News Kannada
Sunday, September 25 2022

ಕರ್ನಾಟಕ

ಮಂಡ್ಯದ ಕರಡಿಕೊಪ್ಪಲಲ್ಲಿ ಅಭಿವೃದ್ಧಿ ಮರೀಚಿಕೆ! - 1 min read

Photo Credit :

ಮಂಡ್ಯದ ಕರಡಿಕೊಪ್ಪಲಲ್ಲಿ ಅಭಿವೃದ್ಧಿ ಮರೀಚಿಕೆ!

ಮಂಡ್ಯ: ಚುನಾವಣೆ ಬಂದಿದೆ. ಈಗ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬೆನ್ನು ತಟ್ಟಿಕೊಳ್ಳುವ ಜನಪ್ರತಿನಿಧಿಗಳಿಗೆ ಕಪ್ಪುಚುಕ್ಕೆಯಾಗಿ ಸಕ್ಕರೆ ನಾಡು ಮಂಡ್ಯದ ಕರಡಿಕೊಪ್ಪಲು ಗ್ರಾಮ ಕಾಣಿಸತೊಡಗಿದೆ.

ಹಳ್ಳಿಗಳು ಉದ್ಧಾರವಾದರೆ ದೇಶ ಉದ್ಧಾರವಾದಂತೆ ಎಂಬ ಮಾತಿದೆ. ಆದರೆ ಸರ್ಕಾರ ಗ್ರಾಮೀಣ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಇಂದಿಗೂ ಹಲವು ಹಳ್ಳಿಗಳು ಅಭಿವೃದ್ಧಿಯಾಗಿಲ್ಲ. ಇಂತಹ ಹಳ್ಳಿಗಳ ಪಟ್ಟಿಗೆ ಮಂಡ್ಯದಿಂದ 15 ಕಿ.ಮೀ. ದೂರದಲ್ಲಿರುವ ಮಾಜಿ ಸಚಿವ, ನಟ ಅಂಬರೀಶ್ ಅವರು ಪ್ರತಿನಿಧಿಸುವ ಕ್ಷೇತ್ರ ಕರಡಿಕೊಪ್ಪಲು ಸಾಕ್ಷಿಯಾಗಿದೆ.

ಹಾಗೇ ನೋಡಿದರೆ ಕರಡಿಕೊಪ್ಪಲು ಅಭಿವೃದ್ಧಿಯಾಗದಿರಲು ಕಾರಣ ಏನು ಎಂಬುದನ್ನು ಹುಡುಕುತ್ತಾ ಹೋದರೆ ಜನಪ್ರತಿನಿಧಿಗಳ ನಿರಾಸಕ್ತಿ, ಅಧಿಕಾರಿಗಳು ಉದಾಸೀನತೆ, ಗ್ರಾಮದ ಜನರಲ್ಲಿ ಹೋರಾಟದ ಮನೋಭಾವವೇ ಇವತ್ತು ಈ ಗ್ರಾಮ ಹಿಂದುಳಿಯಲು ಕಾರಣವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಆಧುನೀಕತೆ, ತಾಂತ್ರಿಕತೆ ಬೆಳೆದಂತೆಲ್ಲಾ ಗ್ರಾಮ, ನಾಡು, ದೇಶವೂ ಅಭಿವೃದ್ಧಿ ಪಥದತ್ತ ಸಾಗುತ್ತದೆ. ಎಲ್ಲ ಗ್ರಾಮಗಳಿಗೂ ಮೂಲ ಸೌಲಭ್ಯ ಕಲ್ಪಿಸಲಾಗುತ್ತದೆ. ಆದರೆ, ಆಧುನಿಕ, ತಂತ್ರಜ್ಞಾನದ ಕಾಲದಲ್ಲಿ ಈ ಗ್ರಾಮ ಮೂಲ ಸೌಲಭ್ಯಗಳಿಲ್ಲದೆ ಕುಗ್ರಾಮವಾಗಿರುವುದು ಬೇಸರದ ಸಂಗತಿಯಾಗಿದೆ.

ಸುಳ್ಳುಭರವಸೆ ನೀಡಿ ಮತಗಿಟ್ಟಿಸಿಕೊಂಡ ಜನಪ್ರತಿನಿಧಿಗಳು ಇತ್ತ ಸುಳಿದಿಲ್ಲ ಈಗ ಭರವಸೆ ನೀಡುತ್ತಾ ಗ್ರಾಮದತ್ತ ಮುಖ ಮಾಡುತ್ತಿದ್ದಾರೆ ಕಾರಣ ಚುನಾವಣೆ ಬಂದಿದೆ. ಜನಪ್ರತಿನಿಧಿಗಳಿಗೆ ಈ ಊರಿಗೆ ಜನರು ವಾಸಿಸಲು ಬೇಕಾದ ಮೂಲಭೂತ ಸೌಲಭ್ಯಗಳಾದ. ರಸ್ತೆ, ಚರಂಡಿ, ಸಾರಿಗೆ ಸೌಕರ್ಯ ನೀಡಬೇಕು ಎಂಬ ಆಲೋಚನೆ ಬಂದರೆ ಸಾಕಾಗಿದೆ. ಇದರಿಂದ ಮಕ್ಕಳು ಶಾಲಾ – ಕಾಲೇಜಿಗೆ ವಿ 3 ಕಿ.ಮೀ. ದೂರ ನಡೆಯುವುದು ತಪ್ಪಬಹುದೇನೋ?

ಕರಡಿ ಕೊಪ್ಪಲು ಗ್ರಾಮದಲ್ಲಿ ನೆಲೆಸಿರುವ ಜನರ ಪೈಕಿ ಹೆಚ್ಚಿನವರು ವ್ಯವಸಾಯವನ್ನು ನಂಬಿಕೊಂಡು ಜನ ಜೀವನ ಸಾಗಿಸುತ್ತಿದ್ದಾರೆ. ಆದರೆ ಕಳೆದ ಕೆಲವು ವರ್ಷಗಳಿಂದ ಬರ ತಟ್ಟಿದ ಪರಿಣಾಮ ಕೆಲವರು ಪಟ್ಟಣದತ್ತ ಮುಖ ಮಾಡಿದ್ದರೆ, ಕೆಲವರು ಕೂಲಿ ಮಾಡಿಕೊಂಡು, ಮತ್ತೆ ಕೆಲವರು ಕೋಳಿ, ಕುರಿ, ಹಸು ಸಾಕಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಒಟ್ಟಾರೆ ಇವರದು ಕಷ್ಟದ ಬದುಕಾಗಿದೆ. ಡಾಂಬರು ರಸ್ತೆ ಇಲ್ಲದ ಕಾರಣ ಬೇಸಿಗೆಯಲ್ಲಿ ಧೂಳುಮಯವಾದರೆ, ಮಳೆ ಬಂತೆಂದರೆ ಕೆಸರು ತುಂಬಿಕೊಳ್ಳುತ್ತದೆ.

ಎಲ್ಲ ಕಷ್ಟಗಳನ್ನು ಸಹಿಸಿಕೊಂಡು ಬದುಕುತ್ತಿರುವ ಇಲ್ಲಿನ ಜನರು ಇದೀಗ ಚುನಾವಣೆ ಬಂದಿರುವ ಕಾರಣ ರಾಜಕೀಯ ಪಕ್ಷಗಳ ನಾಯಕರಿಗೆ ನೆನಪಾಗುತ್ತಿದ್ದಾರೆ. ಈ ಬಾರಿ ಜನ ಎಚ್ಚೆತ್ತುಕೊಂಡು ಅಭಿವೃದ್ಧಿಯತ್ತ ಒಲವು ಇರುವವರನ್ನು ಆಯ್ಕೆ ಮಾಡದೆ ಹೋದರೆ ಇಲ್ಲಿನವರಿಗೆ ಕಷ್ಟ ತಪ್ಪಿದಲ್ಲ

See also  ಸಕಾಲ ಸಪ್ತಾಹ ರಾಜ್ಯದಲ್ಲೆ ಮಂಡ್ಯ ಜಿಲ್ಲೆಗೆ ಪ್ರಥಮ ಸ್ಥಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು