News Kannada
Friday, December 02 2022

ಕರ್ನಾಟಕ

ಇಂದಾವರ ಗ್ರಾಮದಲ್ಲಿ ಗಬ್ಬು ಹರಡುತ್ತಿದೆ ಚಿಕ್ಕಮಗಳೂರಿನ ಕಸ

Photo Credit :

ಇಂದಾವರ ಗ್ರಾಮದಲ್ಲಿ ಗಬ್ಬು ಹರಡುತ್ತಿದೆ ಚಿಕ್ಕಮಗಳೂರಿನ ಕಸ

ಚಿಕ್ಕಮಗಳೂರು: ಇಲ್ಲಿಗೆ ಅಂಟಿಕೊಂಡಂತಿರೋ ಇಂದಾವರ ಗ್ರಾಮದಲ್ಲಿ 250 ಕ್ಕೂ ಹೆಚ್ಚು ಮನೆಗಳಿದ್ದು ಸಾವಿರಾರು ಜನ ವಾಸ ಮಾಡುತ್ತಿದ್ದಾರೆ. ಇದೀಗ ಈ ಗ್ರಾಮದಲ್ಲಿ ನಾನಾ ರೀತಿಯ ರೋಗಗಳು ಕಾಣಿಸಿಕೊಳ್ಳುತ್ತೀವೆ.

ಇನ್ನೂ ಮೂಕಪ್ರಾಣಿಗಳು ಮೂಕರೋದನೆಯಿಂದ ಸಾವನ್ನಪ್ಪುತ್ತೀವೆ. ಇಷ್ಟೆಕ್ಕೆಲ್ಲಾ ಕಾರಣ ಚಿಕ್ಕಮಗಳೂರಿನ ಕಸ. 2007 ರಿಂದಲೂ ನಗರಸಭೆ ಚಿಕ್ಕಮಗಳೂರಿನ ಕಸವನ್ನೆಲ್ಲಾ ಇಲ್ಲಿಗೆ ತಂದು ಸುರಿಯುತ್ತಿದೆ. ಆರಂಭದಿಂದಲೂ ಗ್ರಾಮಸ್ಥರು ತ್ಯಾಜ್ಯ ವಿಲೇವಾರಿಗೆ ವಿರೋಧಿಸಿ, ಪರ್ಯಾಯ ವ್ಯವಸ್ಥೆಗೆ ಆಗ್ರಹಿಸಿದ್ದರು. ಆದ್ರೆ, ಆನೆ ನಡೆದದ್ದೇ ದಾರಿ ಎಂಬಂತೆ ವರ್ತಿಸಿದ ನಗರಸಭೆ ಕಸವನ್ನು ಮತ್ತೆ ತಂದು ಇಲ್ಲಿಗೆ ಸುರಿಯುತ್ತಿದೆ. ಕುಡಿಯುವ ನೀರು ಕಲುಷಿತಗೊಳ್ಳುತ್ತಿದೆ. ಇದರ ವಿರುದ್ಧ ಹೋರಾಟ, ಮನವಿ ಎಲ್ಲವನ್ನೂ ಮಾಡಿದರು ಜಗ್ಗದ ನಗರಸಭೆಯ ನಡೆಗೆ ಬೇಸತ್ತ ಗ್ರಾಮಸ್ಥರು ನೋಣ, ಊರಿನ ತ್ಯಾಜ್ಯದ ವಾಸನೆಯ ಜೊತೆ ಬದುಕು ಸಾಗಿಸುತ್ತಿದ್ದಾರೆ.

ನೀರಿನೊಂದಿಗೆ ಕಸ, ಪ್ಲಾಸ್ಟಿಕ್ ಹಾಗೂ ಕೊಳೆತ ವಸ್ತುಗಳು ಊರಿನೊಳಕ್ಕೆ ಬರುತ್ತಿದೆ. ಇದೀಗ ಊರೆಲ್ಲಾ ನೊಣಗಳು ಹರಡುತ್ತಿದೆ ಎಂದು ಒಣಗಿದ ಕಸಗಳಿಗೆ ಬೆಂಕಿ ಹಚ್ಚಿಕೊಳ್ಳುತ್ತಿದ್ದು ಊರಿನ ವಾತವರಣವೇ ಹದಗೆಟ್ಟಿದೆ. ಇಲ್ಲಿನ ಜನರು ಈ ಕೆಟ್ಟ ವಾಸನೆಯಿಂದ ಉಸಿರಾಡಲು ತೊಂದರೆ ಪಡುವಂತೆ ಸ್ಥಿತಿ ಬಂದು ಒದಗಿದೆ. ದನಕರುಗಳ ಆರೋಗ್ಯದಿಂದ ಕೂಡಿದೆ. ಜನರು ಸಂಬಂಧಪಟ್ಟೋರ ಗಮನಕ್ಕೆ ತಂದ್ರು ಸಂಬಂಧವಿಲ್ಲದಂತೆ ಸುಮ್ಮನಿದ್ದಾರೆ. ಊರಿನೊಳಗೆ ಸೊಳ್ಳೆ, ನೋಣಗಳ ಕಾಟ ಹೆಚ್ಚಾಗಿದ್ದು, ಊರಿನೊಳಗೆ ಜನರು ಬದುಕುವುದಕ್ಕೆ ಕಷ್ಟವಾಗುತ್ತಿದೆ.

ಕಸದ ಸಮಸ್ಯೆಯಿಂದ ಗ್ರಾಮಸ್ಥರು ಹಾಗೂ ಮೂಕಪ್ರಾಣಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು ಚಿಕ್ಕಮಗಳೂರಿನ ನಗರಸಭೆ ಹಾಗೂ ಜಿಲ್ಲಾಡಳಿತಕ್ಕೆ ಇಂದಾವರ ಗ್ರಾಮದ ಜನರ ಕೂಗು ಮಾತ್ರ ಕೇಳ್ತಿಲ್ಲ. ಇನ್ನಾದ್ರೂ ಜಿಲ್ಲಾಡಳಿತ ಹಾಗೂ ನಗರಸಭೆ ಗಮನ ಹರಿಸಿ ಸಮಸ್ಯೆಯನ್ನು ಬಗೆಹರಿಸುತ್ತಾ ಎಂಬುದನ್ನು ಕಾದುನೋಡಬೇಕಾಕಿದೆ.

See also  ಅಪಪ್ರಚಾರಕ್ಕೆ ಕಿವಿಗೊಡಬೇಡಿ: ಶಾಸಕ ಕೆ.ಜಿ.ಬೋಪಯ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

179

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು