News Kannada
Saturday, October 08 2022

ಕರ್ನಾಟಕ

ಕಾಂಗ್ರೆಸ್ ಜತೆ ಮೈತ್ರಿ ಸಿಪಿಎಂನ್ನು ದುರ್ಬಲಗೊಳಿಸುವುದು: ರಾಮಚಂದ್ರ ಪಿಳ್ಳೈ - 1 min read

Photo Credit :

ಕಾಂಗ್ರೆಸ್ ಜತೆ ಮೈತ್ರಿ ಸಿಪಿಎಂನ್ನು ದುರ್ಬಲಗೊಳಿಸುವುದು: ರಾಮಚಂದ್ರ ಪಿಳ್ಳೈ

ಕಾಸರಗೋಡು: ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯನ್ನು ಸೋಲಿಸುವುದು ಸಿಪಿಎಂನ ಪ್ರಮುಖ ಗುರಿ. ಆದರೆ ಕಾಂಗ್ರೆಸ್ ಪಕ್ಷದೊಂದಿಗೆ ಯಾವುದೇ ರೀತಿಯ ಮೈತ್ರಿ, ಒಪ್ಪಂದ ಮಾಡುವುದಿಲ್ಲ ಎಂದು ಸಿಪಿಎಂ ಪಾಲಿಟ್ ಬ್ಯುರೋ ಸದಸ್ಯ ಎಸ್. ರಾಮಚಂದ್ರ ಪಿಳ್ಳೈ ಹೇಳಿದರು.

ಅವರು ಶನಿವಾರ ಕಾಸರಗೋಡು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಕಾಂಗ್ರೆಸ್ ನೊಂದಿಗಿನ ಮೈತ್ರಿ ಸಿಪಿಎಂ ನ್ನು ಮತ್ತಷ್ಟು ದುರ್ಬಲಗೊಳಿಸಲಿದೆ. ಕಾಂಗ್ರೆಸ್ ನ ನೀತಿಯನ್ನು ಒಪ್ಪಲು ಸಿಪಿಎಂಗೆ ಸಾಧ್ಯವಿಲ್ಲ. ದೇಶದ ವಿವಿಧ ರಾಜಕೀಯ ಪಕ್ಷಗಳನ್ನು ಒಗ್ಗೂಡಿಸುವುದು ಇಂದು ಮುಖ್ಯವಾಗಿದೆ. ಆಯಾ ರಾಜ್ಯಗಳಲ್ಲಿರುವ ಪ್ರಾದೇಶಿಕ ಪಕ್ಷಗಳಿಗೆ ಅದರದ್ದೇ ನಿಲುವುಗಳಿವೆ. ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯ ಪತನ ಆರಂಭವಾಗಿದೆ. ಎನ್ ಡಿಎಯಿಂದ ಒಂದೊಂದೇ ಮೈತ್ರಿ ಪಕ್ಷಗಳು ಕಳಚಿಕೊಳ್ಳತೊಡಗಿದೆ. ಶಿವಸೇನೆ ಅಪಸ್ವರ ಮುಂದುವರಿಸಿಕೊಂಡು ಹೋಗುತ್ತಿದೆ. ಟಿಡಿಪಿ ಸೇರಿದಂತೆ ಎರಡು ಪಕ್ಷಗಳು ಮೈತ್ರಿಯನ್ನು ತ್ಯಜಿಸಿವೆ. ಇನ್ನಷ್ಟು ಪಕ್ಷಗಳು ಹೊರಬರಲು ತಯಾರಾಗಿ ನಿಂತಿದೆ ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ಸರಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ. ಇದರ ವಿರುದ್ಧ ಕಾರ್ಮಿಕರ ಹೋರಾಟ ಅಗತ್ಯವಾಗಿದೆ ಎಂದು ಹೇಳಿದರು. ಸಂಸದ ಪಿ. ಕರುಣಾಕರನ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ. ವಿ. ಬಾಲಕೃಷ್ಣನ್ ಮಾಸ್ಟರ್ ಮೊದಲಾದವರು ಉಪಸ್ಥಿತರಿದ್ದರು.

See also  ಮಹಿಳೆ ಬಾಯಲ್ಲಿ ಸೂಜಿ ಬಿಟ್ಟು ಓಡಿದ ದಂತವೈದ್ಯ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು