News Kannada
Sunday, October 02 2022

ಕರ್ನಾಟಕ

ಕಾವೇರಿಯಲ್ಲಿ ರಿವರ್ ರಾಫ್ಟಿಂಗ್ ತಾತ್ಕಾಲಿಕ ನಿಷೇಧ : ಕೊಡಗು ಜಿಲ್ಲಾ ದಂಡಾಧಿಕಾರಿ ಆದೇಶ - 1 min read

Photo Credit :

ಕಾವೇರಿಯಲ್ಲಿ ರಿವರ್ ರಾಫ್ಟಿಂಗ್ ತಾತ್ಕಾಲಿಕ ನಿಷೇಧ : ಕೊಡಗು ಜಿಲ್ಲಾ ದಂಡಾಧಿಕಾರಿ ಆದೇಶ

ಮಡಿಕೇರಿ: ಕಾವೇರಿ ನದಿಯ ವಿವಿಧ ಭಾಗದಲ್ಲಿ ರಿವರ್ ರಾಫ್ಟಿಂಗ್ ಹೆಸರಿನಲ್ಲಿ ಅನಧಿಕೃತ ದಂಧೆ ನಡೆಸುತ್ತಿರುವ ಹಿನ್ನೆಲೆ ಹಾಗೂ ಜನರ ಪ್ರಾಣಹಾನಿ, ಆಸ್ತಿ ಹಾನಿಯಾಗಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಮತ್ತು ಕಾನೂನು ಭಂಗವಾಗುವ ಸಂಭವ ಇರುವುದರಿಂದ ಸಾರ್ವಜನಿಕ ಹಿತ ದೃಷ್ಟಿಯಿಂದ ಸಿ.ಆರ್.ಪಿ.ಸಿ ಕಲಂ 133 ರೆಡಿಯಲ್ಲಿ ಜಿಲ್ಲೆಯಾದ್ಯಂತ ಕಾವೇರಿ ನದಿಪಾತ್ರದಲ್ಲಿ ರಿವರ್ ರ್ಯಾಫ್ಟಿಂಗ್ ಉದ್ದಿಮೆ ನಡೆಸುವುದನ್ನು ಫೆಬ್ರವರಿ 28 ರಿಂದ ಒಂದು ತಿಂಗಳ ಅವಧಿಗೆ ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಆದೇಶ ಹೊರಡಿಸಿದ್ದಾರೆ.

ಈ ಪ್ರಕರಣ ಸಂಬಂಧ ಮುಂದಿನ ವಿಚಾರಣೆಗಾಗಿ ಮಾರ್ಚ್ 27 ರಂದು ಮಧ್ಯಾಹ್ನ 3 ಗಂಟೆಗೆ ನಿಗದಿಪಡಿಸಿದ್ದು, ಸಂಬಂಧಪಟ್ಟವರು ಜಿಲ್ಲಾ ದಂಡಾಧಿಕಾರಿ ಮತ್ತು ಜಿಲ್ಲಾಧಿಕಾರಿ, ಮಡಿಕೇರಿರವರ ಕಚೇರಿಗೆ ಖುದ್ದು ಹಾಜರಾಗಿ ಕಲಂ 133 ಸಿ.ಆರ್.ಪಿ.ಸಿ ರಡಿಯಲ್ಲಿ ಹೊರಡಿಸಿರುವ ಷರತ್ತು ಬದ್ಧ ಆದೇಶವನ್ನು ಯಾಕೆ ಅಂತಿಮ ಆದೇಶವೆಂದು ಪರಿಗಣಿಸಬಾರದು ಎಂಬುದಕ್ಕೆ ಜಿಲ್ಲಾ ದಂಡಾಧಿಕಾರಿಯವರ ನ್ಯಾಯಾಲಯಕ್ಕೆ ಹಾಜರಾಗಿ ಲಿಖಿತ ಸಮಜಾಯಿಷಿ ನೀಡಲು ಆದೇಶಿಸಿದೆ. ಇಲ್ಲವಾದ್ದಲ್ಲಿ ಈ ಆದೇಶವನ್ನು ಶಾಶ್ವತ ಆದೇಶವಾಗಿ ಹೊರಡಿಸಲಾಗುತ್ತದೆ. ಆದೇಶ ಉಲ್ಲಂಘನೆಯಾದಲ್ಲಿ ಸಂಬಂಧಪಟ್ಟವರ ವಿರುದ್ಧ ಕಲಂ 188 ಭಾರತ ದಂಡ ಪ್ರಕ್ರಿಯೆಯಡಿಯಲ್ಲಿ ಕಾನೂನು ಕ್ರಮ ಜರುಗಿಸಲು ಆದೇಶಿಸಲಾಗುವುದು ಎಂದು ಜಿಲ್ಲಾ ದಂಡಾಧಿಕಾರಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಆದೇಶ ಹೀಗಿದೆ: ಜಿಲ್ಲೆಯಲ್ಲಿ ರಿವರ್ ರಾಫ್ಟಿಂಗ್ ಉದ್ದಿಮೆಯನ್ನು ನಡೆಸುತ್ತಿರುವವರು ಸರಕಾರದಿಂದ ಯಾವುದೇ ಪರವಾನಗಿ ಪಡೆದಿರುವುದಿಲ್ಲ ಮತ್ತು ವಿಮೆ ಸೌಲಭ್ಯವಿಲ್ಲ. ಹಾಗೂ ರಾಫ್ಟಿಂಗ್ ನಡೆಸುವ ಸಮಯದಲ್ಲಿ ಅಪಘಾತಗಳುಂಟಾಗದಂತೆ ಮುಂಜಾಗ್ರತೆ ಕ್ರಮವಾಗಿ ಯಾವುದೇ ಭದ್ರತಾ ಕ್ರಮ ಮತ್ತು ವಸ್ತುಗಳನ್ನು ಉಪಯೋಗಿಸುತ್ತಿಲ್ಲ.
ರಿವರ್ ರಾಫ್ಟಿಂಗ್ ನಡೆಸುವವರ ಪ್ರವಾಸಿಗರಿಂದ ಯಾವುದೇ ಇತಿಮಿತಿಯಿಲ್ಲದೆ ಮನಸ್ಸಿಗೆ ಬಂದಂತೆ ಹಣ ವಸೂಲು ಮಾಡುತ್ತಿರುವುದರಿಂದ, ಹಾಗಾಗ ಜಗಳ ಆಗುತ್ತಿರುತ್ತದೆ ಮತ್ತು ಇದನ್ನು ನಿಯಂತ್ರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿಮರ್ಾಣವಾಗಿದೆ.

ಈ ಎಲ್ಲಾ ಕಾರಣಗಳಿಂದ ಪ್ರವಾಸಿಗರ ಜೀವ ಹಾನಿಗಳುಂಟಾಗುವ ಸಂಭವ ಹೆಚ್ಚು. ಆದ ಕಾರಣ ಸಾರ್ವಜನಿಕ ಹಿತ ದೃಷ್ಟಿಯಿಂದ ಕಾನೂನು ಬಾಹಿರವಾಗಿ ನಡೆಸುತ್ತಿರುವ ರಿವರ್ ರಾಫ್ಟಿಂಗ್ ನ್ನು ಸ್ಥಗಿತಗೊಳಿಸಬೇಕಾಗಿದೆ. ಇಲ್ಲದಿದ್ದಲ್ಲಿ ಸಮಾಜದ ಸ್ವಾಸ್ಥ್ಯ ಕೆಡುತ್ತದೆ. ಆದ್ದರಿಂದ ಇಂತಹ ಕಾನೂನು ಬಾಹಿರ ದಂಧೆಯನ್ನು ನಡೆಸಲು ಕಾನೂನಿನಡಿಯಲ್ಲಿ ಅವಕಾಶವಿಲ್ಲದ ಕಾರಣ ರಿವರ್ ರಾಫ್ಟಿಂಗ್ ನ್ನು ಸ್ಥಗಿತಗೊಳಿಸಬೇಕಾಗುತ್ತದೆ.

ರಿವರ್ ರಾಫ್ಟಿಂಗ್ ನಡೆಸಲು ಕೈಗೊಳ್ಳಬೇಕಾದ ಸುರಕ್ಷಾ ಕ್ರಮಗಳ ಬಗ್ಗೆ ಸರಕಾರ ಈಗಾಗಲೇ ಸುತ್ತೋಲೆ ಕಳುಹಿಸಿದ್ದು, ಅದರಂತೆ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿರುತ್ತಾರೆ. ಆದರೆ ಸುತ್ತೋಲೆಯಲ್ಲಿರುವ ಷರತ್ತುಗಳನ್ನು ರಿವರ್ ರಾಫ್ಟಿಂಗ್ ನಡೆಸುವವರು ಪಾಲಿಸುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ.

ರಿವರ್ ರಾಫ್ಟಿಂಗ್ ನಡೆಸುವವರು ಕುಶಾಲನಗರ, ದುಬಾರೆ, ಕಾವೇರಿ ನದಿಯಲ್ಲಿ ರಿವರ್ ರಾಫ್ಟಿಂಗ್ ನಡೆಸುವ ವಿಷಯದಲ್ಲಿ ಪದೇ ಪದೇ ಗಲಾಟೆ ಮಾಡುತ್ತಾ ಪ್ರವಾಸಿಗರಿಗೆ ಮತ್ತು ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟು ಮಾಡುತ್ತಿದ್ದು, ಇದರಿಂದ ದುಬಾರೆ ಹಾಗೂ ಸುತ್ತ ಮುತ್ತ ಜಾಗದಲ್ಲಿ ಅಶಾಂತಿ ವಾತಾವರಣ ಉಂಟಾಗುತ್ತಿದೆ.

See also  ಸರಳವಾಗಿ ನಡೆದ ಮಡಿಕೇರಿ ದಸರಾ

ಕೊಡಗು ಜಿಲ್ಲೆಯಲ್ಲಿ ಹಾದು ಹೋಗುತ್ತಿರುವ ಕಾವೇರಿ ನದಿಯ ವಿವಿಧ ಭಾಗದಲ್ಲಿ ರಿವರ್ ರಾಫ್ಟಿಂಗ್ ಹೆಸರಿನಲ್ಲಿ ಅನಧಿಕೃತ ದಂಧೆ ಕಾನೂನು ಬಾಹಿರವಾಗಿ ನಡೆಸುತ್ತಿರುವ ಬಗ್ಗೆ ಹಲವಾರು ಬಾರಿ ವರದಿಯಾಗಿದೆ. ಗ್ರಾಮಸ್ಥರಿಂದ ಹಲವು ಪುಕಾರು ಬಂದಿರುವುದರಿಂದ ಫೆಬ್ರವರಿ 18 ರಂದು ದುಬಾರೆಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಲಾಗಿ ಕಾವೇರಿ ನದಿಯ ವಿವಿಧ ಭಾಗಗಳಲ್ಲಿ ಕಾನೂನು ಬಾಹಿರವಾಗಿ ಯಾವುದೇ ಮಾರ್ಗಸೂಚಿ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ, ಮನಸ್ಸಿಗೆ ಬಂದಂತೆ ರಿವರ್ ರಾಫ್ಟಿಂಗ್ ನಡೆಸುತ್ತಿರುವುದರಿಂದ ಪ್ರವಾಸಿಗರ ಮತ್ತು ಸಾರ್ವಜನಿಕ ಜೀವಕ್ಕೆ ಹಾನಿ ಆಗಬಾರದು ಎಂಬ ಹಿತದೃಷ್ಟಿಯಿಂದ ಈ ಕಾನೂನು ಬಾಹಿರ ರಿವರ್ ರ್ಯಾಫ್ಟಿಂಗ್ ನಿಷೇಧಿಸಬೇಕೆಂದು ಮನವರಿಯಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು