News Kannada
Tuesday, December 06 2022

ಕರ್ನಾಟಕ

ಸುಂಟಿಕೊಪ್ಪ ಬಳಿ ಭೀಕರ ಅಪಘಾತ: ಇಬ್ಬರು ಕೆಎಸ್ಆರ್ ಟಿಸಿ ಬಸ್ ಚಾಲಕರ ಸಾವು

Photo Credit :

ಸುಂಟಿಕೊಪ್ಪ ಬಳಿ ಭೀಕರ ಅಪಘಾತ: ಇಬ್ಬರು ಕೆಎಸ್ಆರ್ ಟಿಸಿ ಬಸ್ ಚಾಲಕರ ಸಾವು

ಮಡಿಕೇರಿ: ಎರಡು ಕೆಎಸ್ಆರ್ ಟಿಸಿ ಬಸ್ ಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಚಾಲಕರಿಬ್ಬರು ಸಾವನ್ನಪ್ಪಿರುವ ಘಟನೆ ಸುಂಟಿಕೊಪ್ಪ ಸಮೀಪದ ಶಾಂತಗಿರಿ ತಿರುವಿನಲ್ಲಿ ನಡೆದಿದೆ. ಬಸ್ಸಿನಲ್ಲಿದ್ದ ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಡಿಕೇರಿಯಿಂದ ಹಾಸನಕ್ಕೆ ತೆರಳುತ್ತಿದ್ದ ಮಡಿಕೇರಿ ಡಿಪೋದ (ಕೆ.ಎ.19ಎಫ್ 3240) ಬಸ್ ನ್ನು ಚಾಲಕ ಶನಿವಾರಸಂತೆ ನಿವಾಸಿ ಪಾಲಾಕ್ಷ (42) ಚಲಾಯಿಸುತ್ತಿದ್ದರು. ಮೈಸೂರಿನಿಂದ ಮಡಿಕೇರಿಗೆ ಹುಣಸೂರು ಡಿಪೋದ (ಕೆ.ಎ.09ಎಫ್ 4989) ಬಸ್ ನ್ನು ಹುಣಸೂರಿನ ಮೊದ್ದೀನ್ ಶರೀಫ್ (50) ಅವರು ಚಲಾಯಿಸುತ್ತಿದ್ದರು. ಸುಂಟಿಕೊಪ್ಪದಿಂದ 1 ಕಿ.ಮೀ. ದೂರದ ಶಾಂತಗಿರಿ ತಿರುವಿನಲ್ಲಿ ಈ ಎರಡು ಬಸ್ ಗಳು ಮುಖಾಮುಖಿ ಡಿಕ್ಕಿಯಾಗಿ ನಜ್ಜುಗುಜ್ಜಾಗಿವೆ. ಚಾಲಕರಾದ ಪಾಲಾಕ್ಷರಿಗೆ ಕೈಕಾಲು ಹೊಟ್ಟೆ, ಎದೆ ಭಾಗಕ್ಕೆ ತೀವ್ರ ಗಾಯವಾಗಿದ್ದು, ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕರೆ ತರುವಾಗ ಅಸು ನೀಗಿದ್ದಾರೆ. ಮೊದ್ದೀನ್ ಶರೀಫ್ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ.

ಬಸ್ಸಿನ ನಿರ್ವಾಹಕರಾದ ಮಲ್ಲಪ್ಪ, ಪ್ರಯಾಣಿಕರಾದ ನಂದಿನಾಥಪುರದ ಅಣ್ಣಯ್ಯ, ಮಹದೇವಮ್ಮ, ಮೈಸೂರಿನ ರಮೇಶ, ನಾಗೇಶ, ಕೂಡಿಗೆಯ ಶಿವಾನಂದ, ನಾರಾಯಣಸ್ವಾಮಿ, ಕುಶಾಲನಗರದ ಜುಹಾರಾ, ರವಿ, ಕವಿತ ಹರೀಶ, ಧೀಮಂತ್ ರಾಜ್, ಕಾವೇರಿ, ಪೊನ್ನಮ್ಮ ಇವರುಗಳಿಗೆ ಗಂಭೀರ ಗಾಯಗಳಾಗಿವೆ.

ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶ್ರೀವಿದ್ಯಾ ಗಾಯಾಳುಗಳಿಗೆ ಸಾಂತ್ವನ ಹೇಳಿದರು ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

See also  ಭೂಕುಸಿದಲ್ಲಿ ಸಿಲುಕಿದ್ದ ಸಾಬು ಉತ್ತಪ್ಪ ಮೃತದೇಹ ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು