News Kannada
Friday, October 07 2022

ಕರ್ನಾಟಕ

ಚಿರತೆ ಮರಿಯನ್ನು ಕೊಂದ ಹಾಕಿದ ಕಾಡುಹಂದಿ - 1 min read

Photo Credit :

ಚಿರತೆ ಮರಿಯನ್ನು ಕೊಂದ ಹಾಕಿದ ಕಾಡುಹಂದಿ

ಗುಂಡ್ಲುಪೇಟೆ: ಕಾಡುಹಂದಿ ದಾಳಿಗೆ ಆರು ತಿಂಗಳ ಚಿರತೆಯ ಮರಿಯೊಂದು ಸಾವನ್ನಪ್ಪಿರುವ ಘಟನೆ ಬಂಡೀಪುರ ಹುಲಿಯೋಜನೆ ವ್ಯಾಪ್ತಿಯಲ್ಲಿ ನಡೆದಿದೆ.

ಹುಲಿ ಯೋಜನೆಯ ಓಂಕಾರ್ ವಲಯದ ಮಂಚಹಳ್ಳಿ ಹಾಗೂ ಕೋಟೆಕೆರೆ ನಡುವೆಯಿರುವ ರಂಗಸ್ವಾಮಿ ಎಂಬುವರ ಜಮೀನಿನ ಬಳಿ ಆರು ತಿಂಗಳ ಹೆಣ್ಣು ಚಿರತೆಯ ಕಳೇಬರ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕಳೇಬರವನ್ನು ಸುಟ್ಟುಹಾಕಲಾಯಿತು.

ಈ ಚಿರತೆ ಮರಿ ಕಾಡುಹಂದಿ ದಾಳಿಯಿಂದ ಮೃತಪಟ್ಟಿರುವುದಾಗಿ ಆರ್ಎಫ್ಓ ನವೀನ್ ಕುಮಾರ್ ತಿಳಿಸಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಇದೇ ರೀತಿ ಕಾಡುಹಂದಿ ಚಿರತೆ ಮರಿಯನ್ನು ಸಾಯಿಸಿತ್ತು.

ಜಿಲ್ಲೆಯಲ್ಲಿ ಕಾಡುಹಂದಿಗಳ ಹಾವಳಿ ಹೆಚ್ಚಾಗಿದ್ದು, ರೈತರ ಮೇಲೆಯೂ ಕಾಡುಹಂದಿಗಳು ದಾಳಿ ಮಾಡುತ್ತಿರುವುದು ಕಂಡು ಬಂದಿದೆ.

See also  ನಾಳೆ ಬಿಟ್ಟಂಗಾಲದಲ್ಲಿ ರಾಜ್ಯ ಮಟ್ಟದ ಜೇಸಿ ಕೆಸರು ಗದ್ದೆ ಕ್ರೀಡೋತ್ಸವ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು