News Kannada
Friday, December 02 2022

ಕರ್ನಾಟಕ

ನಾಳೆಯಿಂದ ಕೇರಳದಲ್ಲಿ ಖಾಸಗಿ ಬಸ್ ಮುಷ್ಕರ

Photo Credit :

ನಾಳೆಯಿಂದ ಕೇರಳದಲ್ಲಿ ಖಾಸಗಿ ಬಸ್ ಮುಷ್ಕರ

ಕಾಸರಗೋಡು: ಪ್ರಯಾಣ ಏರಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಾಳೆ (16)ಯಿಂದ ಕೇರಳದಲ್ಲಿ ಖಾಸಗಿ ಬಸ್ ಗಳ ಅನಿರ್ಧಿಷ್ಟಾವಧಿ ಮುಷ್ಕರ ನಡೆಯಲಿದೆ.

ಪ್ರಯಾಣ ದರ ಏಳು ರೂ.ನಿಂದ ಎಂಟು ರೂ. ಗೇರಿಸಿದ್ದರೂ 10ರೂ.ಗೇರಿಸಬೇಕು ಎಂದು ಬಸ್ ಮಾಲಕರು ಪಟ್ಟು ಹಿಡಿದಿದ್ದು, ಸರಕಾರ ಬೇಡಿಕೆ ಅಂಗೀಕರಿಸದಿರುವುದರಿಂದ ಮುಷ್ಕರ ನಡೆಸಲಾಗುವುದು ಎಂದು ಸಂಘದ ರಾಜ್ಯ ಮುಖಂಡರು ತಿಳಿಸಿದ್ದಾರೆ.

ಜಸ್ಟಿಸ್ ರಾಮಚಂದ್ರನ್ ಆಯೋಗದ ವರದಿಯಲ್ಲಿನ ಶಿಫಾರಸುಗಳನ್ನು ಜಾರಿಗೆ ತರಬೇಕು ಎಂದು ಸಂಘ ಒತ್ತಾಯಿಸಿದೆ.

ವಿದ್ಯಾರ್ಥಿಗಳ ರಿಯಾಯಿತಿ ಪ್ರಯಾಣ ದರ ಏರಿಕೆ ಮಾಡಬೇಕು, ರಿಯಾಯಿತಿ ದರಕ್ಕೆ ಪ್ರಾಯ ನಿಗದಿಪಡಿಸಬೇಕು, ವಿದ್ಯಾರ್ಥಿಗಳ ರಿಯಾಯಿತಿ ದರವನ್ನು ಕನಿಷ್ಠ ಐದು ರೂ. ಮಾಡಬೇಕು, ಖಾಸಗಿ ಬಸ್ ಗಳ ಪರವಾನಿಗೆ ನವೀಕರಿಸಬೇಕು, ಹೆಚ್ಚಿಸಿದ ರಸ್ತೆ ತೆರಿಗೆಯನ್ನು ಕಡಿಮೆ ಮಾಡಬೇಕು, ಪೆಟ್ರೋಲ್, ಡೀಸೆಲ್ ಮೇಲಿನ ಜಿಎಸ್ ಟಿಯನ್ನು ಕಡಿಮೆ ಮಾಡಬೇಕು, ಮೊದಲಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರಕ್ಕೆ ಕರೆ ನೀಡಿದೆ.
ಮುಷ್ಕರಕ್ಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಪ್ರಯಾಣ ದರವನ್ನು ರಾಜ್ಯ ಸರಕಾರ 7ರೂ.ನಿಂದ ಎಂಟು ರೂ.ಗೆ ಏರಿಕೆ ಮಾಡಲಾಗಿತ್ತು. ಆದರೆ ಮಾಲಕರ ಬಹುತೇಕ ಬೇಡಿಕೆ ಈಡೇರಿಕೆಗೆ ಸರಕಾರ ಮುಂದಾಗದಿರುವುದನ್ನು ಪ್ರತಿಭಟಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದೆ.

ಮಾತುಕತೆಗೆ ಸಿದ್ದ: ಸಾರಿಗೆ ಸಚಿವ
ಬಸ್ ಮಾಲಕರ ಬೇಡಿಕೆ ಕುರಿತು ಚರ್ಚಿಸಲು ಮಾತುಕತೆಗೆ ಸಿದ್ದ ಎಂದು ರಾಜ್ಯ ಸಾರಿಗೆ ಸಚಿವ ಎ. ಕೆ. ಶಶೀ೦ದ್ರನ್ ತಿಳಿಸಿದ್ದಾರೆ. ಜನರ ಸಮಸ್ಯೆಯನ್ನು ಬಸ್ ಮಾಲಕರು ಮನಗಾಣಬೇಕು. ಸರಕಾರದಿಂದ ಸಾಧ್ಯವಾಗುವ ಬೇಡಿಕೆಗಳನ್ನು ಪರಿಹರಿಸಲು ಮುಂದಾಗುವುದಾಗಿ ಅವರು ತಿಳಿಸಿದ್ದಾರೆ.

See also  ಶೀಘ್ರವೇ ಕೊರೋನಾ ಸೋಂಕು ಪತ್ತೆ ಮಾಡಲು ಕಾರವಾರದಲ್ಲಿ ಲ್ಯಾಬ್ ಉದ್ಘಾಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು