News Kannada
Tuesday, November 29 2022

ಕರ್ನಾಟಕ

ಹೊಸಂಗಡಿಯಲ್ಲಿ ಐವರ ತಂಡದಿಂದ ಇಬ್ಬರ ಮೇಲೆ ಹಲ್ಲೆ - 1 min read

Photo Credit :

ಹೊಸಂಗಡಿಯಲ್ಲಿ ಐವರ ತಂಡದಿಂದ ಇಬ್ಬರ ಮೇಲೆ ಹಲ್ಲೆ

ಕಾಸರಗೋಡು: ತಂಡವೊಂದು ಮೂವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ಮಂಗಳವಾರ ರಾತ್ರಿ ಮಂಜೇಶ್ವರ ಹೊಸಂಗಡಿ ಜಂಕ್ಷನ್ ನಲ್ಲಿ ನಡೆದಿದೆ.

ಘಟನೆಯಲ್ಲಿ ಹೊಸಂಗಡಿ ಯ ನಝೀರ್ (37), ಪೋಸೋಟ್ ನ ಆತಿಫ್ (20) ಮತ್ತು ಮಂಜೇಶ್ವರ ಗಾಂಧಿನಗರ ದ ಮುಹಮ್ಮದ್ ಅಶ್ರಫ್ (33) ಎಂಬವರು ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಝೀರ್ ಅವರು ಹೊಸಂಗಡಿಯಲ್ಲಿ ಜ್ಯೂಸ್ ಅಂಗಡಿ ಹೊಂದಿದ್ದು, ಅಲ್ಲಿ ಆತಿಫ್ ಕೆಲಸ ಮಾಡುತ್ತಿದ್ದ. ರಾತ್ರಿ 10 ಗಂಟೆ ಸುಮಾರಿಗೆ ಅಂಗಡಿ ಬಂದ್ ಮಾಡುವ ಸಂದರ್ಭ 5 ದ್ವಿಚಕ್ರ ವಾಹನಗಳಲ್ಲಿ ಆಗಮಿಸಿದ ತಂಡ ಅವರ ಮೇಲೆ ತಲವಾರು ದಾಳಿ ನಡೆಸಿದೆ. ಈ ಸಂದರ್ಭ ಅಂಗಡಿಗೆ ಜ್ಯೂಸ್ ಕುಡಿಯಲು ಬಂದಿದ್ದ ಅಶ್ರಫ್ ಮೇಲೂ ಗುಂಪು ತಲವಾರು ದಾಳಿ ನಡೆಸಿದೆ.
ಘಟನೆಯಲ್ಲಿ ಆತಿಫ್ ರಿಗೆ ಕುತ್ತಿಗೆಗೆ ಹಲ್ಲೆ ಮಾಡುವ ಸಂದರ್ಭ ಅವರು ತಡೆಯಲು ಯತ್ನಿಸಿದಾಗ ಕೈಗೆ ತಲವಾರು ದಾಳಿಯಾಗಿದೆ. ನಝೀರ್ ರಿಗೆ ಕುತ್ತಿಗೆಗೆ ಏಟು, ಅಶ್ರಫ್ ರಿಗೆ ತಲೆಗೆ ಗಾಯವಾಗಿದೆ.

ದಾಳಿ ನಡೆಸಿದವರು ಗಾಂಜಾ ವ್ಯಸನಿಗಳು ಮತ್ತು ಗಾಂಜಾ ವ್ಯವಹಾರ ನಡೆಸುತ್ತಿದ್ದವರು ಎಂದು ಆರೋಪಿಸಲಾಗಿದೆ.

ಇದೇ ಗಾಂಜಾ ವ್ಯವಹಾರದ ಬಗ್ಗೆ ಕೆಲವು ಸ್ಥಳೀಯ ಯುವಕರು ಮಂಜೇಶ್ವರ ಠಾಣೆಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಈ ಹಲ್ಲೆ ನಡೆದಿದೆ ಎಂದು ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ನಝೀರ್ ದೂರಿದ್ದಾರೆ.

ಮಂಜೇಶ್ವರ ಠಾಣೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿರುವುದಾಗಿ ಆರೋಪಿಗಳಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

See also  ಭಾಳೆಹೊನ್ನೂರಿನಲ್ಲಿ ಶ್ರೀ ಜಗದ್ಗುರು ರೇಣುಕಾ ಚಾರ್ಯರ ಪ್ರತಿಮೆ ನಿರ್ಮಾಣ: ಸಚಿವ ಸಿ.ಟಿ. ರವಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು