News Kannada
Saturday, October 01 2022

ಕರ್ನಾಟಕ

ಮಂಡ್ಯದಲ್ಲಿ ಮನಸೆಳೆದ ಮಹಿಳಾಹಬ್ಬ - 1 min read

Photo Credit :

ಮಂಡ್ಯದಲ್ಲಿ ಮನಸೆಳೆದ ಮಹಿಳಾಹಬ್ಬ

ಮಂಡ್ಯ: ನಗರದ ಸರ್ ಎಂ.ವಿ.ಕ್ರೀಡಾಂಗಣದಲ್ಲಿ ಸಂದೇಶ ಬಾಬು ಫ್ರೆಂಡ್ಸ್ ಗ್ರೂಫ್ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಮಹಿಳಾ ಹಬ್ಬ ಮತ್ತು ರಂಗೋಲಿ-ಚಿತ್ರಕಲಾ ಸ್ಪರ್ಧೆ ಹಾಗೂ ಯೋಧರಿಗೆ ಅಭಿನಂದನಾ ಕಾರ್ಯಕ್ರಮ ಗಮನಸೆಳೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಮುಖ್ಯಸ್ಥೆ ಬಿ.ಕೆ.ರಾಧಾ ಅವರು, ಯುವ ಸಮುದಾಯ ಸಮಾಜ ಸೇವೆ ಮಾಡುವ ಮನೋಭಾವವನ್ನು ಮೈಗೂಡಿಸಿಕೊಳ್ಳುವುದು ಉತ್ತಮ. ದುರ್ಬಲವರ್ಗದ ಜನರ ಸೇವೆ ಮತ್ತು ಪರಿಸರ ಕಾಳಜಿಯನ್ನು ಬೆಳೆಸಿಕೊಂಡು ಮಾದರಿ ವ್ಯಕ್ತಿತ್ವ ರೂಪಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಗ್ರೂಫ್ ಅಧ್ಯಕ್ಷ ಸಂದೇಶಬಾಬು ಮಾತನಾಡಿ, ನೂರು ಮಂದಿ ಸ್ವಯಂ ಪ್ರೇರಕ ಯುವ ಮನಸುಗಳು ಜೊತೆಗೂಡಿ, ಈ ಊರಿಗೆ ಕೊಡುಗೆ ಏನು? ಎಂಬ ಧ್ಯೇಯೋದ್ದೇಶದಿಂದ ಸಮಾಜಮುಖಿಯಾಗಿ ಸೇವೆ ಸಲ್ಲಿಸಲು ಮುಂದಾಗಿದ್ದು, ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಅರಳಿಸಲು ವಿವಿಧ ಸ್ಪಧರ್ೆಗಳನ್ನು ನಡೆಸಲು ಚಿಂತಿಸಲಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಬೇಸಿಗೆ ಆರಂಭವಾಗುತ್ತಿರುವುದರಿಂದ ಜೀವ ಸಂಕುಲಗಳ ರಕ್ಷಣೆಗಾಗಿ ಕುಡಿಯುವ ನೀರಿನ ಸಿಮೆಂಟ್ ತೊಟ್ಟಿಗಳನ್ನು ದಾನ ಮಾಡುವುದು , ಪರಿಸರ ಸಂರಕ್ಷಣೆಗಾಗಿ ಹೊಂಗೆ ಸಸಿಗಳನ್ನು ವಿತರಿಸುವುದು ಮತ್ತು ವಿವಿಧ ಸ್ಥಳಗಳಲ್ಲಿ ಸಸಿನೆಟ್ಟು ಪೋಷಿಸುವುದು, ಅನಾಥ ಅಂಗವಿಕಲ ಮತ್ತು ದುರ್ಬಲವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ಉದ್ದೇಶ ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ಕ್ರೀಡಾಂಗಣದ ಆವರಣದಲ್ಲಿ 47 ಮಂದಿ ಶಾಲಾ-ಕಾಲೇಜು ಬಾಲಕಿಯರು ಮತ್ತು ಮಹಿಳಾ ಸ್ಪರ್ಧೆಗಳು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ ವಿವಿಧ ಬಗೆಯ ರಂಗೋಲಿ ಬಿಡಿಸಿ ಬಣ್ಣಗಳಿಂದ ಅಲಂಕರಿಸಿ, ದೀಪವಿಟ್ಟು ತೀರ್ಪುಗಾರರ ಗಮನ ಸೆಳೆದರು. ವಿವಿಧ ಶಾಲಾ ವಿದ್ಯಾಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ ಪಾಲ್ಗೊಂಡು ಪರಿಸರ ಕಾಳಜಿ, ಭಗತ್ ಸಿಂಗ್, ನಾಶಗೊಂಡ ಅರಣ್ಯ, ಮುಂಜಾನೆಯ ಸೊಬಗು, ಕಡಲ ಸೌಂದರ್ಯ, ಸೇರಿದಂತೆ ವಿವಿಧ ಚಿತ್ರಶೀರ್ಷಿಕೆಗಳ ಚಿತ್ರಗಳನ್ನು ಚಿತ್ರಿಸಿದ್ದರು.

ವಿಜೇತರಿಗೆ ಪ್ರಥಮ ಬಹುಮಾನ 4 ಸಾವಿರ ರೂ, ದ್ವಿತೀಯ ಬಹುಮಾನ 2 ಸಾವಿರ ರೂ, ತೃತೀಯ ಬಹುಮಾನ 1 ಸಾವಿರ ರೂ. ಮತ್ತು ಪ್ರಮಾಣ ಪತ್ರಗಳನ್ನು ನೀಡಲಾಯಿತು.

ಇದೇ ಸಂದರ್ಭದಲ್ಲಿ ಯುವಸಬಲಿಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿದರ್ೇಶಕ ನಂದೀಶ್ ಅವರ ನೇತೃತ್ವದಲ್ಲಿ ಮತದಾನ ನಮ್ಮ ಹಕ್ಕು ಕುರಿತ ಮತ ಜಾಗೃತಿ ಕಾರ್ಯಕ್ರಮ ನಡೆದು, ಮಹಿಳೆಯರು ಮತ್ತು ವಿದ್ಯಾಥಿಗಳು ಮತದಾನ ಬಗ್ಗೆ ಪ್ರಮಾಣ ವಚನ ಸ್ವೀಕರಿಸಿದರು

See also  ಬಿಟ್ ಕಾಯಿನ್ ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ಮುಲಾಜಿಲ್ಲದೇ ಬಲಿ ಹಾಕಲಾಗುವುದು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು