News Kannada
Wednesday, December 07 2022

ಕರ್ನಾಟಕ

ಮಕ್ಕಳ ಸಾವು ಪ್ರಕರಣ: ಪ್ರಯೋಗಾಲಯಕ್ಕೆ ಚುಚ್ಚುಮದ್ದು

Photo Credit :

ಮಕ್ಕಳ ಸಾವು ಪ್ರಕರಣ: ಪ್ರಯೋಗಾಲಯಕ್ಕೆ ಚುಚ್ಚುಮದ್ದು

ಮಂಡ್ಯ: ತಾಲ್ಲೂಕಿನ ಚಿನ್ನಗಿರಿದೊಡ್ಡಿ ಗ್ರಾಮದಲ್ಲಿ ನಡೆದ ಮಕ್ಕಳ ಸಾವಿಗೆ ಸಂಬಂಧಿಸಿದಂತೆ ನೀಡಲಾದ ಡಿಪಿಟಿ ಚುಚ್ಚುಮದ್ದಿನ ಬಾಟಲನ್ನು ಅಡಿಷನಲ್ ಡ್ರಗ್ ಕಂಟ್ರೋಲರ್ ಮೂಲಕ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವರದಿ ಬಂದ ನಂತರ ಸಾವಿಗೆ ಸಂಬಂಧಿಸಿದಂತೆ ನಿಖರ ಮಾಹಿತಿ ದೊರೆಯಲಿದೆ ಅಲ್ಲಿಯವರೆಗೂ ಏನನ್ನೂ ಹೇಳಲು ಸಾಧ್ಯವಿಲ್ಲ. ಸದ್ಯ ಆ ಬ್ಯಾಚ್ ನ ಔಷಧವನ್ನು ತಡೆಹಿಡಿದು ಬೇರೆ ಔಷಧವನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಆದರೆ ಅಭಿಯಾನವನ್ನು ಮಾತ್ರ ನಿಲ್ಲಿಸಿಲ್ಲ ಎಂದು ಅವರು ತಿಳಿಸಿದ್ದಾರೆ.

ಇದು ಜಾಗತಿಕವಾಗಿ ಬಹು ಮೆಚ್ಚುಗೆ ಪಡೆದ ಲಸಿಕೆ. ಆದರೆ, ಈ ಲಸಿಕೆ ಹಾಕಿಸಿಕೊಂಡ ಲಕ್ಷಕ್ಕೊಂದು ಮಗು ಸಾವನ್ನಪ್ಪುವುದು ಸಾಮಾನ್ಯ. ದುರದೃಷ್ಟವಶಾತ್ ಎರಡು ಮಕ್ಕಳು ಒಂದೇ ತಾಲೂಕಿನಲ್ಲಿ ಸಾವನ್ನಪ್ಪಿರುವುದು ಜನಸಾಮಾನ್ಯರಲ್ಲಿ ಲಸಿಕೆ ಕುರಿತು ತೀವ್ರ ಆತಂಕ ಉಂಟು ಮಾಡಿದೆ. ರಾಷ್ಟ್ರೀಯ ಕಾರ್ಯಕ್ರಮದಡಿ ಜಿಲ್ಲೆಯ ಎಲ್ಲೆಡೆ ಸಾಮಾರು ಎರಡೂವರೆ ಸಾವಿರ ಮಕ್ಕಳಿಗೆ ಲಸಿಕೆ ಹಾಕಲಾಗಿದೆ.

ಎಲ್ಲಿಯೂ ಯಾವುದೇ ಆತಂಕಕಾರಿ ಘಟನೆ ಸಂಭವಿಸಿಲ್ಲ. ಸಾವನ್ನಪ್ಪಿದ ಈ ಎರಡು ಮಕ್ಕಳು ಸೋಂಕಿನಿಂದ ಬಳಲುತ್ತಿದ್ದವು ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಆದರೆ, ಅನಾರೋಗ್ಯದಿಂದ ಬಳಲುತ್ತಿರುವ, ಅಪೌಷ್ಠಿಕತೆಯಿಂದ ನರಳುತ್ತಿರುವ ಮತ್ತು ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆದುಕೊಂಡಿರುವ ಮಕ್ಕಳನ್ನು ಇಂತಹ ಲಸಿಕಾ ಕಾರ್ಯಕ್ರಮಗಳಿಂದ ಹೊರಗಿಡಬೇಕು ಎನ್ನುವುದು ವೈಜ್ಞಾನಿಕವಾಗಿ ಪ್ರತಿಪಾದಿಸುವ ಅಂಶ. ಏಕೆಂದರೆ, ಈ ಆರೋಗ್ಯ ಸಮಸ್ಯೆಗಳು ಮತ್ತು ಅದಕ್ಕೆ ಸಂಬಂಧಿಸಿದಂತೆ ತೆಗೆದುಕೊಳ್ಳುತ್ತಿರುವ ಔಷಧೋಪಚಾರಗಳು ಪ್ರತಿಕೂಲ ಪರಿಣಾಮವನ್ನು ಬೀರಿ ಸಾವಿಗೆ ಕಾರಣವಾಗಬಹುದು.

ವಯಸ್ಕರಲ್ಲಿ ಸಹಜವಾಗಿಯೇ ರೋಗ ನಿರೋಧಕ ಶಕ್ತಿ ಹೆಚ್ಚಿರುವುದರಿಂದ ದೇಹವು ಎರಡು ಅಥವಾ ಅದಕ್ಕಿಂತ ಹೆಚ್ಚು ಬಗೆಯ ಔಷಧಗಳನ್ನು ಒಟ್ಟಿಗೇ ಸೇವಿಸಿದಾಗ ಉಂಟಾಗಬಹುದಾದ ಅಡ್ಡಪರಿಣಾಮಗಳನ್ನು ಸಹಜವಾಗಿಯೇ ಮೆಟ್ಟಿ ನಿಲ್ಲುತ್ತದೆ. ಆದರೆ, ಹಸುಳೆಗಳಲ್ಲಿ ಇದು ಅಸಾಧ್ಯ. ಈ ಇಬ್ಬರು ಮಕ್ಕಳು ಲಸಿಕೆಗೂ ಮುನ್ನ ಬೇರೆ ಔಷಧಗಳನ್ನು ಸೇವಿಸಿದ್ದರೇ ಎಂಬ ಬಗ್ಗೆ ತನಿಖೆ ಆರಂಭವಾಗಿದ್ದು, ಲಸಿಕೆ ಹಾಕಿದ ಎಎನ್ಎಂ ಗೀತಾ ನುರಿತರಾಗಿದ್ದು, ಇಂತಹ ಅಸಂಖ್ಯಾತ ಆರೋಗ್ಯ ಸಂರಕ್ಷಣಾ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಈಗ ಗ್ರಾಮಸ್ಥರಿಂದ ಹಿಡಿದು ವಿವಿಧ ಇಲಾಖೆಗಳ ನೂರಾರು ಸಿಬ್ಬಂದಿ ಮತ್ತು ಅಧಿಕಾರಿಗಳ ಪ್ರಶ್ನೆಗಳ ಸುರಿಮಳೆಗಳಿಂದ ಗೀತಾ ತೀವ್ರ ಮಾನಸಿಕವಾಗಿ ಕುಗ್ಗಿ ಹೋಗಿದ್ದು, ಆಕೆಯ ಆರೋಗ್ಯ ಸ್ಥಿತಿಯೂ ಏರುಪೇರಾಗಿದೆ.

ಎಲ್ಲದರ ನಡುವೆ ಈ ಸಾವುಗಳಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಪ್ರಯೋಗಾಲಯಕ್ಕೆ ಕಳುಹಿಸಿದ ವರದಿ ಬಂದ ಬಳಿಕ ತಿಳಿಯಲಿದೆ ಎಂದು ಹೇಳಿದ್ದಾರೆ

See also  ನ.30 ರಂದು ಸಿಎನ್‍ಸಿಯಿಂದ ಪುತ್ತರಿ ನಮ್ಮೆ ಆಚರಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು