News Kannada
Wednesday, November 30 2022

ಕರ್ನಾಟಕ

ಮದುವೆಯ ಆಮಂತ್ರಣ ಕೊಡಲು ಬಂದವರು ದಂಪತಿಗೆ ಚಾಕು ಇರಿದು ಹಣ ದೋಚಿದರು? - 1 min read

Photo Credit :

ಮದುವೆಯ ಆಮಂತ್ರಣ ಕೊಡಲು ಬಂದವರು ದಂಪತಿಗೆ ಚಾಕು ಇರಿದು ಹಣ ದೋಚಿದರು?

ಹಾಸನ: ಅಣ್ಣನ ಮದುವೆಯ ಆಮಂತ್ರಣ ಕೊಡುವ ನೆಪದಲ್ಲಿ ಮನೆಗೆ ಬಂದವರು ಮನೆಯಲ್ಲಿದ್ದ ದಂಪತಿಗೆ ಚಾಕುವಿನಿಂದ ಇರಿದು 3 ಲಕ್ಷ ರೂ. ಹಾಗೂ ಚಿನ್ನಾಭರಣಗಳನ್ನು ದೋಚಿ ಪರಾರಿಯಾದ ಘಟನೆ ಹಾಸನದಲ್ಲಿ ನಡೆದಿದೆ.

ಈ ಘಟನೆ ಕುವೆಂಪುನಗರ ಬಡಾವಣೆಯಲ್ಲಿ ನಡೆದಿದ್ದು, ವಾಗೀಶ್(61), ಸಾವಿತ್ರಿ(55) ದುಷ್ಕರಮಿಗಳ ಇರಿತಕ್ಕೊಳಗಾದ ದಂಪತಿ. ವಾಗೀಶ್ ಎಂಬವರ ಬಳಿ ಇಮ್ರಾನ್ ಎಂಬಾತ ಕೆಲಸ ಮಾಡಿಕೊಂಡಿದ್ದನು. ಇಂದು ಬೆಳಗ್ಗೆ ಇಮ್ರಾನ್ ತನ್ನ ಅಣ್ಣನ ಮದುವೆ ಆಮಂತ್ರಣ ಕೊಡಲು ವಾಗೀಶ್ ಮನೆಗೆ ಬಂದಿದ್ದಾನೆ. ಈ ವೇಳೆ ಮನೆಯಲ್ಲಿದ್ದ ದಂಪತಿಗೆ ಚಾಕು ಇರಿದು ಸುಮಾರು 3 ಲಕ್ಷ ರೂ. ಹಾಗೂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾನೆ ವಾಗೀಶ್ ಕುಟುಂಬಸ್ಥರು ಆರೋಪಿಸಿದ್ದಾರೆ.

ಹಲ್ಲೆಗೊಳಗಾದ ದಂಪತಿಯನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ಕುವೆಂಪು ನಗರ ಬಡಾವಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ನಾಪತ್ತೆಯಾಗಿರುವ ಇಮ್ರಾನ್ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

See also  ಸಿಡಿಲು ಬಡಿದು ಹಳಿಯಾಳದಲ್ಲಿ ರೈತನ ಸಾವು: ಮಳೆಗೆ ಅಪಾರ ನಷ್ಟ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು