದರ್ಶಿಸಿ ಮೀನು, ಮಾಂಸವನ್ನು ಕಡಿದು ಮಾರಾಟ ಮಾಡಲಾಗುತ್ತಿರುವುದಕ್ಕೆ ಸಾಕ್ಷಿ ಇದ್ದು, ತಕ್ಷಣ ಮಳಿಗೆಯನ್ನು ಬಂದ್ ಮಾಡಿ ಎಂದು ಒತ್ತಾಯಿಸಿದರು.

ಈ ಸಂದರ್ಭ ಎಸ್ ಡಿಪಿಐ ಸದಸ್ಯ ಮನ್ಸೂರ್ ಮೀನು ಮಳಿಗೆಯ ಪರ ಮಾತನಾಡಿ ನಗರದಲ್ಲಿರುವ ಎಲ್ಲಾ ಮೀನು, ಮಾಂಸದ ಮಳಿಗೆಗಳನ್ನು ಮೊದಲು ಮುಚ್ಚಿಸಿ ಎಂದರು. ವ್ಯಾಪಾರಿಗೆ ಅನಾರೋಗ್ಯ ಇರುವ ಕಾರಣ ಮಾನವೀಯತೆಯ ದೃಷ್ಟಿಯಿಂದ ಮೀನು ಮಾರಾಟಕ್ಕೆ ಅವಕಾಶ ನೀಡಲಾಗಿದೆ ಎಂದು ಸಮರ್ಥಿಸಿಕೊಂಡರು.

ಇದಕ್ಕೆ ಒಪ್ಪದ ಬಿಜೆಪಿ ಸದಸ್ಯರು ಒಂದು ಅಂಗಡಿಗೆ ಅನುಮತಿ ನೀಡಿದರೆ ನಾವು ಎರಡು ಅಂಗಡಿ ತೆರೆಯುತ್ತೇವೆ, ಮೀನು ಮಾಂಸ ಮಾರಾಟ ಮಾಡುತ್ತೇವೆ ಎಂದು ಸವಾಲು ಹಾಕಿದರು. ಸಭೆಯಲ್ಲಿ ಗೊಂದಲ ಸೃಷ್ಟಿಯಾಗಿ ಗದ್ದಲ ಏರ್ಪಟ್ಟ ಸಂದರ್ಭ ಮಾತನಾಡಿದ ಗಣಪತಿ ಬೀದಿ ವಾರ್ಡ್ ನ ನಗರಸಭಾ ಸದಸ್ಯರಾದ ಸವಿತಾ ರಾಕೇಶ್, ಅನುಮತಿ ಇಲ್ಲದೆ ನನ್ನ ವಾರ್ಡ್ ನಲ್ಲಿ ಆರಂಭಗೊಂಡಿರುವ ಮೀನು ಮಳಿಗೆಯನ್ನು ಮುಚ್ಚಿ, ಇಲ್ಲದಿದ್ದಲ್ಲಿ ವಾರ್ಡ್ ನ ಸದಸ್ಯರು ಡೀಲ್ ಆಗಿದ್ದಾರೆ ಎನ್ನುವ ಆರೋಪ ಜನರಿಂದ ಕೇಳಿ ಬರಬಹುದೆಂದು ಅಧ್ಯಕ್ಷರ ಗಮನ ಸೆಳೆದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮನ್ಸೂರ್, ವಾರ್ಡ್ ನ ನಗರಸಭಾ ಸದಸ್ಯರು ಮೀನು ಮಳಿಗೆಗೆ ಸಮ್ಮತಿ ಸೂಚಿಸಿ ಮಾತನಾಡಿದ ರೆಕಾರ್ಡ್ ನನ್ನ ಮೊಬೈಲ್ ನಲ್ಲಿ ಇದೆ ಎಂದು ಮೊಬೈಲ್ ಫೋನನ್ನು ಪ್ರದರ್ಶಿಸಿದರು. ಇದರಿಂದ ತೀವ್ರ ಅಸಮಾಧಾನಗೊಂಡ ಬಿಜೆಪಿ ಸದಸ್ಯರು ಅಧ್ಯಕ್ಷರ ವೇದಿಕೆ ಬಳಿ ಬಂದರಲ್ಲದೆ ಮನ್ಸೂರ್ ಬಳಿಯೂ ತೆರಳಿ ಮಹಿಳಾ ಸದಸ್ಯರನ್ನು ಅವಮಾನಿಸಿದ್ದೀರಿ ಕ್ಷಮೆ ಕೇಳಿ ಎಂದು ಒತ್ತಾಯಿಸಿದರು.

See also  ಲ್ಯಾಂಪ್ಸ್ ಸೊಸೈಟಿ ವಿರುದ್ದ ಗಿರಿಜನರಿಂದ ಶವವಿಟ್ಟು ಪ್ರತಿಭಟನೆ

ಎಲ್ಲಾ ಬಿಜೆಪಿ ಸದಸ್ಯರು ಮನ್ಸೂರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಕ್ಷಮೆ ಕೇಳುವಲ್ಲಿಯವರೆಗೆ ಸಭೆ ನಡೆಸಲು ಬಿಡುವುದಿಲ್ಲವೆಂದು ಪಟ್ಟು ಹಿಡಿದರು. ಮೊಬೈಲ್ ನಲ್ಲಿ ರೆಕಾರ್ಡ್ ಇದ್ದರೆ ತೋರಿಸಿ ಎಂದು ಒತ್ತಾಯಿಸಿದರು.

ಈ ಸಂದರ್ಭ ಅಸಹಾಯಕರಾದ ಮನ್ಸೂರ್, ವಾರ್ಡ್ ನ ಸದಸ್ಯರು ಮಳಿಗೆಗೆ ಸಮ್ಮತಿ ಸೂಚಿಸಿ ನನ್ನೊಂದಿಗೆ ಮಾತನಾಡಿದ್ದಾರೆ, ಯಾವ ದೇವಾಲಯಕ್ಕೆ, ಯಾವ ಮಸೀದಿಗೆ ಬೇಕಾದರೂ ಬಂದು ಪ್ರಮಾಣ ಮಾಡುತ್ತೇನೆ ಎಂದು ಸವಾಲು ಹಾಕಿದರು.
ನಮಗೆ ಪ್ರಮಾಣ ಬೇಡ, ಕ್ಷಮೆ ಕೇಳಿ ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು.

ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಮಾತನಾಡಿ ಅವರ ಬದಲಾಗಿ ನಾನು ಕ್ಷಮೆ ಕೇಳುತ್ತೇನೆ, ಸದಸ್ಯರಾದ ಸವಿತಾ ರಾಕೇಶ್ ಅವರು ಲಿಖಿತ ರೂಪದಲ್ಲಿ ಮನವಿ ಮಾಡಿಕೊಂಡರೆ ಮೀನು ಮಾರಾಟ ಮಳಿಗೆಯನ್ನು ಮುಚ್ಚಿಸುವುದಾಗಿ ಭರವಸೆ ನೀಡಿದರು.

ಸದಸ್ಯೆ ಸವಿತಾ ರಾಕೇಶ್ ತಕ್ಷಣ ಮನವಿ ಪತ್ರವನ್ನು ಬರೆದು ಅಧ್ಯಕ್ಷರಿಗೆ ನೀಡಿದರು. ಆದರೆ ಮತ್ತೆ ಚರ್ಚೆ ಮುಂದುವರಿದಾಗ ಸ್ಥಳ ಪರಿಶೀಲನೆ ನಡೆಸಿ ಕೋಲ್ಡ್ ಸ್ಟೋರೇಜ್ ಇದೆಯೇ ಇಲ್ಲವೆ ಎಂಬುವುದನ್ನು ಖಾತ್ರಿ ಪಡಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಿ ಎಂದು ಕಾಂಗ್ರೆಸ್ ಸದಸ್ಯರಾದ ಹೆಚ್.ಎಂ.ನಂದಕುಮಾರ್ ಸಲಹೆ ನೀಡಿದರು.

ಇದರಿಂದ ಬಿಜೆಪಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಉಪಾಧ್ಯಕ್ಷರಾದ ಟಿ.ಎಸ್.ಪ್ರಕಾಶ್ ಮಾತನಾಡಿ ಮೀನು, ಮಾಂಸ ಕಡಿದು ಮಾರಾಟ ಮಾಡುತ್ತಿರುವುದಕ್ಕೆ ನಮ್ಮ ಬಳಿ ಸಾಕ್ಷಿ ಇದೆ ಎಂದು ಹೇಳಿದರು.
ಹೆಚ್.ಎಂ.ನಂದಕುಮಾರ್ ಮಾತನಾಡಿ ನಿಮ್ಮ ಸಾಕ್ಷ್ಯಗಳನ್ನು ಪರಿಗಣಿಸಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು