News Kannada
Monday, October 03 2022

ಕರ್ನಾಟಕ

ರಾಜೀನಾಮೆ ಕೇಳೋಕೆ ಬಿಜೆಪಿಯವರಿಗೇನು ಅಧಿಕಾರ: ಸಿಎಂ ಪ್ರಶ್ನೆ - 1 min read

Photo Credit :

ರಾಜೀನಾಮೆ ಕೇಳೋಕೆ ಬಿಜೆಪಿಯವರಿಗೇನು ಅಧಿಕಾರ: ಸಿಎಂ ಪ್ರಶ್ನೆ

ಮಂಡ್ಯ: ಲೋಕಾಯುಕ್ತ ನ್ಯಾಯಮೂರ್ತಿಗೆ ಚಾಕು ಇರಿತ ಪ್ರಕರಣವನ್ನು ಬಿಜೆಪಿ ಪಕ್ಷದವರು ತಮ್ಮ ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ರಾಜೀನಾಮೆ ಕೇಳಲು ಅವರು ಯಾರು? ಬಿಜೆಪಿಯವರು ಕೇಳಿದ ತಕ್ಷಣ ನಾನು ರಾಜೀನಾಮೆ ಕೊಡಲ್ಲ. ಅಂತಹ ಪ್ರಸಂಗವೂ ಇಲ್ಲ ಎಂದರು.

ಪಾಂಡವಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭದ್ರತಾ ಲೋಪವಾಗಿರುವ ಬಗ್ಗೆ ಒಪ್ಪಿಕೊಂಡರಲ್ಲದೆ, ಈ ಪ್ರಕರಣವನ್ನು ಗೃಹಮಂತ್ರಿಗಳ ಕಾರ್ಯದರ್ಶಿಗಳಿಂದ ತನಿಖೆಗೆ ಆದೇಶ ನೀಡಿದ್ದಲ್ಲದೆ, ಲೋಕಾಯುಕ್ತರಿಗೆ ಭದ್ರತೆ ಹೆಚ್ಚಿಸುವ ಬಗ್ಗೆಯೂ ಕೂಡ ಸೂಚಿಸಿರುವುದಾಗಿ ಹೇಳಿದರು.

ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪನಿಗೆ ನಾಲಿಗೆಗೂ, ಮೆದುಳಿಗೂ ಕನೆಕ್ಷನ್ ಇಲ್ಲ. ನನ್ನ ರಾಜೀನಾಮೆ ಕೇಳುವ ಅವನಿಗೆ ಸಂವಿಧಾನದ ಅರಿವೇ ಇಲ್ಲ. ಹಾಗಾಗಿ ರಾಷ್ಟ್ರಪತಿ ಆಡಳಿತ ಕೇಳುತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.

ನಮಗೆ ರಾಜ್ಯಸಭೆಯಲ್ಲಿ 3 ಸ್ಥಾನ ಗೆಲ್ಲುವ ಅವಕಾಶ ಹಾಗೂ ಆರ್ಹತೆ ಇದೆ. ಜತೆಗೆ ಪಾಂಡವಪುರದ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಮುಂಬರುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಹಾಕಬೇಕೋ ಅಥವಾ ಬೇಡವೋ ಎಂಬುದನ್ನು ರೈತಸಂಘದವರ ಜತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.

ರಾಜ್ಯಸಭೆ ಚುನಾವಣೆಗೂ ಬಿಬಿಎಂಪಿ ಹೊಂದಾಣಿಕೆಗೂ ಯಾವುದೇ ಸಂಬಂಧವಿಲ್ಲ. ನಾವೇ ಮೂರು ಮಂದಿ ಗೆಲ್ಲುವ ಅವಕಾಶವಿದೆ. ಜೆಡಿಎಸ್ ನಾಯಕರು ಬಿಬಿಎಂಪಿ ಮೈತ್ರಿ ವಾಪಸ್ ಪಡೆದರೆ ಪಡೆದುಕೊಳ್ಳಲಿ. ಬಿಬಿಎಂಪಿಯಲ್ಲಿ ಅಧಿಕಾರ ಹಂಚಿಕೆ ಮಾಡಿಕೊಂಡಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು

See also  ಕೇರಳದಲ್ಲಿ ಅತೀ ಉದ್ದನೆಯ ಸೇತುವೆ 11ರಂದು ಲೋಕಾರ್ಪಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು