News Kannada
Saturday, October 01 2022

ಕರ್ನಾಟಕ

ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಕೆ - 1 min read

Photo Credit :

ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಕೆ

ಚೆಟ್ಟಳ್ಳಿ: ಬೆಳಗ್ಗಿನಿಂದಲೇ ಅರಣ್ಯ ಸಿಬ್ಬಂದಿಗಳ ತಂಡ ನುರಿತ ಆನೆಗಳು ಮಡಿಕೇರಿ ಸಮೀಪದ ಈರಳೆವಳಮುಡಿ ಗ್ರಾಮದ ಮೋದೂರ್ ತೋಟದಲ್ಲಿ ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸಲು ಆನೆಯ ಇರುವರಿಕೆಯ ಜಾಗವನ್ನು ಹುಡುಕಾಡಿ ಕಾಡಾನೆಯೊಂದಕ್ಕೆ ರೆಡಿಯೋ ಕಾಲರ್ ಅಳವಡಿಸುವಲ್ಲಿ ಯಶಿಸ್ವಿಯಾದರು.

ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಹಾಗೂ ಸೋಮವಾರಪೇಟೆ ಉಪವಲಯದ ಸಹಾಯಕ ಅರಣ್ಯ ಸಂರಕ್ಷಾಧಿಕಾರಿ ಎಂ.ಎಸ್.ಚಿಣ್ಣಪ್ಪ ಹಾಗು ಹುಣುಸೂರು ವನ್ಯಜೀವಿ ವಿಭಾಗದ ನುರಿತ ನುರಿತ ವೈದ್ಯಾಧಿಕಾರಿ ಡಾ. ಮುಜೀಬ್ ಅವರ ಮಾರ್ಗದರ್ಶನದಂತೆ ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸಲು ಕಾರ್ಯಾಚರಣೆ ನಡೆಸಲಾಯಿತು. ಮಡಿಕೇರಿ ವಿಭಾಗದ ಕುಶಾಲನಗರ ವಲಯಕ್ಕೆ ಸಂಬಂಧಿಸಿದ ಈರಳೆ ವರಳಮುಡಿ ಗ್ರಾಮದಲ್ಲಿ ಸುಮರು 16 ರಿಂದ 18 ಕಾಡಾನೆಗಳ ಗುಂಪು ಸುತ್ತಲಿನ ಕಾಫಿ ತೋಟಗಳಲ್ಲೇ ಬೀಡುಬಿಡುತಿದ್ದವು. ಹಲವು ಬಾರಿ ಅರಣ್ಯ ಸಿಬ್ಬಂದಿಗಳು ಆನೆ ಕಾರ್ಯಾಚರಣೆಗಳ ಮೂಲಕ ಕಾಡಿಗೆ ಅಟ್ಟುತ್ತಿದ್ದರು.
ಆನೆಗಳ ಚಲನವಲನದ ಮಾಹಿತಿಯನ್ನು ತಿಳಿಯಲು ಗುಂಪಿನಲ್ಲಿರುವ ಹೆಣ್ಣಾನೆಯನ್ನು ಗುರುತಿಸಿ ರೇಡಿಯೋ ಕಾಲರ್ ಅಳವಡಿಸಲು ಸಿದ್ದಗೊಳಿಸಲಾಯಿತು. ಮತ್ತಿಗೋಡು ಕ್ಯಾಂಪಿನಿಂದ ನುರಿತ ಆನೆಗಳಾದ ಭೀಮ ಹಾಗು ಅಭಿಮನ್ಯುವನ್ನು ಕರೆತಂದು ಕುಶಾಲನಗರ ಅರಣ್ಯ ವಲಯಾಧಿಕಾರಿಗಳ ಅರುಣ್, ಉಪಅರಣ್ಯ ವಲಯಾಅರಣ್ಯಾಧಿಕಾರಿಗಳಾದ ಕನ್ನಂಡ ರಂಜನ್ನ್, ಬಾನಂಡ ದೇವಿಪ್ರಸಾಸ್, ಸುಬ್ಬಮಣಿ, ಮಂಜುನಾಥ್ ಗೂಳಿ ತಮ್ಮ ತಂಡ
ದೊಂದಿಗೆ ಕಾರ್ಯನಿರತರಾದರು.

ಮಧ್ಯಾಹ್ನ 2ಗಂಟೆಗೆ ಕಾಡಾನೆಗಳ ಗುಂಪಿನೆಡೆಗೆ ಅರಣ್ಯ ಅಧಿಕಾರಿಗಳ ತಂಡ ಹಾಗು ಸಾಕಾನೆಗಳು ಧಾವಿಸುತಿದ್ದಂತೆ ಗಾಬರಿಗೊಂಡ ಕಾಡಾನೆ ಮೋದೂರು ತೋಟದಿಂದ ಓಡಲಾರಂಭಿಸಿತು. ಆನೆಯ ಮೇಲಿಂದ ಸಿಬ್ಬಂದಿ ಅರವಳಿಕೆ ಮದ್ದಿನ ಗುಂಡನ್ನು ಹಾರಿಸಿದರು. ಒಟ್ಟಿಗಿದ್ದ ಕಾಡಾನೆಗಳು ಓಡತೊಡಗಿದರೆ ಅರವಳಿಕೆ ಮದ್ದಿನ ಗುಂಡುತಾಗಿದ ಸುಮಾರು 25ರಿಂದ30 ವರ್ಷದ ಸಣ್ಣಗಿನ ಹೆಣ್ಣಾನೆ ಬದಲೆರ ಕೌಶಿಕ್ ಅವರ ತೋಟದಲ್ಲಿ ನಿಂತಿತ್ತು.

ಸಾಕಾನೆಗಳಾದ ಭೀಮ ಹಾಗು ಅಭಿಮನ್ಯುವಿನ ಸಹಾಯದಿಂದ ಹಿಡಿದು ಅರಣ್ಯ ಸಿಬ್ಬಂದಿಗಳು ಗಂಟಲಿಗೆ ರೇಡಿಯೋಕಾಲರ್ ಅಳವಡಿಸಿ ಡಾ.ಮುಜೀಬ್ ಆಂಟಿಡೋಟ್ ನೀಡಿ ಕಾಡಾನೆಯನ್ನು ಬಿಡಲಾಯಿತು. ಗಾಬರಿಗೊಂಡ ಕಾಡಾನೆ ಸುತ್ತಲಿನವರ ಮೇಲೆ ಬರುತಿದ್ದಂತೆ ಸುತ್ತಲಿದ್ದ ಸಿಬ್ಬಂದಿಗಳು ಓಡತೊಡಗಿದರು.

ಕಳೆದ ವಾರದ ಹಿಂದೆ ವಿರಾಜಪೆಟೆ ವಲಯದಲ್ಲಿ ಕಾರ್ಯಚರಣೆ ಮೂಲಕ ಎರಡು ಕಾಡಾನೆಗಳಿಗೆ ರೇಡಿಯೋಕಾಲರ್ ಅಳವಡಿಸಿದ್ದು, ಇದು ಮೂರನೆಯದಾಗಿದೆ. ನಾಳೆ ಕುಶಾಲನಗರ ವಲಯದ ಮತ್ತೊಂದು ತಂಡದ ಕಾಡಾನೆಯೊಂದಕ್ಕೆ ರೆಡಿಯೋಕಾಲರ್ ಅಳವಡಿಸಲು ಅರಣ್ಯ ಸಿಬ್ಬಂದಿಗಳು ಸಿದ್ದತೆ ನಡೆಸುತಿದ್ದಾರೆ.

See also  ಪ್ರಾಥಮಿಕ ಶಾಲೆಯಲ್ಲಿ ಕೊಡವ ಕಲಿಕೆ: ಡಾ.ಪಾರ್ವತಿ ಅಪ್ಪಯ್ಯ ಅಭಿಲಾಷೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು