News Kannada
Wednesday, October 05 2022

ಕರ್ನಾಟಕ

ಹಸಿವುಮುಕ್ತ ರಾಜ್ಯವನ್ನಾಗಿ ಮಾಡಲು ಪಣ: ಕಾಗೋಡು ತಿಮ್ಮಪ್ಪ - 1 min read

Photo Credit :

ಹಸಿವುಮುಕ್ತ ರಾಜ್ಯವನ್ನಾಗಿ ಮಾಡಲು ಪಣ: ಕಾಗೋಡು ತಿಮ್ಮಪ್ಪ

ದಾವಣಗೆರೆ: ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಹಸಿವುಮುಕ್ತ ರಾಜ್ಯವನ್ನಾಗಿ ಮಾಡಲು ಪಣತೊಟ್ಟು ಪ್ರತಿ ಬಿಪಿಎಲ್ ಕುಟುಂಬ ಪ್ರತಿ ವ್ಯಕ್ತಿಗೆ 7 ಕೆಜಿ ಅಕ್ಕಿ ನೀಡುತ್ತಿದ್ದೇವೆಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಅವರು ನ್ಯಾಮತಿ ಪಟ್ಟಣದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ನೂತನ ನ್ಯಾಮತಿ ತಾಲೂಕು ಕೇಂದ್ರದ ಉದ್ಘಾಟನೆ, ಬಗರ್ಹುಕುಂ ಸಾಗುವಳಿ ಹಕ್ಕುಪತ್ರ ವಿತರಣೆ ಹಾಗೂ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಸಾರ್ವಜನಿಕ ಕೆಲಸಗಳನ್ನು ಸಕಾಲದಲ್ಲಿ ಮಾಡಬೇಕು. ಅದಕ್ಕಾಗಿ ಮುಖ್ಯಮಂತ್ರಿಯವರು ಆಡಳಿತದಲ್ಲಿ ಪಾರದರ್ಶಕತೆಯ ಎಚ್ಚರಿಕೆ ನೀಡಿದ್ದಾರೆ ಎಂದರು.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಅನೇಕ ಜನಪರ ಯೋಜನೆಗಳನ್ನು ಕೈಗೊಂಡಿದ್ದು, ಬಹುಮುಖ್ಯವಾಗಿ ಅನ್ನಭಾಗ್ಯವನ್ನು ಜಾರಿಗೆ ತಂದರು. ನಮ್ಮದು ಭ್ರಷ್ಟರಹಿತ ಸರ್ಕಾರವಾಗಿದ್ದು, ಜನರ ಕಲ್ಯಾಣಕ್ಕಾಗಿ ಜನಪರ ಯೋಜನೆಗಳನ್ನು ಜಾರಿಗೆ ತರಲಾಗಿದೆ. ನ್ಯಾಮತಿ ತರಕಾರಿ ಮತ್ತು ವೀಳ್ಯದೆಲೆ ಬೆಳೆಗೆ ಹೆಸರುವಾಸಿಯಾಗಿದ್ದು ಇಲ್ಲಿನ ಈ ಉತ್ಪನ್ನಗಳು ಕೇವಲ ರಾಜ್ಯವಲ್ಲದೇ ಹೊರರಾಜ್ಯಗಳಿಗೂ ಹೋಗುವಂತಾಗಬೇಕು ಎಂದು ಆಶಿಸಿದರು

ಸೂರಿಲ್ಲದ ಪ್ರತಿಯೊಬ್ಬರಿಗೂ ಮನೆ ಕೊಡುತ್ತಿದ್ದೇವೆ. ಬರದ ಹಿನ್ನೆಲೆಯಲ್ಲಿ ಅನೇಕ ಕೃಷಿಹೊಂಡಗಳ ನಿರ್ಮಾಣ, ಅನ್ನಭಾಗ್ಯ, ಕ್ಷೀರಭಾಗ್ಯ ಹೀಗೆ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇಡೀ ದೇಶದಲ್ಲಿ ಯಾವುದಾದರೂ ಮಾದರಿ ರಾಜ್ಯ ಇದ್ದರೆ ಅದು ನಮ್ಮ ರಾಜ್ಯ ಕರ್ನಾಟಕ ಎಂದರು.

ಬಗರಹುಕುಂ ಸಾಗುವಳಿಯ ಅರ್ಜಿಗಳು ದೂಳು ಹಿಡಿಯುತ್ತಿದ್ದವು. ನಾನು ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಮೂರು ಬಾರಿ ಜಿಲ್ಲೆಗಳಿಗೆ ಭೇಟಿ ನೀಡಿ ಕೂಡಲೆ ಅರ್ಜಿಗಳನ್ನು ವಿಲೇವಾರಿ ಮಾಡಿ ಅರ್ಹ ಫಲಾನುಭವಿಗಳಿಗೆ ಸಾಗುವಳಿ ಚೀಟಿ ನೀಡಲೇಬೇಕು ನಂತರ ಖಾತೆ ಮಾಡಿಕೊಡಲೇಬೇಕು ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದೇನೆ.

ಬಂದಿರುವ ಅರ್ಜಿಗಳಲ್ಲಿ ಶೇ. 75 ಅರ್ಜಿಗಳು ವಿಲೇವಾರಿ ಆಗಿವೆ. ಬಗರ್ಹುಕುಂ ಅಡಿಯಲ್ಲಿ ಅರ್ಜಿ ಸಲ್ಲಿಸಲು ಈ ಸಾಲಿನ ಡಿಸೆಂಬರ್ ವರೆಗೆ ಅವಧಿ ವಿಸ್ತರಿಸಿದ್ದೇನೆ. ಭೂಮಿಗೆ ಸಂಬಂಧಿಸಿದ ವಿಷಯದಲ್ಲಿ ಎಲ್ಲರಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಎಲ್ಲರೂ ಬದ್ದರಾಗಬೇಕು. ಪ್ರತಿ ಗ್ರಾಮದಲ್ಲಿ ಗ್ರಾಮಲೆಕ್ಕಿಗರು, ಪಿಡಿಓ ಜಂಟಿ ಸರ್ವೇ ಮಾಡಿ ಅರ್ಹರಿಂದ ಅರ್ಜಿ ಪಡೆದು ಹಕ್ಕುಪತ್ರ ನೀಡಲು ಆದೇಶಿಸಿದ್ದೇನೆ ಎಂದ ಅವರು ನಿವೇಶನ ಇಲ್ಲದವರಿಗೆ ಸರ್ಕಾರಿ ಜಾಗದಲ್ಲಿ ನಿವೇಶನ ಹಂಚಲು ಅಥವಾ ಖರೀದಿ ಮಾಡಿ ನಿವೇಶನ ಒದಗಿಸುವ ವ್ಯವಸ್ಥೆ ಮಾಡುವಂತೆ ಸ್ಥಳೀಯ ಆಡಳಿತಕ್ಕೆ ಹೇಳಿದರು.

ಹಲವಾರು ವರ್ಷಗಳಿಂದ ನ್ಯಾಮತಿಯನ್ನು ತಾಲೂಕನ್ನಾಗಿ ಮಾಡಬೇಕೆಂದು ಹೋರಾಟ ಮಾಡಿದ ಅನೇಕ ಮಹನೀಯರಿಗೆ ಸರ್ಕಾರದ ಪರವಾಗಿ ನಾನು ಅಭಿನಂಧನೆ ಸಲ್ಲಿಸುತ್ತೇನೆ ಎಂದ ಅವರು, ನ್ಯಾಮತಿ ನೂತನ ತಾಲ್ಲೂಕಾಗಿ ಘೋಷಣೆಯಾದ ನಂತರ ಅಧಿಕೃತವಾಗಿ ಕಾರ್ಯಾರಂಭ ಮಾಡಲಿಕ್ಕೆ ನ್ಯಾಮತಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ತಾಲೂಕು ಕಚೇರಿಗೆ ಬೇಕಾದ ಎಲ್ಲಾ ಸಕಲ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದಾರೆ. ಆ ದಾನಿಗಳಿಗೆ ನಾನು ಆಭಾರಿಯಾಗಿದ್ದೇನೆ ಎಂದರು.

See also  ಹೆಚ್ಚುತ್ತಿದೆ ಆನ್ ಲೈನ್ ವಂಚನೆ ಪ್ರಕರಣ: ಠಾಣೆಯ ಮೇಟ್ಟಿಲೇರುತ್ತಿರುವ ಜನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು