News Kannada
Saturday, September 24 2022

ಕರ್ನಾಟಕ

ರಾಜಾಸೀಟು ಉದ್ಯಾನವನಕ್ಕೆ ಫಲಪುಷ್ಪ ಪ್ರದರ್ಶನದ ಆಕರ್ಷಣೆ - 1 min read

Photo Credit :

ರಾಜಾಸೀಟು ಉದ್ಯಾನವನಕ್ಕೆ ಫಲಪುಷ್ಪ ಪ್ರದರ್ಶನದ ಆಕರ್ಷಣೆ

ಮಡಿಕೇರಿ: ನಗರದ ಹೆಸರುವಾಸಿ ಪ್ರವಾಸಿ ತಾಣ ರಾಜಾಸೀಟು ಉದ್ಯಾನವನ ಫಲಪುಷ್ಪ ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದು, ವೈವಿಧ್ಯಮಯ ಪುಷ್ಪರಾಶಿಯ ವೈಭವಕ್ಕೆ ಮಾ.9 ರಂದು ಚಾಲನೆ ದೊರೆಯಲಿದೆ.

ಫಲಪುಷ್ಪ ಪ್ರದರ್ಶನದ ಅಂಗವಾಗಿ ಈಗಾಗಲೇ ರಾಜಾಸೀಟು ಉದ್ಯಾನವನದಲ್ಲಿ 3 ಸಾವಿರಿಂದ 4 ಸಾವಿರ ಸಂಖ್ಯೆಯ ವಿವಿಧ ಜಾತಿಯ ಹೂವುಗಳಾದ ಪೇಟೂನಿಯ, ಕ್ಯಾನ, ಸಾಲ್ವಿಯ, ಸೇವಂತಿಗೆ, ಗಾಂಪ್ರಿನಾ, ಕಾಕಡ ಮಲ್ಲಿಗೆ, ಚೆಂಡುಹೂ, ಪ್ಲಾಕ್ಸ್, ಜೀನಿಯಾ, ಜರೇನಿಯಂ, ವಿಂಕಾ ರೋಸಿಯಾ ಮತ್ತಿತರ ಜಾತಿಯ ಹೂಗಳನ್ನು ನಾಟಿ ಮಾಡಲಾಗಿದೆ ಹಾಗೂ 1500 ಕುಂಡಗಳಲ್ಲಿ ವಿವಿಧ ಜಾತಿಯ ಹೂವುಗಳನ್ನು ಬೆಳೆಸಲಾಗಿದೆ.

ನಗರದ ಕೋಟೆಯ ಕಲಾಕೃತಿಯನ್ನು ಹೂವಿನಿಂದ ಅಂದಾಜು 15 ಅಡಿ ಎತ್ತರದಲ್ಲಿ ನಿರ್ಮಿಸಲಾಗುವುದು. ಕಾವೇರಿ ಮಾತೆಯ ಹಾಗೂ ಮಂಟಪ, ತೀರ್ಥೋದ್ಭವದ ಕುಂಡಿಕೆಯ ಕಲಾಕೃತಿಯನ್ನು 8 ಅಡಿ ಎತ್ತರದಲ್ಲಿ 15 ಅಡಿ ಉದ್ದ ನಿರ್ಮಾಣ ಮಾಡಲಾಗುವುದು. ಪಾಲಿಹೌಸ್, ನೆರಳುಪರದೆ ಮನೆ, ಕಿಚನ್ ಗಾರ್ಡನ್, ತಾರಸಿ ತೋಟ, ಮತ್ತಿತರ ಮಾದರಿ ಪ್ರದರ್ಶಿಸಲಾಗುತ್ತಿದೆ. ಕಾಡು ಪ್ರಾಣಿಗಳಾದ ಆನೆ, ಜಿಂಕೆ, ಹುಲಿ, ಮೊಲ, ಡಾಲ್ಪಿನ್ ಮತ್ತು ಚಿಟ್ಟೆಯ ಕಲಾಕೃತಿಗಳನ್ನು ಹೂವು, ಅಲಂಕಾರಿ ಎಲೆಗಳಿಂದ ನಿರ್ಮಿಸಲಾಗುತ್ತಿದೆ.

ಮಕ್ಕಳಿಗೆ ಮನರಂಜನೆ ನೀಡುವಂತಹ ಸೈಕಲ್, ಪಾರ್ಮುಲಾ ಕಾರು ಮಾದರಿಯನ್ನು ತಯಾರಿಸಲಾಗುತ್ತಿದೆ. ಮಾವು, ಕಿತ್ತಳೆ, ಅನಾನಸ್ ಹಣ್ಣುಗಳ ಪೋಟೊ ಪ್ರೇಮ್ ಮಾದರಿಯ ಕಲಾಕೃತಿ ಹಾಗೂ ತರಕಾರಿ/ಹಣ್ಣುಗಳಲ್ಲಿ ಕೆತ್ತನೆಯ ಕಲಾಕೃತಿಗಳನ್ನು ನಿರ್ಮಿಸಲಾಗುವುದು. ಬೋನ್ಸಯ್ ಗಿಡಗಳ ಪ್ರದರ್ಶನ, ಇಕೆಬಾನೆ ಹೂವಿನ ಜೋಡಣೆಯನ್ನು ಮಾಡಲಾಗುವುದು. ಕುವೆಂಪುರವರು ಕವಿ ಶೈಲದಲ್ಲಿ ಕವನ ಬರೆಯುವ ಮಾದರಿ ಇರಲಿದೆ. ಗಾಂಧಿ ಮೈದಾನದಲ್ಲಿ ವಿವಿಧ ಇಲಾಖೆಗಳಿಂದ ಹಾಗೂ ಖಾಸಗಿಯವರಿಂದ ವಸ್ತು ಪ್ರದರ್ಶನದ ಮಳಿಗೆಯನ್ನು ಆಯೋಜಿಸಲಾಗಿದೆ. ರೈತರು ಬೆಳೆದಿರುವಂತಹ ವಿಶಿಷ್ಟವಾದ ಹಣ್ಣುಗಳು, ತರಕಾರಿ, ತೋಟದ ಬೆಳೆಗಳು, ಸಂಬಾರು ಬೆಳೆಗಳ ಪ್ರದರ್ಶಿಕೆಯನ್ನು ಪ್ರದರ್ಶಿಸಲು ಉದ್ದೇಶಿಸಲಾಗಿದೆ. ಅತ್ಯುತ್ತಮ ಪ್ರದರ್ಶಿಕೆಗಳಿಗೆ ಬಹುಮಾನ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ತಿಳಿಸಿದ್ದಾರೆ.

ತೋಟಗಾರಿಕೆಯಲ್ಲಿ ಆಸಕ್ತಿಯಿರುವ ಸಾರ್ವಜನಿಕರಿಗೆ ಒಣಹೂ ಜೋಡಣೆ, ಬಿಡಿಹೂಗಳ ಜೋಡಣೆ, ಇಕೆಬಾನೆ, ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಫಲಪುಷ್ಪ ಪ್ರದರ್ಶನದ ಅಂಗವಾಗಿ ಸಂಜೆ 6.30 ಗಂಟೆಗೆ ವಿವಿಧ ಸ್ಥಳೀಯ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು.

ಫಲಪುಷ್ಪ ಪ್ರದರ್ಶನದ ವೀಕ್ಷಣೆಗೆ ರೂ.10 ಗಳ ಪ್ರವೇಶ ಶುಲ್ಕ ಹಾಗೂ ಮಕ್ಕಳಿಗೆ ರೂ.5 ಮತ್ತು ಶಾಲಾ ಮಕ್ಕಳಿಗೆ ಉಚಿತವಾಗಿ ಪ್ರವೇಶ ನೀಡಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ವಿವರಿಸಿದರು.
ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರಾದ ದೇವಕಿ, ಸಹಾಯಕ ನಿರ್ದೇಶಕರಾದ ಪ್ರಮೋದ್ ಫಲಪುಷ್ಪ ಪ್ರದರ್ಶನದ ಕುರಿತು ಮಾಹಿತಿ ನೀಡಿದರು.

ಮಾ.9 ರಿಂದ 11 ರವರೆಗೆ ನಗರದ ರಾಜಾಸೀಟು ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಮಾ.9 ರಂದು ಸಂಜೆ 4 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್. ಸೀತಾರಾಂ ಅವರು ಚಾಲನೆ ನೀಡಲಿದ್ದಾರೆ.

ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ನಿಗಮ ಮಂಡಳಿ ಅಧ್ಯಕ್ಷರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಇತರೆ ಗಣ್ಯರು ಭಾಗವಹಿಸಲಿದ್ದಾರೆ.

See also  ಕೋರೋನ ಹತೋಟಿಗೆ ಬರದಿದಲ್ಲಿ ಲಾಕ್ ಡೌನ್ ಅನಿವಾರ್ಯ: ಉಮೇಶ್ ಕತ್ತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು