News Kannada
Tuesday, December 06 2022

ಕರ್ನಾಟಕ

ಬಾವುಟ ಕಟ್ಟುವ ವಿಚಾರದಲ್ಲಿ ಎರಡು ಗುಂಪುಗಳ ಗಲಾಟೆ: ಕಮಲಾಪುರದಲ್ಲಿ ಪ್ರಕ್ಷುಬ್ಧ ವಾತಾವರಣ

Photo Credit :

ಬಾವುಟ ಕಟ್ಟುವ ವಿಚಾರದಲ್ಲಿ ಎರಡು ಗುಂಪುಗಳ ಗಲಾಟೆ: ಕಮಲಾಪುರದಲ್ಲಿ ಪ್ರಕ್ಷುಬ್ಧ ವಾತಾವರಣ

ಹೊಸಪೇಟೆ: ಹಿಂದೂ- ಮುಸ್ಲಿಂ ಸಮಾಜದವರ ನಡುವೆ ಬಾವುಟ ಕಟ್ಟುವ ವಿಚಾರಕ್ಕೆ ತಾಲ್ಲೂಕಿನ ಕಮಲಾಪುರದಲ್ಲಿ ಸೋಮವಾರ ಜಗಳವಾಗಿದ್ದು, ಆ ಪ್ರದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಹಿನ್ನೆಲೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತನೊಬ್ಬ ಧ್ವಜ ಕಟ್ಟಲು ಹೋಗಿದ್ದಾನೆ. ಈ ವೇಳೆ ಮುಸ್ಲಿಂರುಆತನಿಗೆ ತಳಿಸಿದ್ದಾರೆ. ಮೆರವಣಿಗೆಯಲ್ಲಿ ಇದ್ದ ಕಾರ್ಯಕರ್ತರಿಗೆ ತಿಳಿದು ಅವರು ಮಸೀದಿ ಮೇಲೆ ಕಲ್ಲು ತೂರಿ ಗಾಜು ಪುಡಿ ಮಾಡಿದ್ದಾರೆ. ಈ ವಿಚಾರದಿಂದ ಆ ಸ್ಥಳದಲ್ಲಿ ಪ್ರಕ್ಷುಬ್ದ ವಾತಾವಣರ ನಿರ್ಮಾವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೂ ಸ್ಥಳಕ್ಕೆ ಉಪವಿಭಾಗಾಧಿಕಾರಿ ಗಾರ್ಗಿ ಜೈನ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆ ಸ್ಥಳಕ್ಕೆ ಹೆಚ್ಚುವರಿ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಇನ್ನೂ ಈ ಪ್ರದೇಶದಲ್ಲಿ ಹಿಂದೂ ಹಾಗೂ ಮುಸ್ಲಿಂ ಯುವಕರು ದೊಣ್ಣೆ ಹಿಡಿದುಕೊಂಡು ರಾಜಾರೋಷವಾಗಿ ಓಡಾಡುತ್ತಿದ್ದಾರೆ.

ಮಸೀದಿಗೆ ಕಲ್ಲೂ ತೂರಿದದವರನ್ನು ಬಂಧಿಸುವಂತೆ
ಮುಸ್ಲಿಂ ಸಮಾಜದ ಯುವಕರು ಹೊಸಪೇಟೆ- ಕಂಪ್ಲಿ ಮುಖ್ಯರಸ್ತೆಯಲ್ಲಿ ರಸ್ತೆತಡೆ ಚಳವಳಿ ನಡೆಸುತ್ತಿದ್ದಾರೆ.ಈ ಘಟನೆಯಿಂದ ಶಿವಮೊಗ್ಗ, ರಾಯಚೂರು ಕಡೆಗೆ ಹೋಗುವ ವಾಹನಗಳು ಸಾಲುಗಟ್ಟಿ ನಿಂತಿವೆ. ಪ್ರಯಾಣಿಕರು ಪರದಾಡುವಂತಾಗಿದೆ. ಇನ್ನೂ ಘಟನೆಗೆ ಕಾರಣವಾದ ದೃಶ್ಯವಾಳಿಗಳನ್ನು ಉಪವಿಭಾಗಾಧಿಕಾರಿ ಪರಿಶೀಲಿಸುತ್ತಿದ್ದಾರೆ.

 

See also  ತೆರಕಣಾಂಬಿಯಲ್ಲಿ ಹಸು ಸಾವು: ಆಂಥ್ರಾಕ್ಸ್ ಶಂಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು