News Kannada
Friday, December 02 2022

ಕರ್ನಾಟಕ

ಎಂಡೋಸಲ್ಪಾನ್ ಸಂತ್ರಸ್ಥರ ಕುಟುಂಬದವರ ಧರಣಿ

Photo Credit :

ಎಂಡೋಸಲ್ಪಾನ್ ಸಂತ್ರಸ್ಥರ ಕುಟುಂಬದವರ ಧರಣಿ

ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ಥರ ಬೇಡಿಕೆಗಳನ್ನು ಈಡೇರಿಸಲು ಸರಕಾರ ಮುಂದಾಗದಿರುವುದನ್ನು ಪ್ರತಿಭಟಿಸಿ ಸಂತ್ರಸ್ಥ ಕುಟುಂಬದ ತಾಯಂದಿರು ಕಾಸರಗೋಡು ಹೊಸಬಸ್ ನಿಲ್ದಾಣ ಪರಿಸರದಲ್ಲಿ ಧರಣಿ ನಡೆಸಿದರು.

2017ರ ಏಪ್ರಿಲ್ ತಿಂಗಳಲ್ಲಿ ನಡೆಸಿದ ವೈದ್ಯಕೀಯ ಶಿಬಿರದಲ್ಲಿ ಗುರುತಿಸಿದ ಅರ್ಹರನ್ನು ಸಂತ್ರಸ್ಥ ಪಟ್ಟಿಗೆ ಸೇರ್ಪಡೆಗೊಳಿಸಬೇಕು, ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೆ ತರಬೇಕು, ಸಂತ್ರಸ್ಥರಿಗೆ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಧರಣಿಯನ್ನು ಸಾಮಾಜಿಕ ಕಾರ್ಯಕರ್ತೆ ದಯಾ ಬಾಯಿ ಉದ್ಘಾಟಿಸಿದರು. ಬೇಡಿಕೆ ಈಡೇರುವವರೆಗೂ ಹೋರಾಟ ನಡೆಸಲಾಗುವುದು. ಕೇವಲ ಭರವಸೆ ನೀಡಿ ಸರಕಾರ ನುಣುಚಿಕೊಳ್ಳಲು ಬಿಡುವುದಿಲ್ಲ. ಸಂತ್ರಸ್ಥರಿಗೆ ಅರ್ಹವಾಗಿ ಲಭಿಸಬೇಕಾದ ಎಲ್ಲಾ ಸವಲತ್ತುಗಳು, ಅವರ ಬೇಡಿಕೆಗಳು ಈಡೇರುವ ತನಕ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಮುನ್ನೆಚ್ಚರಿಕೆ ನೀಡಿದರು. ಮುನಿಸಾ ಅಂಬತ್ತರ ಅಧ್ಯಕ್ಷತೆ ವಹಿಸಿದ್ದರು. ಅಂಬತ್ತರ ಕುಞಕೃಷ್ಣನ್ ಮೊದಲಾದವರು ಮಾತನಾಡಿದರು.

See also  ಮನೆಯ ಬೀಗ ಮುರಿದು 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದರೋಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು