News Kannada
Sunday, September 25 2022

ಕರ್ನಾಟಕ

ಆಸ್ತಿಗಾಗಿ ಹೆತ್ತ ತಾಯಿ, ತಂಗಿಯನ್ನು ಗೃಹಬಂಧನದಲ್ಲಿರಿಸಿದ ಮಗಳು   - 1 min read

Photo Credit :

ಆಸ್ತಿಗಾಗಿ ಹೆತ್ತ ತಾಯಿ, ತಂಗಿಯನ್ನು ಗೃಹಬಂಧನದಲ್ಲಿರಿಸಿದ ಮಗಳು  

ಮಂಡ್ಯ: ಆಸ್ತಿಯ ಆಸೆಗಾಗಿ ಮಗಳೇ ಹೆತ್ತ ತಾಯಿ ಮತ್ತು ಬುದ್ಧಿಮಾಂದ್ಯ ತಂಗಿಯನ್ನು ಗೃಹಬಂಧನದಲ್ಲಿರಿಸಿದ್ದ ಪ್ರಕರಣ ನಗರದ ಹೌಸಿಂಗ್ಬೋರ್ಡ್ ಕಾಲೋನಿಯಲ್ಲಿ ಬೆಳಕಿಗೆ ಬಂದಿದೆ. 

ಗೀತಾ ಎಂಬಾಕೆಯೇ ತಾಯಿ  ಸುನಂದಮ್ಮ ಮತ್ತು ತಂಗಿ ರಮ್ಯಾ ಎಂಬಿಬ್ಬರನ್ನು ಗೃಹಬಂಧನದಲ್ಲಿರಿಸಿದ್ದ ಪಾಪಿ. ಗೃಹಬಂಧನದಲ್ಲಿದ್ದ ಸುನಂದಮ್ಮರ ಪತಿ ವಿಧಾನಸೌಧದಲ್ಲಿ ಕೆಲಸ ಮಾಡುತ್ತಿದ್ದಾಗ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು. ಬಡಾವಣೆಯಲ್ಲಿ ಡೂಪ್ಲೆಕ್ಸ್ ಮನೆ ಹೊಂದಿರುವ ಸುನಂದಮ್ಮ ತಮ್ಮ ಹಿರಿಯ ಮಗಳು ಗೀತಾಳನ್ನು ತಾಲೂಕಿನ ಮುದ್ದೇಗೌಡನದೊಡ್ಡಿ ಗ್ರಾಮದ ನಾಗರಾಜು ಎಂಬಾತನೊಂದಿಗೆ ಮದುವೆ ಮಾಡಿದ್ದರು. 

ಮದುವೆ ನಂತರ ಮಗಳು ಗೀತಾ ಮತ್ತು ಅಳಿಯ ನಾಗರಾಜು ಇಬ್ಬರೂ ಹೌಸಿಂಗ್ ಬೋರ್ಡ್ನ ಎಲ್ಐಜಿ ಮನೆಯನ್ನು ಬಾಡಿಗೆಗೆ ಪಡೆದು ವಾಸವಾಗಿದ್ದರು. ನಾಗರಾಜು ಪರಂಗಿ ಹಣ್ಣು ಮಾರಾಟ ಮಾಡಿ ಜೀವನ ನಡೆಸುತ್ತಿದ್ದ. ಮದುವೆ ಸಮಯದಲ್ಲಿ ಈತನಿಗೆ ದ್ವಿಚಕ್ರ ವಾಹನ, 200 ಗ್ರಾಂ. ಚಿನ್ನಾಭರಣ, 2 ನಿವೇಶನಗಳನ್ನು ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. 

ಸುನಂದಮ್ಮ ಅವರ ಕಿರಿಯ ಮಗಳು ರಮ್ಯಾ ಅವರನ್ನು ಆಟೋ ಚಾಲಕರೊಬ್ಬರಿಗೆ ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು. ಆಕೆ ಸ್ವಲ್ಪ ಬುದ್ಧಿಮಾಂಧ್ಯಳಾಗಿರುವ ಕಾರಣ ಆಟೋ ಚಾಲಕ ಆಕೆಯೊಂದಿಗೆ ವಿಚ್ಛೇದನ ಪಡೆದುಕೊಂಡಿದ್ದ. ಬಳಿಕ ಸುನಂದಮ್ಮ ತಮ್ಮ ಕಿರಿಯ ಮಗಳು ರಮ್ಯಾಳೊಟ್ಟಿಗೆ ತನ್ನ ಮನೆಯಲ್ಲಿ ಜೀವನ ನಡೆಸುತ್ತಿದ್ದರು. 

ಈ ಮಧ್ಯೆ ಹಿರಿಯ ಮಗಳು ಗೀತಾ ಮತ್ತು ಅಳಿಯ ನಾಗರಾಜು ಅವರು ಸುನಂದಮ್ಮ ವಾಸಿಸುತ್ತಿದ್ದ ಮನೆಯನ್ನು ಮಾರಾಟ ಮಾಡಿ ಬಂದ ಹಣವನ್ನು ಲಪಟಾಯಿಸಲು ನಿರ್ಧರಿಸಿದ್ದರೆನ್ನಲಾಗಿದೆ. ಈ ಬಗ್ಗೆ ವಿಚಾರ ತಿಳಿದ ಆಕೆಯ ತಾಯಿ ಸುನಂದಮ್ಮ ಮನೆಯನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಲು ಒಪ್ಪಲಿಲ್ಲ. ಇದರಿಂದ ಕುಪಿತಗೊಂಡ ಗೀತಾ ಮತ್ತು ಆಕೆಯ ಪತಿ ನಾಗರಾಜು ಇಬ್ಬರೂ ಸೇರಿ ತಾಯಿ ಸುನಂದಮ್ಮ ಮತ್ತು ಸಹೋದರಿ ರಮ್ಯಾ ಅವರನ್ನು ಎರಡು ದಿನಗಳಿಂದ ಗೃಹಬಂಧನವಿರಿಸಿದ್ದರು. 

ಈ ಮಧ್ಯೆ ಕಿಟಕಿ ಬಾಗಿಲುಗಳನ್ನು ತೆಗೆದ ತಾಯಿ ಸುನಂದಮ್ಮ ಅವರು ಜೋರಾಗಿ ಕಿರುಚಾಡಲು ಆರಂಭಿಸಿದರು. ಇವರ ಕಿರುಚಾಟದಿಂದ ಎಚ್ಚೆತ್ತ ಅಕ್ಕಪಕ್ಕದ ನಿವಾಸಿಗಳು ಹತ್ತಿರ ಹೋಗಿ ವಿಚಾರಿಸಿದಾಗ ಸುನಂದಮ್ಮ ವಿಷಯ ಹೇಳಿದ್ದು, ತಕ್ಷಣ ಸ್ಥಳೀಯರು ಪೊಲೀಸರುಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪಶ್ಚಿಮ ಠಾಣೆ ಪೊಲೀಸರು ಪೊಲೀಸರು ತಾಯಿ ಮತ್ತು ಮಗಳನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿದ್ದು, ಗೀತಾ ಮತ್ತು ನಾಗರಾಜು ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ

See also  ಬಸ್- ಟಿಪ್ಪರ್ ಲಾರಿ ಡಿಕ್ಕಿ: 15ಕ್ಕೂ ಅಧಿಕ ಮಂದಿಗೆ ಗಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು