News Kannada
Tuesday, November 29 2022

ಕರ್ನಾಟಕ

ಬಂಡೀಪುರದಲ್ಲಿ ಆತಂಕ ಸೃಷ್ಠಿಸಿದ ಹುಲಿಗಳ ಸಾವು - 1 min read

Photo Credit :

ಬಂಡೀಪುರದಲ್ಲಿ ಆತಂಕ ಸೃಷ್ಠಿಸಿದ ಹುಲಿಗಳ ಸಾವು

ಗುಂಡ್ಲುಪೇಟೆ: ರಾಷ್ಟ್ರೀಯ ಉದ್ಯಾನ ಬಂಡೀಪುರ ಅರಣ್ಯದಲ್ಲಿ ಕಳೆದ ಎರಡು ತಿಂಗಳಲ್ಲಿ ಸುಮಾರು ನಾಲ್ಕು ಹುಲಿಗಳು ಸಾವನ್ನಪ್ಪಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. 

ಕೆಲವು ದಿನಗಳ ಹಿಂದೆಯಷ್ಟೆ ಜೋಡಿ ಹುಲಿಗಳು ಮೃತಪಟ್ಟಿದ್ದವು. ಅದು ಮರೆಯುವ ಮುನ್ನವೇ ಇದೀಗ ಬಂಡೀಪುರದ ಮದ್ದೂರು ಅರಣ್ಯ ವಲಯದ ಹೊಂಗಳ್ಳಿ ಬೀಟ್ನಲ್ಲಿ ನಾಲ್ಕು ವರ್ಷದ ಗಂಡು ಹುಲಿಯ ಕೊಳೆತ ಮೃತದೇಹ ಪತ್ತೆಯಾಗಿದ್ದು, ಕಾದಾಟದಲ್ಲಿ ಸಾವನ್ನಪ್ಪಿರಬಹುದೆಂದು ಸಂಶಯಿಸಲಾಗಿದೆ. 

ಅರಣ್ಯ ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ಡಾ.ನಾಗರಾಜು ಅವರು ಸ್ಥಳಕ್ಕೆ ತೆರಳಿ ಮರಣೋತ್ತರ ಪರೀಕ್ಷೆ ನಡೆಸಿ,  ಅಂತ್ಯಕ್ರಿಯೆ ನಡೆಸಲಾಗಿದೆ. ಸ್ಥಳಕ್ಕೆ ಸಿಎಫ್ಓ ಅಂಬಾಡಿ ಮಾಧವ್, ಎಸಿಎಫ್ ರವಿಕುಮಾರ್, ಶೈಲೇಂದ್ರಕುಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಈಗಾಗಲೇ ಬಂಡೀಪುರ ಅರಣ್ಯದಲ್ಲಿ ಹುಲಿ ಮತ್ತು ಆನೆಗಳು ಸಾವನ್ನಪ್ಪುತ್ತಿದ್ದು, ಕೇವಲ ಎರಡು ತಿಂಗಳಲ್ಲಿ ತಲಾ ನಾಲ್ಕು ಹುಲಿ ಮತ್ತು ಕಾಡಾನೆಗಳು ಸಾವನ್ನಪ್ಪಿವೆ. ಒಟ್ಟಾರೆ ಮೇಲಿಂದ ಮೇಲೆ ವನ್ಯಪ್ರಾಣಿಗಳ ಸಾವು ಪ್ರಾಣಿ ಪ್ರಿಯರ ಆತಂಕಕ್ಕೆ ಕಾರಣವಾಗಿರವುದಂತು ಸತ್ಯ

See also  ರಾಜ್ಯದಲ್ಲಿ ನವೆಂಬರ್ 2 ರಿಂದ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಪೂರ್ಣ ಶಾಲೆ ಆರಂಭ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು