News Kannada
Tuesday, September 27 2022

ಕರ್ನಾಟಕ

ಜನರೇ ಇಲ್ಲದೆ ನಡೆಯಿತು ಮಡಿಕೇರಿಯ ಜನಾಭಿಪ್ರಾಯದ ಸಭೆ… - 1 min read

Photo Credit :

ಜನರೇ ಇಲ್ಲದೆ ನಡೆಯಿತು ಮಡಿಕೇರಿಯ ಜನಾಭಿಪ್ರಾಯದ ಸಭೆ…

ಮಡಿಕೇರಿ: ಜಿಲ್ಲಾ ಕೇಂದ್ರ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಮುಂದಿನ ಒಂದು ವರ್ಷದ ಅವಧಿಯಲ್ಲಿ ನಡೆಯಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ದಿಕ್ಸೂಚಿಯಾಗಿರುವ ವಾರ್ಷಿಕ ಆಯವ್ಯಯವನ್ನು ಅಂತಿಮ ಗೊಳಿಸುವ ನಿಟ್ಟಿನಲ್ಲಿ ನಡೆದ ಪೂರ್ವಭಾವಿ ಸಭೆಗೆ ಸಾರ್ವಜನಿಕರು ಗೈರು ಹಾಜರಾಗಿದ್ದರು. ಕೇವಲ ಒಂದು ದಿನ ಮೊದಲು ಸಾರ್ವಜನಿಕ ಪ್ರಕಟಣೆ ಹೊರಡಿಸಿದ ನಗರಸಭೆಯ ನಿಷ್ಕಾಳಜಿಯೇ ಇದಕ್ಕೆ ಪ್ರಮುಖ ಕಾರಣವಾಗಿದೆ ಎನ್ನುವ ಟೀಕೆ ಕೇಳಿ ಬಂದಿದೆ.

ನಗರಸಭೆಯ ಬಹುತೇಕ ಚುನಾಯಿತ ಜನಪ್ರತಿನಿಧಿಗಳು ಸಭೆಯತ್ತ ಮುಖ ಮಾಡಲಿಲ್ಲ. ಪೌರಾಯುಕ್ತರಾದ ಶುಭ, ಮಾಜಿ ಅಧ್ಯಕ್ಷೆ ಜುಲೇಕಾಬಿ, ಮಾಜಿ ಉಪಾಧ್ಯಕ್ಷೆ ಲೀಲಾಶೇಷಮ್ಮ, ಸದಸ್ಯ ಕೆ.ಜಿ.ಪೀಟರ್ ಉಪಸ್ಥಿತಿ ಸಭೆಯ ಆರಂಭದಲ್ಲಿ ಕಂಡು ಬಂತು. ಕೊನೆ ಹಂತದಲ್ಲಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಸದಸ್ಯರುಗಳಾದ ಮನ್ಸೂರ್, ಉದಯ ಕುಮಾರ್ ಆಗಮಿಸಿದರಾದರು, ಸಾರ್ವಜನಿಕರು ಮಾತ್ರ ಬರಲಿಲ್ಲ.

ಕಾಟಾಚಾರದ ಸಭೆ: ಅದಾಗಲೆ ನಗರಸಭೆಯಲ್ಲಿ ಆಯವ್ಯಯವನ್ನು ಮಂಡಿಸಿ ಆಗಿದೆ. ಇದೀಗ ಸಾರ್ವಜನಿಕರ ಪೂರ್ವಭಾವಿ ಸಭೆಯನ್ನು ತರಾತುರಿಯಲ್ಲಿ ಕರೆಯಲಾಗಿದ್ದು, ಸಾರ್ವಜನಿಕರು ಪಾಲ್ಗೊಂಡಿಲ್ಲ. ಇದೊಂದು ಕಾಟಾಚಾರದ ಸಭೆ ಎಂದು ಆರೋಪಿಸಿದ ಸದಸ್ಯೆ ಲೀಲಾಶೇಷಮ್ಮ ಹಾಗೂ ದೇಶ ಪ್ರೇಮಿ ಯುವಕ ಸಂಘದ ಅರುಣ್ ಶೆಟ್ಟಿ ಸಭೆಯಿಂದ ಹೊರ ನಡೆದರು.
ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ಆಯವ್ಯಯಕ್ಕೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆ ನಡೆಸಬೇಕೆಂದು ವಿರೋಧ ಪಕ್ಷ ಬಿಜೆಪಿ ಸದಸ್ಯರು ಆಗ್ರಹಿಸಿದ್ದರಾದರು ಸಭೆಯಲ್ಲಿ ಅವರ ಸುಳಿವಿರಲಿಲ್ಲ. ಬಿಜೆಪಿ ಸದಸ್ಯೆ ಅನಿತಾ ಪೂವಯ್ಯ ಕೆಲ ಕಾಲ ಸಾರ್ವಜನಿಕರ ಆಸನದಲ್ಲಿ ಕುಳಿತಿದ್ದರಾದರು, ಬಳಿಕ ಅವರೂ ಕಾಣಲಿಲ್ಲ.

ಪೌರಾಯುಕ್ತೆ ಶುಭ ಅವರು, ಮುನಿಸಿಪಲ್ ಆಕ್ಟ್ 287 ರ ಪ್ರಕಾರ ಸಾರ್ವಜನಿಕರಿಂದ ಆಯವ್ಯಯಕ್ಕೆ ಸಂಬಂಧಿಸಿದಂತೆ ಅಹವಾಲುಗಳನ್ನು ಸಲಹೆ ಸೂಚನೆಗಳನ್ನು ಸಂಗ್ರಹಿಸುವುದು ಅವಶ್ಯ ಸಭೆಯನ್ನು ಬರಕಾಸ್ತು ಗೊಳಿಸುವುದು ಸಮಂಜಸವಲ್ಲವೆಂದರು. ಸಾರ್ವಜನಿಕರಿಗಾಗಿ ಕೆಲ ಕಾಲ ಕಾಯುವುದಾಗಿ ಹೇಳಿದರಾದರು ಸಭೆ ಮುಕ್ತಾಯದವರೆಗೆ ಯಾವೊಬ್ಬ ಸಾರ್ವಜನಿಕ ವ್ಯಕ್ತಿಯೂ ಸಭಾಂಗಣ ಪ್ರವೇಶಿಸಲಿಲ್ಲ.

ಸಲಹೆಗಳೆರಡು: ಸಭೆಗೆ ಬಂದ ಪಾಲಿ ಮೇದಪ್ಪ ಅವರು ರೇಸ್ ಕೋರ್ಸ್ ಬಳಿಯ ರಸ್ತೆ ಯುಜಿಡಿ ಕಾಮಗಾರಿಯಿಂದ ಸಂಪೂರ್ಣ ಹದಗೆಟ್ಟಿರುವುದಾಗಿ ತಿಳಿಸಿದರೆ, ಮತ್ತೊಬ್ಬರು ನಗರವ್ಯಾಪ್ತಿಯ ಖಾಲಿ ನಿವೇಶನಗಳು ಕಸದ ಕೊಂಪೆಗಳಾಗುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತರು, ಯುಜಿಡಿ ಕಾಮಗಾರಿಯ ಬಳಿಕ ರಸ್ತೆಯನ್ನು ಅವರು ಸರಿಪಡಿಸಲಿದ್ದಾರೆ. ಮತ್ತೆ ರಸ್ತೆ ಹಾಳಾದಲ್ಲಿ ಅದರ ದುರಸ್ತಿಗಾಗಿ ಆಯವ್ಯಯದಲ್ಲಿ 6 ಕೋಟಿ ರೂ. ಮೀಸಲಿಟ್ಟಿರುವುದಾಗಿ ತಿಳಿಸಿದರು. ಖಾಲಿ ನಿವೇಶನಗಳಲ್ಲಿ ಶುಚಿತ್ವ ಇಲ್ಲದಿದ್ದರೆ ಅಂತಹವರಿಗೆ ನೋಟಿಸ್ ನೀಡಿ, ದಂಡ ವಿಧಿಸಲು ಕ್ರಮ ವಹಿಸುವುದಾಗಿ ತಿಳಿಸಿದರು.

ಸಭೆಯ ಬಳಿಕ ಮಾಧ್ಯಮಗಳ ಪ್ರಶ್ನೆಗೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಉತ್ತರಿಸಿ, ನಗರದ ಅಭ್ಯುದಯಕ್ಕೆ ತನ್ನಿಂದ ಸಾಧ್ಯವಾದಷ್ಟು ಪ್ರಯತ್ನಗಳನ್ನು ಮಾಡಿದ್ದೇನೆ ಯುಜಿಡಿಯಿಂದ ರಸ್ತೆಗಳು ಹದಗೆಟ್ಟಿರುವ ಸಮಸ್ಯೆಯನ್ನು ಶೀಘ್ರ ಸರಿಪಡಿಸುವ ವಿಶ್ವಾಸ ವ್ಯಕ್ತಪಡಿಸಿದರು.

See also  ರಾಜ್ಯ ಸ್ವಚ್ಛತೆಯಲ್ಲಿ ಯಶವಂತಪುರ ರೈಲು ನಿಲ್ದಾಣಕ್ಕೆ ಪ್ರಥಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು