News Kannada
Monday, October 03 2022

ಕರ್ನಾಟಕ

ಕೇರಳದಲ್ಲಿ ಅತೀ ಉದ್ದನೆಯ ಸೇತುವೆ 11ರಂದು ಲೋಕಾರ್ಪಣೆ - 1 min read

Photo Credit :

ಕೇರಳದಲ್ಲಿ ಅತೀ ಉದ್ದನೆಯ ಸೇತುವೆ 11ರಂದು ಲೋಕಾರ್ಪಣೆ

ಕಾಸರಗೋಡು: ಜಿಲ್ಲೆಯ ಅತೀ ಉದ್ದದ ಸೇತುವೆಗೆ ಇದೇ೧೧ ರಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಲೋಕಾರ್ಪಣೆ ಮಾಡಲಿದ್ದಾರೆ. ಚೆರ್ವತ್ತೂರು ಅಚ್ಚಾ೦ತುರ್ತಿ ಯಲ್ಲಿ ಈ ಸೇತುವೆ ನಿರ್ಮಾಸಲಾಗಿದೆ. ಸಮಾರಂಭದಲ್ಲಿ ರಾಜ್ಯ ಲೋಕೋಪಯೋಗಿ ಸಚಿವ ಜಿ .ಸುಧಾಕರನ್ ಅಧ್ಯಕ್ಷತೆ ವಹಿಸುವರು .

ಸೇತುವೆಗೆ ೨೦೧೦ ರ ಜೂನ್ ೧೭ ರಂದು ಶಿಲಾನ್ಯಾಸ ನೆರವೇರಿಸಲಾಗಿತ್ತು. ೨೯೬ ಮೀಟರ್ ಉದ್ದದ ಈ ಸೇತುವೆ ನಿರ್ಮಾಣಗೊಳ್ಳುವುದರೊಂದಿಗೆ ಚೆರ್ವತ್ತೂರು ರಾಷ್ಟೀಯ ಹೆದ್ದಾರಿ ಗೆ ಸಮಾಂತರವಾಗಿ ಸುಲಭವಾಗಿ ಪಯ್ಯನ್ನೂರಿಗೆ ತಲುಪಲು ಸಾಧ್ಯವಾಗಲಿದೆ.

ಈ ಸೇತುವೆ ರಾಜ್ಯದಲ್ಲೇ ಅತಿ ಉದ್ದದ ಸೇತುವೆ ಎಂದು ದಾಖಲೆಗೆ ಪಾತ್ರವಾಗಿದ್ದು , ೨೦೦೯ ರಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ವಿ . ಎಸ್ ಅಚ್ಯುತಾನಂದನ್ ನೇತೃತ್ವದ ಸರಕಾರದ ವಿಶೇಷ ಯೋಜನೆ ಯಿಂದ ೨೩ ಕೋಟಿ ರೂ. ವನ್ನು ಈ ಸೇತುವೆಗೆ ಮಂಜೂರುಗೊಳಿಸಲಾಗಿತ್ತು .

೨೦೧೦ ರಲ್ಲಿ ಅಂದು ಲೋಕೋಪಯೋಗಿ ಸಚಿವರಾಗಿದ್ದ ಪಿ . ಜೆ ಜೋಸೆಫ್ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ್ದರು . ಆದರೆ ಸೇತುವೆ ಪೂರ್ಣಗೊಳ್ಳಲು ಎಂಟು ವರ್ಷ ಕಾಯಬೇಕಾಯಿತು . ಹಲವು ಬಾರಿ ಕೆಲ ಕಾರಣಗಳಿಂದ ಕಾಮಗಾರಿ ಅಡ್ಡಿಯಾಗಿತ್ತು . ಆದರೆ ನಾಗರಿಕರ ಹೋರಾಟದ ಫಲವಾಗಿ ಕಾಮಗಾರಿ ಗೆ ಮತ್ತೆ ಚಾಲನೆ ನೀಡಲಾಗಿತ್ತು .ಈ ಸೇತು ವೆ ನಿರ್ಮಾಣವಾಗುವುದರೊಂದಿಗೆ ಈ ಪ್ರದೇಶದ ಸಾವಿರಾರು ಮಂದಿಗೆ ಅನುಕೂಲವಾಗಿದೆ. ಕಿಲೋ ಮೀಟರ್ ಗಳಷ್ಟು ಸುತ್ತು ಬರಬೇಕಾಗಿದ್ದರೂ ಈಗ ಸೇತುವೆ ನಿರ್ಮಾಣಗೊಂಡಿರುವುದರಿಂದ ನೀಲೇಶ್ವರ – ಪಯ್ಯನ್ನೂರು ಪ್ರಯಾಣಕ್ಕೆ ೧೩ ಕಿ.ಮೀ ನಷ್ಟು ಪ್ರಯಾಣ ಲಾಭವಾಗಲಿದೆ .

ಸೇತುವೆ ಉದ್ಘಾಟನೆ ಯನ್ನು ಸಂಭ್ರಮವನ್ನು ಆಚರಿಸಲು ನಾಗರಿಕರು ಮುಂದೆ ಬಂದಿದ್ದು, ಈಗಾಗಲೇ ಸಿದ್ಧತೆ ನಡೆಯುತ್ತಿದೆ. ಮಾರ್ಚ್ ೧೧ ರಂದು ಸಂಜೆ ೩ ಗಂಟೆಗೆ ಸೇತುವೆ ಲೋಕಾರ್ಪಣೆಗೊಳ್ಳಲಿದೆ.

See also  ಕೊರೋನಾಕ್ಕೆ ನಾಟಿ ಔಷಧಿ ವಿತರಣೆ, ದಾಳಿ ಮಾಡಿದ ಅಧಿಕಾರಿಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು