News Kannada
Friday, December 02 2022

ಕರ್ನಾಟಕ

`ಇಂದಿನ ಶಿಕ್ಷಣ ವಿದ್ಯಾರ್ಥಿಗಳ ಸರ್ವತೋಮುಖ ಜ್ಞಾನ ಸಂಪಾದನೆ ಒತ್ತು’

Photo Credit :

`ಇಂದಿನ ಶಿಕ್ಷಣ ವಿದ್ಯಾರ್ಥಿಗಳ ಸರ್ವತೋಮುಖ ಜ್ಞಾನ ಸಂಪಾದನೆ ಒತ್ತು'

ಕಾಸರಗೋಡು: ಇಂದಿನ ಶಿಕ್ಷಣವು ವಿದ್ಯಾರ್ಥಿಗಳ ಸರ್ವತೋಮುಖ ಜ್ಞಾನ ಸಂಪಾದನೆಗೆ ಒತ್ತು ನೀಡುತ್ತಿದ್ದು, ವಿದ್ಯಾರ್ಥಿಗಳ ಸಾಮರ್ಥ್ಯಕ್ಕನುಗುಣವಾಗಿ ಪ್ರತಿಭೆಗೆ ಪ್ರೋತ್ಸಾಹ ನೀಡಿ ಬೆಳೆಸಲು ಅವಕಾಶಗಳಿವೆ ಎಂದು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ನವನಟನಾ ಕಾಸರಗೋಡಿನ ಆಶ್ರಯದಲ್ಲಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಸ್ಮಾರಕ “ಗಿಳಿವಿಂಡು” ವಿನಲ್ಲಿ ಆಯೋಜಿಸಲಾದ ಮೂರು ದಿನಗಳ ಉಚಿತ ಬೇಸಿಗೆ ಶಿಬಿರ ಜೋಕಾಲಿ-2018 ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಸೃಜನಶೀಲತೆಯನ್ನು ಪ್ರೋತ್ಸಾಹಿಸುವ, ಬೆಳಕಿಗೆ ತರುವ ಪ್ರಯತ್ನಗಳು ವಿಶೇಷ ಶಿಬಿರಗಳ ಮೂಲಕ ಸಾಕಾರವಾದಾಗ ಮುಂದಿನ ಸಮಾಜಕ್ಕೆ ನೀಡುವ ಮಹತ್ವದ ಕೊಡುಗೆಯಾಗಿ ಪರಿಗಣಿಸಲ್ಪಡುತ್ತದೆ. ವಿವಿಧ ಕ್ಷೇತ್ರಗಳಲ್ಲಿರುವ ವಿಶಾಲ ಅವಕಾಶಗಳ ಅರಿವನ್ನು ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ಒದಗಿಸಿಕೊಡುವ ಪ್ರಯತ್ನಗಳನ್ನು ಸಂಘಸಂಸ್ಥೆಗಳ ಮುತುವರ್ಜಿಯಿಂದ ನಿರ್ವಹಿಸುವುದು ಜವಾಬ್ದಾರಿಯುತ ಸಮಾಜ ನಿರ್ಮಾಣದ ಭಾಗವಾಗಿದ್ದು, ಶಿಬಿರ ಯಶಸ್ವಿಗೊಳ್ಳಲಿ ಎಂದು ಅವರು ತಿಳಿಸಿದರು.

ಸಂಘಟಕ ಡಾ.ರಾಜೇಶ್ ಆಳ್ವ ಬದಿಯಡ್ಕ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶಾಲ ತುಳುನಾಡು ಹಲವು ಸಾಧಕರ ಕರ್ಮಭೂಮಿಯಾಗಿದ್ದು, ಅಂತಹ ಸಾಧಕರ ನೆನಪುಗಳೊಂದಿಗೆ ಭವಿಷ್ಯವನ್ನು ಇನ್ನಷ್ಟು ಸುಂದರಗೊಳಿಸುವ ಹೊಣೆ ವರ್ತಮಾನದ ಅಗತ್ಯವಾಗಿದೆ ಎಂದು ತಿಳಿಸಿದರು. ಪುಟ್ಟ ಮಕ್ಕಳಲ್ಲಿ ಅಡಕವಾಗಿರುವ ಶಕ್ತಿಯನ್ನು ಬೆಳಕಿಗೆ ತಂದು ಸ್ಪಷ್ಟ ಮಾರ್ಗದರ್ಶನದೊಂದಿಗೆ ಮುನ್ನಡೆಸುವ ನಿಟ್ಟಿನಲ್ಲಿ ಶಿಬಿರಗಳು ಸಹಕಾರಿಯಾಗಿದ್ದು, ಪ್ರತಿಯೊಬ್ಬ ಸಹೃದಯನ ಪ್ರೋತ್ಸಾಹ, ಬೆಂಬಲ ಅಗತ್ಯವಿದೆ ಎಂದು ಅವರು ತಿಳಿಸಿದರು.

ನ್ಯಾಯವಾದಿ ಥೋಮಸ್ ಡಿ’ಸೋಜಾ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಶಿಕ್ಷಕ, ಸಾಹಿತಿ ಹರೀಶ್ ಸುಲಾಯ ಒಡ್ಡಂಬೆಟ್ಟು, ನಾಟಕ ನಿರ್ದೇಶಕ ಉದಯ ಸಾರಂಗ್ ಉಪಸ್ಥಿತರಿದ್ದರು. ಅಶೋಕ ಕೊಡ್ಲಮೊಗರು ಸ್ವಾಗತಿಸಿ, ಹರ್ಷ ರೈ ಪುತ್ರಕಳ ವಂದಿಸಿದರು. ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು.

ಮೂರು ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಜಿಲ್ಲೆಯ 35ಕ್ಕಿಂತಲೂ ಮಿಕ್ಕಿದ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ಅವಿನಾಶ ರೈ ನೀನಾಸಂ, ರಾಷ್ಟ್ರೀಯ ನಾಟಕ ಶಾಲೆಯ ಬಿಜು ಇರಿನವೆ, ರಂಗ ನಿರ್ದೇಶಕ ಉದಯ ಸಾರಂಗ್, ರಂಗಚಾವಡಿ ಬಂಬಿಲದ ಕೃಷ್ಣಪ್ಪ ಬಂಬಿಲ, ಚಲನಚಿತ್ರ ಕಲಾವಿದ ಮೋಹನ ಪಡ್ರೆ, ನೃತ್ಯ ನಿರ್ದೇಶಕ ಸದಾನಂದ ಆಚಾರ್ಯ, ಒರಿಗಮಿ ಕಲಾವಿದೆ ಪದ್ಮಾಟೀಚರ್ ಮುಳ್ಳೇರಿಯ, ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಸಾಹಿತಿ ವಿರಾಜ್ ಅಡೂರು ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡುವರು. ವಿಶೇಷ ಆಹ್ವಾನಿತರಾಗಿ ಚಲನಚಿತ್ರ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ, ಕಾಮೆಡಿ ಕಿಲಾಡಿ ಧೀರಜ್ ಹಾಗೂ ಸೂರಜ್ ಮಂಗಳೂರು, ಡ್ರಾಮಾ ಜೂನಿಯರ್ಸ್ ಅನೂಪ್ ರಮಣ ಶರ್ಮಾ, ನಿರ್ದೇಶಕ ಜೆ.ಪಿ.ತೂಮಿನಾಡ್, ಜಾದೂ ನೃತ್ಯ ಕಲಾವಿದೆ ತೇಜಸ್ವನಿ ಕಡೆಂಕೊಡಿ, ಸಾಹಿತಿ ಹರೀಶ್ ಸುಲಾಯ ಬಡ್ಡಂಬೆಟ್ಟು, ಕಣ್ಣೂರು ವಿವಿ ಕಲೋತ್ಸವ ನಾಟಕ ಪ್ರಶಸ್ತಿ ವಿಜೇತೆ ಸುಶ್ಮಿತಾ ಆರ್, ಶರಣ್ ಕಾಟುಕುಕ್ಕೆ, ಬಾಲ ಯಕ್ಷಗಾನ ಕಲಾವಿದೆ ಸುಶ್ಮಿತಾ ಸುಧೀರ್ ರೈ ಮುಳ್ಳೇರಿಯ ಮೊದಲಾದವರು ಭಾಗವಹಿಸಿ ಸಂವಾದ ನಡೆಸುವರು. ಜೊತೆಗೆ ವಿಜಯಕುಮಾರ್ ಪಾವಳ, ಟಿ.ಡಿ.ಸದಾಶಿವ ರಾವ್, ಬಾಲಕೃಷ್ಣ ಶೆಟ್ಟಿಗಾರ್ ಬಡಾಜೆ, ಜಯಾನಂದ ಆಚಾರ್ಯ, ಬಾಬು ಮಾಸ್ತರ್ ಮಂಜೇಶ್ವರ, ಸಂಜೀವ ಶೆಟ್ಟಿ ಮಾಡ ಶಿಬಿರದಲ್ಲಿ ಭಾಗವಹಿಸುವರು.

See also  ರಾಜ್ಯದ ಅನೇಕ ಕಡೆ ಅಧಿಕಾರಿಗಳ ಮನೆ ಮೇಲೆ ಏಸಿಬಿ ಧಾಳಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು