News Kannada
Tuesday, September 27 2022

ಕರ್ನಾಟಕ

ಬಿಸಿಲಿಗೆ ಬೆಂದಿದ್ದ ಬಂಡೀಪುರವನ್ನು ತಂಪಾಗಿಸಿದ ಮಳೆರಾಯ - 1 min read

Photo Credit :

ಬಿಸಿಲಿಗೆ ಬೆಂದಿದ್ದ ಬಂಡೀಪುರವನ್ನು ತಂಪಾಗಿಸಿದ ಮಳೆರಾಯ

ಗುಂಡ್ಲುಪೇಟೆ: ಬಂಡೀಪುರ ವ್ಯಾಪ್ತಿಯಲ್ಲಿ ಮಳೆ ಸುರಿದಿರುವುದು ನಿಸರ್ಗ ಪ್ರೇಮಿಗಳಿಗೆ ಖುಷಿ ತಂದಿದೆ. ಈಗಾಗಲೇ ಅರಣ್ಯದಲ್ಲಿದ್ದ ಕುರುಚಲು ಕಾಡು, ಮರ, ಗಿಡಗಳು ಒಣಗಿ ಬೋರಲಾಗಿದ್ದವು. ಇದೀಗ ಮಳೆ ಬಂದಿರುವುದರಿಂದ ಸ್ವಲ್ಪಮಟ್ಟಿಗೆ ಜೀವ ಕಳೆ ಬಂದಂತಾಗಿದೆ. ಬಂಡೀಪುರದಲ್ಲಿ ಬೇಸಿಗೆ ಆರಂಭದಲ್ಲಿಯೇ ಇಡೀ ಅರಣ್ಯ ಒಣಗಿ ಕಾಡು ಪ್ರಾಣಿಗಳು ಹಸಿರು ಮೇವು ಮತ್ತು ನೀರಿಗಾಗಿ ಪರದಾಡುವಂತಾಗಿತ್ತು. ಜತೆಗೆ ಕಾಡ್ಗಿಚ್ಚಿನ ಭಯವೂ ಆರಂಭವಾಗಿತ್ತು. 

ಈಗ ಮಳೆ ಬಂದಿರುವುದರಿಂದ ಸ್ವಲ್ಪ ಮಟ್ಟಿಗೆ ನೆಮ್ಮದಿ ತಂದಂತಾಗಿದೆ. ಕಳೆದ ವರ್ಷ ಈ ವ್ಯಾಪ್ತಿಯಲ್ಲಿ ಮಳೆ ಬಾರದ ಕಾರಣ ಕೆರೆಕಟ್ಟೆ, ಹೊಳೆಗಳು ಒಣಗಿ ಕಾಡು ಪ್ರಾಣಿಗಳು ನೀರನ್ನರಸಿಕೊಂಡು ವಲಸೆ ಹೋಗಿದ್ದವು. ಅಷ್ಟೇ ಅಲ್ಲದೆ ಅರಣ್ಯಕ್ಕೆ ಬೆಂಕಿ ಬಿದ್ದು ನೂರಾರು ಎಕರೆ ಅರಣ್ಯಗಳು ಭಸ್ಮವಾಗಿದ್ದಲ್ಲದೆ. ಅರಣ್ಯ ಸಿಬ್ಬಂದಿ ಸಜೀವ ದಹನಗೊಂಡ ದುರ್ಘಟನೆಯೂ ನಡೆದಿತ್ತು. 

ಸದ್ಯ ಮಳೆಯಾಗಿರುವುದರಿಂದ ಎಲ್ಲರೂ ನೆಮ್ಮದಿ ಪಡುವಂತಾಗಿದೆ. ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ ವಲಯ ಹಾಗೂ ಹಂಗಳ ಹೋಬಳಿಯ ದೇವರಹಳ್ಳಿ, ಕಲಿಗೌಡನಹಳ್ಳಿ, ಗೋಪಾಲಪುರ ಗ್ರಾಮಗಳಿಗೆ ಉತ್ತಮ ಮಳೆಯಾಗಿದೆ. ಒಂದಷ್ಟು ತಂಪಾಗಿದೆ ಇನ್ನೊಂದಷ್ಟು ಮಳೆ ಬಿದ್ದರೆ ಅರಣ್ಯ  ಹಸಿರಿನಿಂದ ನಳನಳಿಸಲು ಅನುಕೂಲವಾಗಬಹುದೇನೋ.

See also  ಜೊಯಿಡಾದಲ್ಲಿ ಉತ್ತರ ಕರ್ನಾಟಕದ ಮೊದಲ ಚಿಟ್ಟೆ ಪಾರ್ಕ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು