News Kannada
Wednesday, November 30 2022

ಕರ್ನಾಟಕ

ಆ ಮನೆಯಲ್ಲಿ ಹುತ್ತ ಬೆಳೆಯುತ್ತಿದೆ… ಹಾವು ಕಾಣಿಸುತ್ತಿದೆ.. - 1 min read

Photo Credit :

ಆ ಮನೆಯಲ್ಲಿ ಹುತ್ತ ಬೆಳೆಯುತ್ತಿದೆ... ಹಾವು ಕಾಣಿಸುತ್ತಿದೆ..

ಮಂಡ್ಯ: ಭಾರತೀನಗರದ ಬಿದರಹೊಸಹಳ್ಳಿ ಗ್ರಾಮದ ಮಹೇಶ್ ಎಂಬುವರ ಹೊಸ ಮನೆಯ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಅದಾಗಲೇ ಅಲ್ಲಿ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳ ತೊಡಗಿದ್ದು, ಮನೆ ಮಾಲೀಕರು ಆತಂಕಗೊಳ್ಳುವಂತಾಗಿದೆ.

ಇಷ್ಟರಲ್ಲೇ ಭವ್ಯ ಬಂಗಲೆ ಎದ್ದು ನಿಲ್ಲಬೇಕಿತ್ತು. ಆದರೆ ನಿರ್ಮಾಣ ಹಂತದಲ್ಲಿರುವ ಮನೆಯಲ್ಲಿ ಹುತ್ತಗಳು ಎಲ್ಲೆಂದರಲ್ಲಿ ಉದ್ಭವವಾಗುತ್ತಿದ್ದರೆ ಹಾವು ಕಾಣಿಸಿಕೊಳ್ಳುತ್ತಿದೆ. ಇದು ಮನೆ ಮಾಲೀಕರಿಗೆ ಆತಂಕ ತಂದಿದ್ದರೆ, ಜನ ಮಾತ್ರ ಈ ಅಚ್ಚರಿಯನ್ನು ನೋಡಲು ಮುಗಿ ಬೀಳುತ್ತಿದ್ದಾರೆ.

ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಮಹೇಶ್ ಅವರು ಹೊಸ ಮನೆಯೊಂದು ನಿರ್ಮಾಣ ಮಾಡಲು ಮುಂದಾಗಿ ಕಾಮಗಾರಿ ಆರಂಭವಾಗಿತ್ತು. ಮನೆಯ ಕೆಲಸ ಕಾರ್ಯಗಳು ಭರದಿಂದ ಸಾಗಿರುವಾಗಲೇ ಮೊದಲು ಅಡುಗೆ ಮನೆಯಲ್ಲಿ ಹುತ್ತ ಕಾಣಿಸಿತು. ಅದನ್ನು ತೆರವುಗೊಳಿಸಿ ಮುಂದಿನ ಕಾರ್ಯವನ್ನು ಮಾಡಲಾಯಿತು. ಆದರೆ ತೆರವು ಗೊಳಿಸಿದ ನಂತರವೂ ಹುತ್ತಬೆಳೆಯುತ್ತಲೇ ಹೋಗತೊಡಗಿತು. ಈಗಾಗಲೇ ಹಲವು ಸಲ ಹುತ್ತವನ್ನು ತೆರವುಗೊಳಿಸುವ ಕಾರ್ಯ ಮಾಡಲಾಗಿದೆಯಾದರೂ ಯಾವುದೇ ಪ್ರಯೋಜನವಾಗಿಲ್ಲ.

ಈ ಸಮಸ್ಯೆಗೆ ಪರಿಹಾರ ಕಾಣಲು ಮಹೇಶ್ ಅವರು ಜ್ಯೋತಿಷಿಗಳ ಬಳಿಗೆ ಹೋದಾಗ ಅವರು ಒಂದಷ್ಟು ಸಲಹೆ ನೀಡಿದರಲ್ಲದೆ, ಹುತ್ತ ತೆಗೆದರೆ ತೊಂದರೆ ಆಗುತ್ತದೆ ಎಂಬ ಎಚ್ಚರಿಕೆಯನ್ನು ಜೊತೆಯಲ್ಲಿಯೇ ನೀಡಿದರು. ಇದರಿಂದ ಇನ್ನಷ್ಟು ಆತಂಕವಾಯಿತೇ ವಿನಃ ಸಮಸ್ಯೆಗೆ ಪರಿಹಾರ ಮಾತ್ರ ಸಿಕ್ಕಿಲ್ಲ.

ಇದಾದ ಬಳಿಕ ಹೊನ್ನಾಯಕನಹಳ್ಳಿ ಬಸವನನ್ನು ಕರೆಯಿಸಿ ಬೆಳೆಯುತ್ತಿದ್ದ ಹುತ್ತವನ್ನು ತೋರಿಸಿದಾಗ ಅದು ಕೊಂಬಿನಿಂದ ಹುತ್ತದ ತುದಿಯನ್ನು ತೆಗೆದು ನಾಲಿಗೆಯಿಂದ ನೆಕ್ಕಿತಂತೆ. ಇದಾದ ಬಳಿಕ ಅಲ್ಲಿ ಹುತ್ತ ಬೆಳೆದಿಲ್ಲವಂತೆ. ಅಲ್ಲದೆ ಸುಮಾರು ಹದಿನೇಳು ಅಡಿ ಬಿಟ್ಟು ಉಳಿದ ಜಾಗದಲ್ಲಿ ವಾಸಿಸುವಂತೆ ಬಸವ ಸೂಚನೆ ನೀಡಿದೆಯಂತೆ.

ಇದರ ನಡುವೆ ಇಲ್ಲಿ ಹಾವು ಕಾಣಿಸಿಕೊಂಡಿದ್ದು, ಹಿಡಿಯಲು ಮುಂದಾದಾಗ ಕಾಣಲಿಲ್ಲವಂತೆ ಬಳಿಕ ಅದು ಕಾಣಿಸಿಕೊಂಡಾಗ ಅದನ್ನು ಶಿಂಗಟಗೆರೆ ಶಿಕ್ಷಕ ಅರಸು ಅವರ ಮೂಲಕ ಹಿಡಿದು ಕಾಡಿಗೆ ಬಿಟ್ಟಿದ್ದಾರಂತೆ. ಮನೆ ನೋಡಲು ಬಂದ ಜನ ಹುತ್ತ ನೋಡಿ ನಮಿಸಿಕೊಂಡು ಹಿಂತಿರುಗುತ್ತಿದ್ದಾರೆ. ವಿಷಯ ತಿಳಿದ ಜನ ಇಲ್ಲಿಗೆ ಬರುತ್ತಿದ್ದಾರೆ

ಮನೆ ನಿರ್ಮಿಸುತ್ತಿರುವ ಮಾಲೀಕ ಮಹೇಶ್ ಅವರಿಗೆ ಮಾತ್ರ ಅದ್ಯಾಕೋ ನೆಮ್ಮದಿಯಿಲ್ಲದಂತಾಗಿದೆ. ಬಂದ ಜನರೆಲ್ಲ ಒಂದೊಂದು ರೀತಿಯ ಸಲಹೆ ನೀಡುತ್ತಿದ್ದಾರೆ. ಸದ್ಯಕ್ಕೆ ಹುತ್ತ ಬೆಳೆಯುವ ಮನೆಯಲ್ಲಿ ಹೇಗೆ ವಾಸಿಸೋದು ಎಂಬ ಭಯ ಅವರನ್ನು ಕಾಡುತ್ತಿದೆ

See also  ಮಡಿಕೇರಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರ ನೇಮಕಕ್ಕೆ ವಿರೋಧ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು