News Kannada
Saturday, October 08 2022

ಕರ್ನಾಟಕ

ದೇಶಕ್ಕಾಗಿ ಭೂಮಿ ತ್ಯಾಗ ಮಾಡಿದವರಿಗೆ 30 ವರ್ಷದ ಬಳಿಕ ಪರಿಹಾರ ವಿತರಣೆ - 1 min read

Photo Credit :

ದೇಶಕ್ಕಾಗಿ ಭೂಮಿ ತ್ಯಾಗ ಮಾಡಿದವರಿಗೆ 30 ವರ್ಷದ ಬಳಿಕ ಪರಿಹಾರ ವಿತರಣೆ

ಕಾರವಾರ: ದೇಶದ ಬೃಹತ್ ಯೋಜನೆಗಳಲ್ಲಿ ಒಂದಾದ ಬೃಹತ್ ನೌಕಾನೆಲೆ ಸ್ಥಾಪನೆಗಾಗಿ ಕಳೆದ 30 ವರ್ಷಗಳ ಹಿಂದೆ ದೇಶದ ರಕ್ಷಣೆಗಾಗಿ ತಮ್ಮ ಜಮೀನು ತ್ಯಾಗ ಮಾಡಿದ ಜನರಿಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಾಂಕೇತಿಕವಾಗಿ 96 ಜನರಿಗೆ 4,52,12,740 ರೂ. ಪರಿಹಾರದ ಚೆಕ್ ವಿತರಣೆ ಮಾಡಿದರು.

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ರಂಗಮಂದಿರದಲ್ಲಿ ಪರಿಹಾರದ ಚೆಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಪ್ರಾರಂಭದಲ್ಲಿ ಪರಿಹಾರದ ಚೆಕ್ ವಿತರಣೆಗೆ ವಿಳಂಬವಾಗಿದ್ದಕ್ಕೆ ಕ್ಷಮಾಯಾಚನೆ ಮಾಡಿ, ದೇಶಕ್ಕಾಗಿ ತಮ್ಮ ಜಮೀನು ನೀಡಿದಕ್ಕೆ ಸಂತ್ರಸ್ಥರಿಗೆ ಧನ್ಯವಾದ ಸಲ್ಲಿಸಿದರು.

ಜಮೀನು ನೀಡಿದವರಿಗೆ ಕೇಂದ್ರ ಸರಕಾರದಿಂದ ಒಟ್ಟೂ 587 ಕೋಟಿ ರೂ. ನೀಡಬೇಕಾಗಿತ್ತು. ಆದರೆ 2014ರ ಪೂರ್ವದಲ್ಲಿ ಯಾವುದೇ ಸರಕಾರ ಈ ಬಗ್ಗೆ ಸೂಕ್ತ ರೀತಿಯಲ್ಲಿ ಪರಿಹಾರ ಕೈಗೊಂಡಿಲ್ಲ. ಜನರು ಜಮೀನು ನೀಡಿದಾಗಿ ಕೇವಲ 75 ಕೋಟಿ ರೂ. ಪರಿಹಾರ ನೀಡಿತ್ತು. ಆದರೆ ಆ ಹಣವೂ ಜನರ ಖಾತೆಗೆ ಸೇರಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಸರಕಾರ ಆಡಳಿತಕ್ಕೆ ಬಂದ ಮೂರು ವರ್ಷದ ಅವಧಿಯಲ್ಲಿ ಈವರೆಗೆ 459 ಕೋಟಿ ರೂ. ಪರಿಹಾರ ನೀಡಲಾಗಿದೆ. ಬಾಕಿ ಇರುವ 53 ಕೋಟಿ ರೂ. ಫೆ.27ರೊಳಗೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮತ್ತು ಅಂಕೋಲಾ ತಾಲೂಕಿನ 13 ಗ್ರಾಮಗಳಲ್ಲಿ ಭಾರತೀಯ ರಕ್ಷಣಾ ಸಚಿವಾಯದಿಂದ ನೌಕಾ ನೆಲೆಯನ್ನು ಸ್ಥಾಪಿಸುವ ಉದ್ದೇಶದಿಂದ 2412 ಎಕರೆ 15 ಗುಂಟೆ ಖಾಸಗಿ ಜಮೀನನ್ನು 1988 ರಿಂದ 2000ರವರೆಗೆ ಸ್ವಾದೀನ ಪಡಿಸಿಕೊಂಡಿದ್ದು ಮತ್ತು ಮಾಜಿ ಭೂ ಮಾಲೀಕರು ಮತ್ತು ಅವರ ಅವಲಂಭಿತ ಕುಟುಂಬದವರಿಗೆ 126 ಕೋಟಿ ರೂಪಾಯಿಗಳಲ್ಲಿ 22.55 ಕೋಟಿ ರೂ. ಪರಿಹಾರ ಮೊತ್ತವನ್ನು ನೀಡಲಾಗಿದೆ. ಈ ಪರಿಹಾರ ಮೊತ್ತಕ್ಕೆ ಸಂತೃಪ್ತಿ ಹೊಂದದ ಮಾಜಿ ಭೂ ಮಾಲಿಕರರು ಕಾರವಾರ ವಿಶೇಷ ಭೂ ಸ್ವಾಧೀನ ಅಧಿಕಾರಿಗೆ ಭೂ ಅತಿಕ್ರಮಣ ಕಾಯ್ದೆ 1984 ರನ್ವಯ ಪರಿಹಾರ ಮೊತ್ತಕ್ಕೆದಾವೆ ಹೂಡಿದ್ದರಿಂದ ಸುಪ್ರೀಂಕೋರ್ಟ್ ಪ್ರತಿ ಎಕರೆಗೆ 4.60 ಲಕ್ಷರೂ ಗಳನ್ನು ನೀಡಬೇಕೆಂದು ಆದೇಶ ನೀಡಿತ್ತು ಎಂದರು.

ಸುಪ್ರೀಂ ಕೋರ್ಟ್ ಆದೇಶದನ್ವಯ ಭಾರತರಕ್ಷಣಾ ಸಚಿವಾಲಯವು 1008 ಪ್ರಕರಣಗಳಿಗೆ ಇವರೆಗೆ ಹೆಚ್ಚುವರಿ 380.42 ಕೋಟಿ ಪರಿಹಾರ ಮೊತ್ತವನ್ನು ವಿಶೇಷ ಭೂ ಸ್ವಾಧಿನ ಅಧಿಕಾರಿಗಳು ವಿತರಿಸಿದ್ದಾರೆ. ಅರ್ಜಿಯನ್ನು ಭರ್ತಿ ಮಾಡಿದ ಮಾಜಿ ಭೂ ಮಾಲಿಕರಿಗೆಯು/ಎಸ್ 28 ಎ ಕಾಯ್ದೆ ಪ್ರಕಾರ ಸಚಿವಾಲಯದಿಂದ 858 ಪ್ರಕರಣಗಳಲ್ಲಿ 207.11 ಕೋಟಿ ಮೊತ್ತವನ್ನು ನೀಡಿದೆ. ಬೆಂಗಳೂರಿನ ಡಿ.ಇ.ಎಮ್ ಕಚೇರಿಯಿಂದ 2018 ಫೆ.23ರಂದು 154 ಕೋಟಿ ಪರಿಹಾರ ಮೊತ್ತವನ್ನು ಕಾರವಾರದ ವಿಶೇಷ ಭೂ ಸ್ವಾಧೀನ ಕಚೇರಿಗೆ ತಲುಪಿಸಿದ್ದು ಉಳಿದ 53.11.58.544 ರೂ ಗಳನ್ನು ಫೆಬ್ರವರಿ ಅಂತ್ಯದೊಳಗೆ ನೀಡಲಾಗುವುದು. ಒಟ್ಟು 587 ಕೋಟಿ ರೂ. ಗಳಲ್ಲಿ 18(1), ಮತ್ತು 28 (ಎ) ಸೇರಿದಂತೆ ಫಲಾನುಭವಿಗಳಿಗೆ ಕೇಂದ್ರ ಸರ್ಕಾರವು ಈಗಾಗಲೇ 524 ಕೋಟಿ ರೂ. ಗಳನ್ನು ವಿಶೇಷ ಭೂ ಸ್ವಾಧೀನ ಇಲಾಖೆಗೆ ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ, ಶಾಸಕ ಸತೀಶ್ ಸೈಲ್, ಜಿಲ್ಲಾಧಿಕಾರಿ ಎಸ್. ಎಸ್. ನಕುಲ್, ಸೀ ಬರ್ಡ್ ಅಧಿಕಾರಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

See also  ನಟ ಚೇತನ್ ವಿರುದ್ಧ FIR ದಾಖಲು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು