News Kannada
Tuesday, November 29 2022

ಕರ್ನಾಟಕ

ಕಂಟೈನರ್ ನ ಬ್ರೇಕ್ ವಿಫಲ : ಮಡಿಕೇರಿಯಲ್ಲಿ ತಪ್ಪಿದ ಭಾರೀ ಅನಾಹುತ - 1 min read

Photo Credit :

ಕಂಟೈನರ್ ನ ಬ್ರೇಕ್ ವಿಫಲ : ಮಡಿಕೇರಿಯಲ್ಲಿ ತಪ್ಪಿದ ಭಾರೀ ಅನಾಹುತ

ಮಡಿಕೇರಿ: ಕಂಟೈನರ್ ನ ಬ್ರೇಕ್ ವಿಫಲಗೊಂಡು ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ಮಡಿಕೇರಿ ನಗರದ ನಾರ್ತ್ ಕೂರ್ಗ್ ಬಳಿ ನಡೆದಿದೆ. ಬುಧವಾರ ರಾತ್ರಿ ಸುಮಾರು 11 ಗಂಟೆಗೆ ಮೈಸೂರಿನಿಂದ ಮಂಗಳೂರಿಗೆ ಜಾನುವಾರುಗಳ ಆಹಾರವನ್ನು ಸಾಗಿಸುತ್ತಿದ್ದ ಕಂಟೈನರ್ ಮಡಿಕೇರಿ ನಗರ ಪ್ರವೇಶಿಸುತ್ತಿದ್ದಂತೆ ಬ್ರೇಕ್ ವಿಫಲಗೊಂಡಿರುವ ಬಗ್ಗೆ ಚಾಲಕ ರಾಮ್ ಸಮದ್ ಯಾದವ್ ಅವರ ಗಮನಕ್ಕೆ ಬಂದಿದೆ.

ತಕ್ಷಣ ಎಚ್ಚೆತ್ತುಕೊಂಡ ಅವರು ಯಾವುದೇ ಜೀವಹಾನಿ ಆಗದ ರೀತಿ ಕಂಟೈನರ್ ನ್ನು ನಿಯಂತ್ರಿಸಬೇಕೆಂದು ಸಮಯ ಪ್ರಜ್ಞೆ ಮೆರೆದು ಇನ್ನಿಲ್ಲದ ಪ್ರಯತ್ನಗಳನ್ನು ಮಾಡಿದಮಾಡಿದ್ದಾರೆ.

ಇಳಿಜಾರಾದ ಮಂಗಳೂರು ರಸ್ತೆಗೆ ಸಾಗಿದರೆ ಅಪಾಯ ಖಚಿತವೆಂದು ಅರಿತ ರಾಮ್ ಸಮದ್ ಯಾದವ್ ಕಂಟೈನರ್ ನ್ನು ಮಡಿಕೇರಿ ನಗರದೊಳಗೆ ಕೊಂಡೊಯ್ದಿದ್ದಾರೆ. ಈ ಸಂದರ್ಭ ನಗರ ಪೊಲೀಸ್ ಠಾಣೆ ಬಳಿ ಬರುತ್ತಿದ್ದಂತೆ ಮುಂದೆ ಇಳಿಜಾರು ಇದೆ ಎಂದು ತಿಳಿದ ಚಾಲಕ ತಕ್ಷಣ ಕಂಟೈನರ್ನ್ನು ನಾರ್ತ್ ಕೂರ್ಗ್ ಕ್ಲಬ್ಸ್ ನ ಕಾಂಪೌಡ್ ಗೆ ಡಿಕ್ಕಿ ಪಡಿಸಬೇಕೆಂದು ಪ್ರಯತ್ನಿಸಿದರಾದರೂ ನಿಯಂತ್ರಣಕ್ಕೆ ಬಾರದ ಕಂಟೈನರ್ ಫುಟ್ಪಾತ್ ನ ಮೇಲೆ ಸಾಗಿ ಬರೆಗೆ ಡಿಕ್ಕಿಯಾಗಿ ಭಗವಾನ್ ಗ್ಲಾಸ್ ಅಂಗಡಿ ಬಳಿ ಬಂದು ನಿಂತಿದೆ.

ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಚಾಲಕ ರಾಮ್ ಸಮದ್ ಯಾದವ್ ಅವರ ಸಮಯ ಪ್ರಜ್ಞೆಯನ್ನು ಶ್ಲಾಘಿಸಿದರು. ಸಾರ್ವಜನಿಕರು ಕೂಡ ಭೇಷ್ ಎಂದರು. ಬ್ರೇಕ್ ವಿಫಲಗೊಂಡು ನಗರವನ್ನು ಪ್ರವೇಶಿಸಿದ ಕಂಟೈನರ್ ರಸ್ತೆಯಲ್ಲಿ ಸಾಗುತ್ತಿದ್ದ ಕಾರು ಹಾಗೂ ಬೈಕ್ ಗಳ ಮೇಲೆ ಹರಿಯುವ ಸಾಧ್ಯತೆಗಳಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮಂಗಳೂರು ರಸ್ತೆಗೆ ಹೋಗಿದ್ದರೂ ಸಾವುನೋವುಗಳ ಸಂಭವಿಸುತ್ತಿತ್ತು. ಆದರೆ ಚಾಲಕನ ಸಾಹಸದಿಂದ ಭಾರೀ ಅನಾಹುತವೊಂದು ತಪ್ಪಿದಂತ್ತಾಗಿದೆ.

See also  ಎರಡು ಮನೆಗಳಿಗೆ ನುಗ್ಗಿ ನಗ-ನಗದು ಕಳವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು