News Kannada
Friday, December 02 2022

ಕರ್ನಾಟಕ

ಮುಖಾರಿ ಮೂವಾರಿ ಸಮುದಾಯ ಸಂಘದಿಂದ ಸೆಕ್ರೆಟರಿಯೇಟ್‍ ಮುಂಭಾಗದಲ್ಲಿ ಧರಣಿ

Photo Credit :

ಮುಖಾರಿ ಮೂವಾರಿ ಸಮುದಾಯ ಸಂಘದಿಂದ ಸೆಕ್ರೆಟರಿಯೇಟ್‍ ಮುಂಭಾಗದಲ್ಲಿ ಧರಣಿ

ಕಾಸರಗೋಡು: ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಗಳಲ್ಲಿ ವಾಸವಿರುವ ಮುಖಾರಿ ಮೂವಾರಿ ಸಮುದಾಯವನ್ನು ಕೇರಳ ಒಬಿಸಿ ವಿಭಾಗಕ್ಕೆ ಸೇರ್ಪಡೆಗೊಳಿಸಬೇಕು, ಜಾತಿ ಮೀಸಲಾತಿಯನ್ನು ಒದಗಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಖಾರಿ ಮೂವಾರಿ ಸಮುದಾಯ ಸಂಘದಿಂದ ತಿರುವನಂತಪುರ ಸೆಕ್ರೆಟರಿಯೇಟ್‍ ಮುಂಭಾಗದಲ್ಲಿ ಧರಣಿ ನಡೆಯಿತು.

ಶಾಸಕ ಟಿ. ವಿ. ರಾಜೇಶ್ ಧರಣಿಯಲ್ಲಿ ಭಾಗಿಯಾದರು. ಸಮುದಾಯದ ಕುಲಕಸುಬಾದ ಬಿದಿರಿನ ಬುಟ್ಟಿ ಹೆಣೆದು ಪ್ರತಿಭಟನೆ ನಡೆಸಲಾಯಿತು. ಸಮುದಾಯ ಸಂಘದ ಅಧ್ಯಕ್ಷ ಕಣ್ಮನಿ ರಾಧಾಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು.

ತೃಕ್ಕರಿಪುರ ಶಾಸಕ ಎಂ. ರಾಜಗೋಪಾ ಲ್, ಶಾಸಕ ಒ. ರಾಜಗೋಪಾಲ್, ಸಾಮಾಜಿಕ ಅಭಿವೃದ್ಧಿ ಸಂಘದ ಅಧ್ಯಕ್ಷ ವಿಷ್ಣುರಾಂ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಕುಟ್ಟಪ್ಪನ್ ಚೆಟ್ಟಿಯಾರ್, ಮಣ್ಣಿನ ಪಾತ್ರೆ ನಿರ್ಮಾಣ ಸಂಘದ ಅಧ್ಯಕ್ಷ ಸುಭಾಷ್ ಬೋಸ್, ಮುಖಾರಿ ಮೂವಾರಿ ಸಮುದಾಯ ಸಂಘದ ರತ್ನಗಿರಿ ಪ್ರಾದೇಶಿಕ ಸಮಿತಿ ಅಧ್ಯಕ್ಷ ಜಯರಾಮ ಪೊನ್ನಂಗಳ ಮೊದಲಾದವರು ಮಾತನಾಡಿದರು.

See also  ಕೊಡಗಿನಲ್ಲಿ ನಡೆಯಲಿದೆ ‘ತೆಂಗಿನ ಕಾಯಿಗೆ ಗುಂಡು’ ಸ್ಪರ್ಧೆ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು