News Kannada
Wednesday, October 05 2022

ಕರ್ನಾಟಕ

ಅನುರಾಗ್ ತಿವಾರಿ ನಿಗೂಢ ಸಾವಿನ ಪ್ರಕರಣ : ಮಡಿಕೇರಿಯಲ್ಲಿ ಸಿಬಿಐ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ - 1 min read

Photo Credit :

ಅನುರಾಗ್ ತಿವಾರಿ ನಿಗೂಢ ಸಾವಿನ ಪ್ರಕರಣ : ಮಡಿಕೇರಿಯಲ್ಲಿ ಸಿಬಿಐ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ

ಮಡಿಕೇರಿ: ರಾಜ್ಯ ಆಹಾರ ಇಲಾಖೆಯ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ನಿಗೂಢ ಸಾವಿನ ಬಗ್ಗೆ ವಿಚಾರಣೆ ನಡೆಸಲು ಸಿಬಿಐ ಅಧಿಕಾರಿಗಳ ತಂಡ ಮಡಿಕೇರಿಗೆ ಭೇಟಿ ನೀಡಿದ್ದು, ಮಾಹಿತಿ ಕಲೆ ಹಾಕುತ್ತಿದೆ.

ಉತ್ತರ ಪ್ರದೇಶ ಮೂಲದ ಅನುರಾರ್ ತಿವಾರಿ ಅವರು ಬೀದರ್ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ ನಂತರ ಆಹಾರ ಇಲಾಖೆಯ ಆಯುಕ್ತರಾಗಿ ವರ್ಗಾವಣೆ ಆಗಿದ್ದರು. 2013ರ ಆಗಸ್ಟ್ ನಿಂದ 2015ರ ಜೂನ್ ವರೆಗೆ ಕೊಡಗು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

2017 ಮೇ 17 ರಂದು ತರಬೇತಿ ಹಿನ್ನೆಲೆಯಲ್ಲಿ ಉತ್ತರ ಪ್ರದೇಶಕ್ಕೆ ತೆರಳಿದ್ದ ಅವರು ಲಕ್ನೋದಲ್ಲಿ ಸಾವಿಗೀಡಾಗಿದ್ದರು. ಮರಣೋತ್ತರ ವರದಿಯಲ್ಲಿ ದೇಹದ ಮೇಲೆ ಗಾಯಗಳ ಗುರುತು ಕಂಡು ಬಂದಿದ್ದರಿಂದ ಹಲವು ಅನುಮಾನ ಹುಟ್ಟಿಸಿತ್ತು. ತಿವಾರಿಯವರ ನಿಗೂಢ ಸಾವಿನ ಕುರಿತು ಕಾರಣಗಳನ್ನು ಪತ್ತೆ ಹಚ್ಚಲು ಸಿಬಿಐ ತನಿಖೆಯಾಗಬೇಕೆಂದು ಕುಟುಂಬದ ಸದಸ್ಯರು ಒತ್ತಾಯಿಸಿದ್ದರು. ನಂತರ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು. ಹೀಗಾಗಿ ಸಿಬಿಐ ತಂಡ ಉತ್ತರ ಪ್ರದೇಶ ಸೇರಿದಂತೆ ಅನುರಾಗ್ ತಿವಾರಿ ಅವರು ಕರ್ತವ್ಯ ನಿರ್ವಹಿಸಿದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ತನಿಖೆ ಕೈಗೊಂಡಿದೆ.

ಸದ್ಯಕ್ಕೆ ಮಡಿಕೇರಿಯ ಸುದರ್ಶನ ಅತಿಥಿ ಗೃಹದಲ್ಲಿರುವ ಸಿಬಿಐ ಅಧಿಕಾರಿಗಳು ತಿವಾರಿ ಅವರು ಜಿಲ್ಲಾಧಿಕಾರಿಯಾಗಿದ್ದಾಗ ಇವರೊಂದಿಗೆ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ, ಗನ್ ಮ್ಯಾನ್ ಹಾಗೂ ಜಿಲ್ಲಾಧಿಕಾರಿ ನಿವಾಸದ ಅಡುಗೆ ಸಿಬ್ಬಂದಿ ಸೇರಿದಂತೆ ಇನ್ನೂ ಕೆಲವರಿಂದ ಮಾಹಿತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

See also  ಸ್ವರ್ಗಸ್ಥರಾದ ಹಿರಿಯ ಯೋಧ ರಾಯಪ್ಪನ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು