News Kannada
Thursday, October 06 2022

ಕರ್ನಾಟಕ

ರೈತರ ಮೇಲಿರುವ ಎಲ್ಲ ಮೊಕದ್ದಮೆಗಳು ವಾಪಸ್: ಸಿಎಂ ಹೇಳಿಕೆ - 1 min read

Photo Credit :

ರೈತರ ಮೇಲಿರುವ ಎಲ್ಲ ಮೊಕದ್ದಮೆಗಳು ವಾಪಸ್: ಸಿಎಂ ಹೇಳಿಕೆ

ಮಂಡ್ಯ: ಪಾಂಡವಪುರ ಪಟ್ಟಣದಲ್ಲಿ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಪ್ರತಿಮೆ ನಿರ್ಮಾಣ ಮಾಡಲು ಗ್ರೀನ್ ಸಿಗ್ನಲ್ ನೀಡಿದ ಮುಂಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಮೇಲಿರುವ ಎಲ್ಲ ಮೊಕದ್ದಮೆಗಳು ವಾಪಸ್ ಪಡೆಯುವುದಾಗಿ ಹೇಳಿದ್ದಾರೆ.

ಪಾಂಡವಪುರದ ಪಾಂಡವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಕೆ.ಎಸ್.ಪುಟ್ಟಣ್ಣಯ್ಯರ ಹಸಿರು ನಮನ ಕಾರ್ಯಕ್ರಮದಲ್ಲಿ ಮಾತನಾಡಿ ಈ ವಿಷಯ ತಿಳಿಸಿದ ಅವರು, ಪುಟ್ಟಣ್ಣಯ್ಯ ಅವರಿಗೆ ರೈತರ ಬಗ್ಗೆ ಅಪಾರ ಕಾಳಜಿ ಹಾಗೂ ಕಳಕಳಿ, ಬದ್ಧತೆ ಇತ್ತು. ಬಹಳ ಸ್ಪಷ್ಟತೆಯನ್ನು ಹೊಂದಿದ್ದ ಪುಟ್ಟಣ್ಣಯ್ಯ ಅವರು ನಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಯಾವಾಗಲೂ ಬೆಂಬಲ ನೀಡುತ್ತಿದ್ದರು. ವಿಧಾನ ಪರಿಷತ್ ಚುನಾವಣೆ, ವಿಧಾನಸಭಾ ಚುನಾವಣೆ ಸೇರಿದಂತೆ ಯಾವುದೇ ಚುನಾವಣೆ ಬಂದರೂ ಅವರು ನಮ್ಮ ಸರ್ಕಾರಕ್ಕೆ ಬೆಂಬಲ ನೀಡುತ್ತಿದ್ದರು. ಅವರು ಕೋಮುವಾದಿಗಳ ಬಗ್ಗೆ ವಿರುದ್ಧವಾಗಿರುವ ಕಾರಣದಿಂದ ನಮ್ಮನ್ನು ಬೆಂಬಲಿಸುತ್ತಿದ್ದರು. ಬಿಜೆಪಿ ಪಕ್ಷದವರ ಆಸೆ, ಆಮಿಷಗಳಿಗೆ ಎಂದೂ ಬಲಿಯಾಗಲಿಲ್ಲ. ಉಸಿರು ಇರುವವರೆಗೂ ಕೋಮುವಾದಿತನವನ್ನು ವಿರೋಧಿಸುತ್ತಲೇ ಇದ್ದರು ಎಂದು ಹೇಳಿದ್ದಾರೆ.

ರೈತ ನಾಯಕ ದಿ. ಕೆ.ಎಸ್. ಪುಟ್ಟಣ್ಣಯ್ಯ ಅವರ ಉತ್ತರಾಧಿಕಾರಿಯನ್ನು ರೈತರೇ ತೀರ್ಮಾನಿಸಿ. ಅದಕ್ಕೆ ರಾಜಕೀಯವಾಗಿ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು. ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಉತ್ತರಾಧಿಕಾರಿ ಯಾರೇ ಆದರೂ ಸರಿ ಕಾಂಗ್ರೆಸ್ ನಿಂದ ಅಭ್ಯರ್ಥಿ ನಿಲ್ಲಿಸುವುದಿಲ್ಲ. ಅವರಿಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ಪುಟ್ಟಣ್ಣಯ್ಯ ಅವರು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಕನಸುಕಂಡಿದ್ದ ಎಲ್ಲಾ ಯೋಜನೆಗಳಿಗೂ ಹಾಗೂ ಇತರೆ ಏನೆಲ್ಲಾ ಬೇಡಿಕೆ ಇಟ್ಟಿದ್ರು ಅವುಗಳಿಗೆ ಅನುದಾನ ಮಂಜೂರು ಮಾಡಿಕೊಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು. ಕೆಲವರು ಸತ್ತ ಮೇಲೆ ಮರೆತುಹೋಗುತ್ತಾರೆ. ಆದರೆ, ಪುಟ್ಟಣ್ಣಯ್ಯ ಅವರ ವಿಚಾರದಲ್ಲಿ ಇದು ಸುಳ್ಳು. ಅವರು ಸತ್ತಿದ್ದರೂ ಅವರ ಆದರ್ಶಗಳ ಮೂಲಕ ಇನ್ನೂ ಕೂಡ ಜನರ ನಡುವೆ ಬದುಕಿದ್ದಾರೆ ಎಂದು ಹೇಳಿದರು.

80ರ ದಶಕದಲ್ಲಿ ರೈತಸಂಘ ಅಂದರೆ ಇಡೀ ಆಡಳಿತ ಯಂತ್ರವೇ ಗಢ ಗಢ ಅಂತ ನಡುಗುತ್ತಿತ್ತು. ಅಷ್ಟರ ಮಟ್ಟಿಗೆ ರೈತಸಂಘದ ಶಕ್ತಿ ಇತ್ತು. ಈ ರೀತಿ ಇದ್ದರೆ ಮಾತ್ರ ವ್ಯವಸ್ಥೆ ಸರಿಪಡಿಸಲು ಸಾಧ್ಯ. ರೈತರ ಸಂಘ ಅಂದರೆ ಪುಟ್ಟಣ್ಣಯ್ಯಗೆ ಬಹು ಆಸೆ. ರೈತಸಂಘದ ಹಿಂದಿನ ಶಕ್ತಿ ಮತ್ತೆ ಮರುಕಳಿಸಬೇಕು ಎನ್ನುವ ಕನಸು ಕಂಡಿದ್ದರು. ನಾನೂ ಕೂಡ 3 ವರ್ಷಗಳ ಕಾಲ ರೈತಸಂಘದಲ್ಲಿದ್ದೆ. ಜತೆಗೆ ನನಗೆ ಪುಟ್ಟಣ್ಣಯ ಒಳ್ಳೆಯ ಸ್ನೇಹಿತರಾಗಿದ್ದರು ಎಂದು ತಿಳಿಸಿದರು.

ಪುಟ್ಟಣ್ಣಯ್ಯ ರೈತರ ದೊಡ್ಡ ಧ್ವನಿಯಾಗಿದ್ದರು. ಆ ಧ್ವನಿ ಇಂದು ಬತ್ತಿಹೋಗಿದೆ. ಅವರ ಸ್ಥಾನವನ್ನು ತುಂಬಬೇಕಿದೆ. ಪ್ರೊ.ನಂಜುಂಡಸ್ವಾಮಿ, ರುದ್ರಪ್ಪ, ಸುಂದರೇಶ್ ರೀತಿ ಪುಟ್ಟಣ್ಣಯ್ಯ ಕೂಡ ಮಹಾನ್ ಹೋರಾಟಗಾರ. ಇವರ ಹೋರಾಟದಲ್ಲಿ ಅವರ ಪತ್ನಿ ಸುನೀತಾ ಅವರ ತ್ಯಾಗ ಅಪಾರ ಇದೆ ಎಂದರು.

See also  ಕೊಡಗಿನ ವೇಣುವಾದಕ ಸಹೋದರರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು