News Kannada
Saturday, October 01 2022

ಕರ್ನಾಟಕ

ಪ್ರತಿಭೆಗೆ ತಕ್ಕಂತೆ ಕೌಶಲ್ಯಗಳಿಗೆ ಒತ್ತು: ಸಚಿವ ಅನಂತಕುಮಾರ್ ಹೆಗಡೆ ಭರವಸೆ - 1 min read

Photo Credit :

ಪ್ರತಿಭೆಗೆ ತಕ್ಕಂತೆ ಕೌಶಲ್ಯಗಳಿಗೆ ಒತ್ತು: ಸಚಿವ ಅನಂತಕುಮಾರ್ ಹೆಗಡೆ ಭರವಸೆ

ಮಡಿಕೇರಿ: ಪ್ರಸ್ತುತ ದಿನಗಳಲ್ಲಿ ಪಡೆಯುವ ಶಿಕ್ಷಣವೇ ಬೇರೆ, ಬದುಕಿನ ಹಾದಿಯೇ ಬೇರೆ ಎಂಬಂತಹ ಪರಿಸ್ಥಿತಿಗಳಿದ್ದು, ಇಂತಹ ವಿಚಾರಗಳಿಂದ ಹೊರ ಬಂದು, ಆಯಾ ವ್ಯಕ್ತಿಯಲ್ಲಿ ಅಂತರ್ಗತವಾಗಿರುವ ಪ್ರತಿಭೆಗೆ ತಕ್ಕಂತೆ ಆತನ ಕೌಶಲ್ಯಗಳಿಗೆ ಒತ್ತು ನೀಡುವ ಸಲುವಾಗಿ ಸ್ಕಿಲ್ ಆನ್ ವೀಲ್ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಕೇಂದ್ರದ ಕೌಶಾಲ್ಯಾಭಿವೃದ್ಧಿ ಖಾತೆಯ ಸಚಿವರಾದ ಅನಂತಕುಮಾರ್ ಹೆಗಡೆ ತಿಳಿಸಿದ್ದಾರೆ.

ನಗರದ ಕ್ರಿಸ್ಟಲ್ ಹಾಲ್ ನಲ್ಲಿ ನಡೆದ ಕೌಶಲ್ಯಾಭಿವೃದ್ಧಿಯ ರಾಷ್ಟ್ರೀಯ ಯುವ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ವರ್ಷಂಪ್ರತಿ 2 ಕೋಟಿ ಮಂದಿ ವಿವಿಧ ಶಿಕ್ಷಣಗಳನ್ನು ಪೂರೈಸಿ ಹೊರ ಬರುತ್ತಿದ್ದಾರೆ. ಅಂತಹವರಲ್ಲಿನ ಪ್ರತಿಭೆಯನ್ನು ಗುರುತಿಸಿ, ಅಗತ್ಯ ತರಬೇತಿಯನ್ನು ನೀಡುವುದು ತಮ್ಮ ಉದ್ದೇಶವಾಗಿದೆಯೆಂದರು.

ನಮ್ಮೆಲ್ಲರ ಕನಸುಗಳು ಹಿಮಾಲದಷ್ಟು ದೊಡ್ಡದಾಗಿರಬೇಕು. ಇಂತಹ ಉನ್ನತ ಗುರಿಯ ಸಾಧನೆಯೆಡೆಗೆ ಸಾಗುವ ಪ್ರಯತ್ನ ನಿಮ್ಮನ್ನು ಶಿಖರದ ತಪ್ಪಲಿಗಾದರೂ ಕೊಂಡೊಯ್ಯುತ್ತದೆ. ಪ್ರಸ್ತುತ ವಿದ್ಯಾರ್ಥಿಗಳು ತಾವು ಮುನ್ನಡೆಯಬೇಕಾದ ಕ್ಷೇತ್ರದ ಬಗ್ಗೆ ಹೊಂದಿರುವ ಅಪೇಕ್ಷೆ ಒಂದಾಗಿದ್ದರೆ, ಆಯ್ಕೆ ಮಾಡಿಕೊಂಡಿರುವ ಕ್ಷೇತ್ರವೇ ಬೇರೆಯಾಗಿರುತ್ತದೆ. ಇದರಿಂದ ನಿರುದ್ಯೋಗದ ಸಮಸ್ಯೆ ಹೆಚ್ಚಾಗಿ ನಮ್ಮನ್ನು ಕಾಡಲಾರಂಭಿಸಿದೆ. ಇದನ್ನೇ ನಾವು ‘ಕೌಶಲ್ಯ’ದ ಅಂತರವೆಂದು ಕರೆಯುತ್ತೇವೆ. ಈ ಹಿನ್ನೆಲೆಯಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳುವ, ಅರ್ಥೈಸಿಕೊಳ್ಳುವ ನಿಟ್ಟಿನ ಒಂದು ಪ್ರಯತ್ನವೆ ‘ಸ್ಕಿಲ್ ಆನ್ ವೀಲ್’ ಎಂದು ಸ್ಪಷ್ಟಪಡಿಸಿದರು.

ಹುಟ್ಟಿದ್ದೆ ಗೆಲ್ಲಲು ಮತ್ತು ಹುಟ್ಟಿದ್ದೆ ಆಳಲು ಎನ್ನುವ ನೆಪೋಲಿಯನ್ ಮಾತಿನಂತೆ, ಯುವ ಸಮೂಹ ತನ್ನಲ್ಲಿನ ಪ್ರತಿಭೆ ಮತ್ತು ಕೌಶಲ್ಯಗಳ ಮೂಲಕ ಸಾಧನೆಯ ಹಾದಿಯಲ್ಲಿ ಸಾಗಿದಲ್ಲಿ ಭಾರತ ವಿಶ್ವಕ್ಕೆ ಗುರುವಾಗಲಿದೆ ಎಂದು ಅನಂತ ಕುಮಾರ್ ಹೆಗಡೆ ವಿಶ್ವಾಸ ವ್ಯಕ್ತಪಡಿಸಿದರು. ನಮ್ಮೆಲ್ಲರ ಬದುಕು ‘ಲಾಟರಿ’ಯಂತೆ ಆಗದಿರಲಿ, ಬೆವರಿಲ್ಲದ ಬದುಕು ಬದುಕಲ್ಲ, ಬೆವರಿಲ್ಲದೆ ಯಾವುದೇ ಸಾಧನೆ ಸಾಧ್ಯವಿಲ್ಲವೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಯಾವುದೋ ಶಿಕ್ಷಣ ಹೊಂದಿ ಪಡೆಯುವ ಸರ್ಟಿಫಿಕೇಟ್ ಗಳಿಂದಷ್ಟೆ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಬದುಕಿಗೆ ಪ್ರತಿಭೆ ಮತ್ತು ಕೌಶಲ್ಯ ಅತ್ಯವಶ್ಯ. ಈ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಗೆ ಒಂದರಂತೆ ‘ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ’ಗಳನ್ನು ಸ್ಥಾಪಿಸಲಾಗುತ್ತಿದೆ. ಆ ಮೂಲಕ ಕೌಶಲ್ಯಾಭಿವೃದ್ಧಿಯ ಚಿಂತನೆಯನ್ನು ಪ್ರತಿ ಗ್ರಾಮ ಮಟ್ಟಕ್ಕೆ ಕೊಂಡೊಯ್ಯುವುದು ತಮ್ಮ ಚಿಂತನೆಯಾಗಿದೆ ಎಂದ ಸಚಿವರು, ಪ್ರತಿಯೊಬ್ಬರು ತಮ್ಮ ಪ್ರತಿಭೆ ಮತ್ತು ಕೌಶಲ್ಯಗಳಿಂದ ಇತರರಿಗೆ ಉದ್ಯೋಗ ನೀಡುವಂತಹವರಾಗಬೇಕು, ಕೇಳುವವರಾಗಬಾರದೆಂದು ಸಚಿವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ, ಜಿಲ್ಲೆಯ ಶಾಸಕರಗಳಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಎಂಎಲ್ಸಿ ಸುನಿಲ್ ಸುಬ್ರಮಣಿ, ಜಿಪಂ ಅಧ್ಯಕ್ಷ ಬಿ.ಎ. ಹರೀಶ್ ಹಾಗೂ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದ ಉಸ್ತುವಾರಿ ಹೊತ್ತ ವೆಂಕಟೇಶ್, ಶ್ರೀನಿವಾಸ್ ಉಪಸ್ಥಿತರಿದ್ದರು.

See also  ಮಾರ್ಬಲ್ ಗಣಿಗಾರಿಕೆ ಅನುಮತಿ ರದ್ದು ಮಾಡಲು ಡಿಸಿಗೆ ಆಗ್ರಹ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು