News Kannada
Thursday, September 29 2022

ಕರ್ನಾಟಕ

ಸಿಎಂಗೆ ರಾಜಕೀಯ ಪುನರ್ ಜನ್ಮ ನೀಡಿದ್ದು ನಾನು: ಎಚ್.ವಿಶ್ವನಾಥ್ - 1 min read

Photo Credit :

ಸಿಎಂಗೆ ರಾಜಕೀಯ ಪುನರ್ ಜನ್ಮ ನೀಡಿದ್ದು ನಾನು: ಎಚ್.ವಿಶ್ವನಾಥ್

ಕೆ.ಆರ್.ನಗರ: ಜೆಡಿಎಸ್ ನಿಂದ ಹೊರಹಾಕಲ್ಪಟ್ಟ ನಂತರ ಮೂಲೆಗುಂಪಾಗಿದ್ದ ಸಿದ್ದರಾಮಯ್ಯನವರಿಗೆ ರಾಜಕೀಯ ಪುನರ್ಜನ್ಮ ನೀಡಿ ಅವರು ರಾಜ್ಯದ ಮುಖ್ಯಮಂತ್ರಿಯಾಗಲು ನಾನು ಪ್ರಮುಖ ಕಾರಣ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ಹೇಳಿದರು.

ತಾಲ್ಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿ ವಿಕಾಸ ಗ್ರಾಮ ಯೋಜನೆಗೆ ಭೂಮಿ ಪೂಜೆ ನೆರವೇರಿಸಿದ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು ಇದರ ಜತೆಗೆ ಕೆ.ಆರ್.ನಗರ ತಾಲೂಕಿನಲ್ಲಿ ಕನಕಪೀಠದ ಶಾಖಾ ಮಠ ಆರಂಭಿಸಿ ಇದರೊಟ್ಟಿಗೆ ಶಾಲಾ ಕಾಲೇಜುಗಳನ್ನು ಆರಂಭಿಸಿ ಸಮುದಾಯಕ್ಕೆ ಸ್ವಾಭಿಮಾನ ತಂದುಕೊಟ್ಟ ನಾನು ಕುರುಬ ಸಮಾಜ ವಿರೋದಿಯೇ ಎಂದು ಪ್ರಶ್ನಿಸಿದರು.

ಮೈಸೂರು ಜಿಲ್ಲೆಯ ಕುರುಬ ಸಮುದಾಯದವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೊಡುಗೆ ಏನು ಎಂದು ಪ್ರಶ್ನಿಸಿದ ಎಚ್.ವಿಶ್ವನಾಥ್ ನನ್ನ ಹಿರಿತನ ಮತ್ತು ರಾಜಕೀಯ ಶಕ್ತಿಯನ್ನು ಧಾರೆ ಎರೆದ ನನ್ನನ್ನು ಕಾಂಗ್ರೆಸ್ ಹೊರ ಹಾಕಿಸಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ ಎಂದರಲ್ಲದೆ, ಕೆ.ಆರ್.ನಗರ ತಾಲೂಕಿನಲ್ಲಿ ಕುರುಬ ಸಮಾಜದವರ ರಾಜಕೀಯ ಅಧಿಕಾರ ಮುಗಿಸಲು ಮುಖ್ಯಮಂತ್ರಿಗಳು ಕಾರಣ ಎಂದು ಆರೋಪಿಸಿದರು.

ಹುಣಸೂರು ತಾಲೂಕಿನಲ್ಲಿ ಒಕ್ಕಲಿಗರು, ಕುರುಬ ಮತ್ತು ನಾಯಕ ಸಮಾಜದವರು ಸೇರಿದಂತೆ ಇತರ ಎಲ್ಲ ವರ್ಗದವರು ಜೆಡಿಎಸ್ ಪರವಾಗಿದ್ದು ಕೆ.ಆರ್.ನಗರ ತಾಲೂಕಿನಲ್ಲಿಯೂ ಕುರುಬರು ಶಾಸಕ ಸಾ.ರಾ.ಮಹೇಶ್ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದ ಎಚ್.ವಿಶ್ವನಾಥ್ ರಾಜಕಾರಣದಲ್ಲಿ ಬದಲಾವಣೆ ಸಹಜ. ನಾನು ಈಗ ಜೆಡಿಎಸ್ ಪಕ್ಷದ ಕಟ್ಟಾಳು ಹಾಗಾಗಿ ಆ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದು ಇದನ್ನು ಯಾರು ಅನ್ಯತಾ ಭಾವಿಸಬೇಕಿಲ್ಲ ಎಂದರು

See also  ಬಿಜೆಪಿ ಮುಖಂಡನ ಬರ್ಬರ ಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು