News Kannada
Friday, October 07 2022

ಕರ್ನಾಟಕ

ಕೂಡ್ಲ ಸೇವಾ ಸಹಕಾರಿ ಬ್ಯಾಂಕ್ ನಿಂದ ದರೋಡೆ: ಗ್ರಾಹಕರಿಗೆ ಚಿನ್ನಾಭರಣ ನೀಡಲು ಹಿಂದೇಟು - 1 min read

Photo Credit :

ಕೂಡ್ಲ ಸೇವಾ ಸಹಕಾರಿ ಬ್ಯಾಂಕ್ ನಿಂದ ದರೋಡೆ: ಗ್ರಾಹಕರಿಗೆ ಚಿನ್ನಾಭರಣ ನೀಡಲು ಹಿಂದೇಟು

ಕಾಸರಗೋಡು: ಕೂಡ್ಲು ಸೇವಾ ಸಹಕಾರಿ ಬ್ಯಾಂಕ್ ದರೋಡೆಗೆ ಸಂಬಂಧಪಟ್ಟಂತೆ ಗ್ರಾಹಕರು ಚಿನ್ನಾಭರಣವನ್ನು ಮರಳಿಸಲು ಬ್ಯಾಂಕ್ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದನ್ನು ಪ್ರತಿಭಟಿಸಿ ಎರಿಯಾಲ್ ನಲ್ಲಿರುವ ಬ್ಯಾಂಕ್ ಗೆ ಕ್ರಿಯಾ ಸಮಿತಿ ವತಿಯಿಂದ ಗುರುವಾರ ಮುತ್ತಿಗೆ ಹಾಕಲಾಯಿತು.

ಎರಿಯಾಲ್ ಪೇಟೆಯಿಂದ ಮೆರವಣಿಗೆ ಮೂಲಕ ಆಗಮಿಸಿದ ಕಾರ್ಯಕರ್ತರು ಮುತ್ತಿಗೆ ಹಾಕಿದರು.

ಪ್ರತಿಭಟನೆಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ. ಜಿ .ಸಿ ಬಶೀರ್ ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಎ. ಎ ಜಲೀಲ್ , ಮುಜೀಬ್ ಕಂಬಾರ್ , ಎ. ಕೆ ಶಾಫಿ , ಖಲೀಲ್ ಎರಿಯಾಲ್, ಹನೀಫ್ ಚೇರಂಗೈ, ಮನ್ಸೂರ್, ಹನೀಫ್ ಕಡಪ್ಪುರ ಮೊದಲಾದವರು ನೇತೃತ್ವ ವಹಿಸಿದ್ದರು.

ಈ ಬ್ಯಾಂಕ್ ನಲ್ಲಿ ವರ್ಷಗಳ ಅವಧಿಯಲ್ಲಿ ಎರಡು ಬಾರಿ ದರೋಡೆ ನಡೆದಿತ್ತು ಈ ಚಿನ್ನಾಭರಣದಲ್ಲಿ ಬಹುತೇಕ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.

ಗ್ರಾಹಕರು ಅಡವಿಟ್ಟಿರುವ ಚಿನ್ನಾಭರವನ್ನು ಮರಳಿ ನೀಡುವಂತೆ ಒತ್ತಾಯಿಸಿದರೂ ಬ್ಯಾಂಕ್ ಅಧಿಕಾರಿಗಳು ನೀಡಲು ಹಿಂದೇಟು ಹಾಕು ತ್ತಿದ್ದು, ಗ್ರಾಹಕರಿಗೆ ಅಡವಿಟ್ಟ ಚಿನ್ನಾಭರಣವನ್ನು ಕೂಡಲೇ ನೀಡಬೇಕು, ಬ್ಯಾಂಕ್ ನ ಮಾಜಿ ಕಾರ್ಯದರ್ಶಿ ಯವರ ಆರ್ಥಿಕ ವ್ಯವಹಾರದ ಬಗ್ಗೆ ತನಿಖೆ ನಡೆಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುತ್ತಿಗೆ ಹಾಕಲಾಯಿತು.

೨೦೦೧ ರಲ್ಲಿ ನಡೆದ ದರೋಡೆ ನಡೆದರೂ ೧೫೩ ಮಂದಿಗೆ ಇನ್ನೂ ಚಿನ್ನಾಭರಣ ಮರಳಿ ನೀಡಿಲ್ಲ . ೨೦೧೫ ರ ಸೆಪ್ಟ೦ ಬರ್ ನಲ್ಲಿ ದರೋಡೆ ನಡೆದ ಬಹುತೇಕ ಚಿನ್ನಾಭರಣ ಲಭಿಸಿದೆ. ಆದರೆ ಚಿನ್ನಾಭರಣ ಮರಳಿ ನೀಡಲು ಅಧಿಕಾರಿಗಳು ಇನ್ನೂ ಮುಂದಾಗದಿರುವುದನ್ನು ಪ್ರತಿಭಟಿಸಿ ಹೋರಾಟ ನಡೆಸಲು ಗ್ರಾಹಕರು ತೀರ್ಮಾನಿಸಿದ್ದಾರೆ

 

See also  ಅಕ್ರಮವಾಗಿ ಗೋವಾ ಮದ್ಯ ಸಾಗಾಟ: ಪೊಲೀಸರಿಂದ ದಾಳಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು