News Kannada
Sunday, September 25 2022

ಕರ್ನಾಟಕ

ಬಿಗಿ ಭದ್ರತೆಯೊಂದಿಗೆ ಸೋಮವಾರಪೇಟೆಯಲ್ಲಿ ರಾಮನವಮಿ ಆಚರಣೆ - 1 min read

Photo Credit :

ಬಿಗಿ ಭದ್ರತೆಯೊಂದಿಗೆ ಸೋಮವಾರಪೇಟೆಯಲ್ಲಿ ರಾಮನವಮಿ ಆಚರಣೆ

ಸೋಮವಾರಪೇಟೆ: ಪಟ್ಟಣದ ಶ್ರೀರಾಮನವಮಿ ಉತ್ಸವ ಸಮಿತಿ ಹಾಗೂ ಹಿಂದು ಜಾಗರಣ ವೇದಿಕೆ ವತಿಯಿಂದ ಅದ್ದೂರಿಯ ರಾಮನವಮಿ ಜರುಗಿತು.

ಬೆಳಗ್ಗೆ ಆಂಜನೇಯ ದೇವಾಲಯದಲ್ಲಿನ ಶ್ರೀ ರಾಮನ ಮೂರ್ತಿಗೆ ಪೂಜಾ ಕೈಂಕರ್ಯಗಳನ್ನು ಅರ್ಚಕರಾದ ನಂಜುಂಡೇಶ್ವರಸ್ವಾಮಿಗಳು ನೆರವೇರಿಸಿದ ನಂತರ ನಾಗರಿಕರಿಗೆ ಪಾನಕ ಹಾಗೂ ಕೋಸಂಬರಿಯನ್ನು ವಿತರಿಸಲಾಯಿತು. ಮಧ್ಯಾಹ್ನ ಸಮಿತಿ ವತಿಯಿಂದ ಅನ್ನದಾನ ಏರ್ಪಡಿಸಲಾಗಿತ್ತು. ಸಂಜೆ ಸಾಂದೀಪನಿ ಶಾಲೆಯ ವಿದ್ಯಾರ್ಥಿಗಳಾದ ಶ್ರೀಲಕ್ಷ್ಮಿ ಮತ್ತು ಶ್ರೀವಿದ್ಯಾ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ಕಳೆದ ಐದು ದಿನಗಳಿಂದ ರಾಮ ನವಮಿ ಪ್ರಯುಕ್ತ ಪಟ್ಟಣವನ್ನು ಕೇಸರಿಮಯವಾಗಿಸಿದ್ದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು, ವಾಹನಗಳಿಗೆ ಕೇಸರಿ ಧ್ವಜ ಕಟ್ಟಿಕೊಂಡು ಸಂಚರಿಸುತ್ತಿದ್ದ ದೃಶ್ಯ ಕಂಡು ಬಂತು. ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಶ್ರೀರಾಮಾಂಜನೇಯ ಉತ್ಸವ ಸಮಿತಿಯ ಸದಸ್ಯರು ಶ್ರೀರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಇದರ ಜೊತೆಗೆ ಅಕ್ಕಪಕ್ಕದ ಗ್ರಾಮಗಳಾದ ಗಾಂಧಿನಗರ, ಶಾಂತಳ್ಳಿ, ಕಾನ್ವೆಂಟ್ ಬಾಣೆ, ಯಡೂರು, ರೇಂಜರ್ ಬ್ಲಾಕ್, ಹಾನಗಲ್ ಹಾಗೂ ಬಜೆಗುಂಡಿ ಗ್ರಾಮಗಳಲ್ಲಿ ಶ್ರೀರಾಮನ ಮೂರ್ತಿಗೆ ಪೂಜೆ ಸಲ್ಲಿಸಿ, ಸ್ತಬ್ಧಚಿತ್ರಗಳೊಂದಿಗೆ ಮೆರವಣಿಗೆ ನಡೆಸಿದರು.

ಸಂಜೆ 7 ಗಂಟೆಗೆ ಆಂಜನೇಯ ದೇವಾಲಯದಿಂದ ಶ್ರೀ ರಾಮನ ಮಂಟಪದ ಶೋಭಾ ಯಾತ್ರೆಗೆ ಚಾಲನೆ ನೀಡಲಾಯಿತು. ನಂತರ ಪಟ್ಟಣ ಹಾಗೂ ವಿವಿಧ ಗ್ರಾಮಗಳಲ್ಲಿನ ಮಂಟಪಗಳು ಹೊರಟು ವಿವೇಕಾನಂದ ಪ್ರತಿಮೆ ಬಳಿ ಸೇರಿದ ಸಂದರ್ಭ ಸಹಸ್ರಾರು ಜನರ ಜಾತ್ರೆಯೇ ಸೇರಿತ್ತಲ್ಲದೇ, ಜೈ ಶ್ರೀರಾಮ್, ಬೊಲೋ ಭಾರತ್ ಮಾತಾಕೀ ಜೈ ಘೋಷಣೆಗಳು ಮುಗಿಲುಮುಟ್ಟಿತು. ವಿವೇಕಾನಂದ ಪ್ರತಿಮೆ ಬಳಿ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಜಾನಪದ ಕಲಾತಂಡಗಳಿಂದ ಡೊಳ್ಳುಕುಣಿತ, ತೋಳೂರುಶೆಟ್ಟಳ್ಳಿಯ ಸುಗ್ಗಿ ಕುಣಿತ, ತುಳುನಾಡಿನ ಕಂಗೀಲು ನೃತ್ಯ ಗಮನಸೆಳೆಯಿತು. ಅಲ್ಲದೇ ಪೂಜಾ ಕುಣಿತ, ವೀರಗಾಸೆ, ಚಂಡೆ ಮತ್ತು ಜಾಗಟೆ ವಾದ್ಯ ಸೆರಿದಂತೆ ವಿವಿಧ ಕಲಾತಂಡಗಳು ನೀಡಿದ ಕಾರ್ಯಕ್ರಮಗಳು ನಾಗರಿಕರನ್ನು ರೋಮಾಂಚನಗೊಳಿಸಿತು. ನಂತರ ಹಿಂದೂಜಾಗರಣ ಕಾರ್ಯಕರ್ತರು ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಪಟಾಕಿ ಹಾಗೂ ಸಿಡಿಮದ್ದುಗಳನ್ನು ಸಿಡಿಸಲಾಯಿತು.

ಬಿಗಿ ಪೊಲೀಸ್ ಬಂದೋಬಸ್ತ್: ರಾಮನವಮಿ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು. 4 ಡಿಎಆರ್ ತುಕಡಿ, 2 ಕೆಎಸ್ಆರ್ಪಿ ತುಕಡಿಗಳಲ್ಲಿ 300 ಸಿಬ್ಬಂದಿಗಳು, ಓರ್ವ ಡಿವೈಎಸ್ಪಿ, ನಾಲ್ವರು ವೃತ್ತ ಆರಕ್ಷಕ ನಿರೀಕ್ಷಕರು, 12 ಪಿಎಸ್ಐಗಳು ಬಂದೋಬಸ್ತ್ನ ನೇತೃತ್ವ ವಹಿಸಿದ್ದರು.

ಸಂಜೆ ಆಂಜನೇಯ ದೇವಾಲಯದಲ್ಲಿ ನಡೆದ ಜಾಗೃತಿ ಸಭೆಯಲ್ಲಿ ಪಾಲ್ಗೊಂಡು ಹಿಂದೂ ಜಾಗರಣ ವೇದಿಕೆಯ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ರಾಧಾಕೃಷ್ಣ ಅಡಂತ್ಯಾಯ ಮಾತನಾಡಿ, ಶ್ರೀಸಾಮಾನ್ಯನಾಗಿ ಹುಟ್ಟಿ ದೇವಮಾನವನಾದ ಶ್ರೀರಾಮಚಂದ್ರ, ಆದರ್ಶ ಪುತ್ರನಾಗಿ, ಮಿತ್ರನಾಗಿ, ಪ್ರಜಾಪಾಲಕನಾಗಿ ಮಾರ್ಯಾದ ಪುರುಷೋತ್ತಮನಾದರು. ಅಲ್ಲದೇ ತನ್ನ ತ್ಯಾಗದ ಮೂಲಕ ಇಡೀ ಜಗತ್ತಿಗೆ ಮಾದರಿಯಾದರು ಎಂದು ಬಣ್ಣಿಸಿದರು. ಉತ್ಸವಗಳನ್ನು ಆಚರಿಸುವ ಮೂಲಕ ರಾಷ್ಟ್ರ ಜಾಗೃತಿ ಜೊತೆಗೆ ಧರ್ಮದ ಜಾಗೃತಿ ಮೂಡಿಸುವುದು ಉತ್ಸವಗಳ ಗುರಿಯಾಗಿದ್ದು, ಈ ಮೂಲಕ ರಾಷ್ಟ್ರ ಕಟ್ಟುವ ಕೆಲಸವನ್ನು ಮಾಡಲಾಗುವುದು ಎಂದರು.
ಅಧ್ಯಕ್ಷತೆಯನ್ನು ಉತ್ಸವ ಸಮಿತಿಯ ಅಧ್ಯಕ್ಷ ಸುಭಾಷ್ ತಿಮ್ಮಯ್ಯ, ಆಂಜನೇಯ ದೇವಾಲಯ ಸಮಿತಿ ಅಧ್ಯಕ್ಷ ಸಿ.ಪಿ.ಗೋಪಾಲ್, ದೇವಾಲಯ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಎಸ್.ಎಲ್.ಸೀತಾರಾಂ ಇದ್ದರು.

See also  ಕೆರೆಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರುಪಾಲು

ರಾಮಮಂದಿರದಲ್ಲಿ ಪೂಜೆ: ರಾಮನವಮಿ ಪ್ರಯುಕ್ತ ಪಟ್ಟಣದ ರಾಮಮಂದಿರದಲ್ಲಿ ಬೆಳಗ್ಗಿನಿಂದಲೆ ವಿಶೇಷ ಪೂಜೆ ನಡೆಯಿತು. ಸಂಜೆ ಅಡ್ಡಪಲ್ಲಕ್ಕಿ ಮೆರವಣಿಗೆ ನಡೆಯಿತು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು