News Kannada
Friday, December 09 2022

ಕರ್ನಾಟಕ

ವೆಲೆಂಟೈನ್ಸ್ ಡೇ ಆಚರಿಸಿಕೊಳ್ಳೋಕೆ ಇಲ್ಲಿದೆ ಸುವರ್ಣವಕಾಶ

Photo Credit :

ವೆಲೆಂಟೈನ್ಸ್ ಡೇ ಆಚರಿಸಿಕೊಳ್ಳೋಕೆ ಇಲ್ಲಿದೆ ಸುವರ್ಣವಕಾಶ

ಕಾರವಾರ: ಫೆ.14ರಂದು ಪ್ರೇಮಿಗಳ ದಿನ. ತಮ್ಮ ದಿನವನ್ನು ಹೊಸತನದಲ್ಲಿ ಆಚರಿಸಿಕೊಳ್ಳಬೇಕು ಎಂದು ಹಾತೋರೆಯು ಯುವ ಜೋಡಿಗಳಿಗೆ ಮುರುಡೇಶ್ವರದ ನೇತ್ರಾಣಿ ಅಡ್ವೆಂಚರ್ ಸ್ಕೂಬಾ ಡೈವಿಂಗ್ ಸಂಸ್ಥೆ ಸಮುದ್ರದ ಆಳದೊಳಗೆ ಪ್ರೇಮಿಗಳ ದಿನಾಚರಣೆಯನ್ನು ಆಚರಿಸಿಕೊಳ್ಳಲು ಬಂಪರ್ ಅವಕಾಶ ಕಲ್ಪಿಸಿದೆ.

ಈ ಬಾರಿ ವೆಲೆಂಟೈನ್ಸ್ ಡೇಗೆ ಪ್ರೇಯಸಿಯನ್ನು ಎಲ್ಲಿಗೆ ಕರೆದುಕೊಂಡು ಹೋಗಬೇಕು, ಆ ದಿನ ಎಂದಿಗೂ ಮರೆಯಬಾರದು ಎನ್ನುವ ದೃಷ್ಟಿಯಿಂದ ಆಚರಿಸಿಕೊಳ್ಳುವವರಿಗೆ, ತಮ್ಮ ಪ್ರೀತಿಯ ನಿವೇದನೆ ಮಾಡಿಕೊಳ್ಳುವವರಿಗೆ ಮುರುಡೇಶ್ವರದ ನೇತ್ರಾಣಿ ಅಡ್ವೆಂಚರ್ ಆಯೋಜಿಸಿರುವ ಸ್ಕೂಬಾ ಡೈವಿಂಗ್ ಪ್ರೇಮಿಗಳಿಗೆ ಸದಾ ನೆನಪಿನಲ್ಲಿ ಇರುವಂತದ್ದು.

ಈಗಾಗಲೇ ಜಗತ್ಪ್ರಸಿದ್ಧಿ ಪಡಿದಿರೋ ಮುರುಡೇಶ್ವರದ ನೇತ್ರಾಣಿಯ ಸ್ಕೂಬಾ ಡೈವಿಂಗ್ ಪ್ರೇಮಿಗಳಿಗಾಗಿ ಪ್ರೇಮಿಗಳ ದಿನದಂದು ಪ್ರೇಮಿಗಳ ತಾಣವಾಗಿ ರೂಪುಗೊಳ್ಳಲಿದೆ. ಇದಕ್ಕಾಗಿ ಸ್ಕೂಬಾ ಡೈವಿಂಗ್ ಏಜೆನ್ಸಿ ಪಡೆದಿರುವ ನೇತ್ರಾಣಿ ಅಡ್ವೆಂಚರ್ಸ್ ಸಂಸ್ಥೆ ಜೋಡಿಗಳಿಗೆ ಸ್ಕೂಬಾ ಡೈವಿಂಗ್ ಮಾಡಲು ವಿಶೇಷ ರಿಯಾಯಿತಿ ನೀಡುತ್ತಿದೆ.

ವಸತಿಯೊಂದಿಗೆ ಕೇವಲ 10 ಸಾವಿರ ರೂ.ಗೆ ಇಬ್ಬರಿಗೂ ಸ್ಕೂಬಾ ಡೈವ್ ಮಾಡಲು ಅವಕಾಶ ನೀಡುತ್ತಿದೆ. ಮುರುಡೇಶ್ವರಸ ಪಾಮ್ ಗ್ರೂವ್ ಹೋಟೆಲ್ ನಲ್ಲಿ ಉಚಿತ ವಸತಿ, ಬಳಿಕ ನೇತ್ರಾಣಿ ದ್ವೀಪಕ್ಕೆ ಇಬ್ಬರನ್ನೂ ಕರೆದೊಯ್ದು ಸ್ಕೂಬಾ ಡೈವ್ ಮಾಡಿಸಲು ಸಂಸ್ಥೆ ಸಿದ್ದವಾಗಿದೆ. ಫೆ.18ರವರೆಗೆ ಈ ಅವಕಾಶ ಇದ್ದು ನಿಮ್ಮ ಪ್ರೇಯಸಿಗೆ ಮರೆಯಲಾಗದ ಈ ಸ್ಕೂಬಾ ಡೈವಿಂಗ್ ಅನುಭವ ಪಡೆಯಬಹುದಾಗಿದೆ. ಬುಕಿಂಗ್ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 9900431111, 9916554422ಗೆ ಕರೆ ಮಾಡಬಹುದಾಗಿದೆ.

See also  ಜ.4ರಂದು ಕೊಡಗಿಗೆ 'ಅಭಯ ಗೋ ಯಾತ್ರೆ'
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು