News Kannada
Thursday, December 08 2022

ಕರ್ನಾಟಕ

ಕಾಸರಗೋಡು: ಗ್ರಾಮ ಕಚೇರಿಗಳ ವಿಂಗಡಣೆಗೆ ಮೀನ ಮೇಷ

Photo Credit :

ಕಾಸರಗೋಡು: ಗ್ರಾಮ ಕಚೇರಿಗಳ ವಿಂಗಡಣೆಗೆ ಮೀನ ಮೇಷ

ಕಾಸರಗೋಡು: ಅಭಿವೃದ್ಧಿ ಮತ್ತು ಮೂಲಭೂತ ಸೌಲಭ್ಯಗಳಲ್ಲಿ ಹಿಂದುಳಿದಿರುವ ಮತ್ತು ನಿರ್ಲಕ್ಷಕ್ಕೆ ಒಳಗಾಗಿರುವ ಕಾಸರಗೋಡಿಗೆ ಈಗ ಇರುವ ಗ್ರಾಮ ಕಚೇರಿಗಳು ವಿಸ್ತೀರ್ಣ ಒಂದು ಕಾರಣವಾಗಿದೆ. ದಶಕಗಳಿಂದ ಜಿಲ್ಲೆಯಲ್ಲಿರುವ ಗ್ರಾಮ ಕಚೇರಿಗಳ ವಿಂಗಡಣೆ ಯಾಗಿಲ್ಲ. ರಾಜ್ಯದಲ್ಲೇ ಅತೀ ಹೆಚ್ಚು ಗುಂಪು ಗ್ರಾಮ ಕಚೇರಿಗಳಿರುವ ಜಿಲ್ಲೆ ಕಾಸರಗೋಡು ಎನ್ನಬಹುದು.

ಮೂರು ನಾಲ್ಕು ಗ್ರಾಮಗಳಿಗೆ ಒಂದೇ ಗ್ರಾಮ ಕಚೇರಿ ಇದ್ದು, ಇದರಿಂದ ಕೆಲಸ ಕಾರ್ಯಗಳಿಗೆ ಅಡ್ಡಿ ಉಂಟಾಗುತ್ತಿದೆ. ಜಿಲ್ಲೆಯಲ್ಲಿ ನಾಲ್ಕು ತಾಲೂಕುಗಳಲ್ಲಾಗಿ 127 ಗ್ರಾಮಗಳಿವೆ. ಆದರೆ 83 ಗ್ರಾಮ ಕಚೇರಿ ಮಾತ್ರ ಜಿಲ್ಲೆಯಲ್ಲಿದೆ.

ಇದರಿಂದ ಜನಸಾಮಾನ್ಯರು ಎದುರಿಸುತ್ತಿರುವ ಬವಣೆ ಒಂದೆರಡಲ್ಲ. ಜನರು ಸಣ್ಣ ದಾಖಲೆ, ಪ್ರಮಾಣ ಪಾತ್ರ ಪಡೆಯಲು ಕೂಡಾ ಕಿಲೋ ಮೀಟರ್ ಗಳಷ್ಟು ಸಂಚರಿಸಬೇಕಾದ ಸ್ಥಿತಿ ಉಂಟಾಗುತ್ತಿದೆ. ಕೆಲಸ ಕಾರ್ಯ ಬಿಟ್ಟು ದಿನವಿಡೀ ಅಲೆದಾಡಬೇಕಾದ ಸ್ಥಿತಿ ಉಂಟಾಗುತ್ತಿದೆ.

ಕನ್ನಡ ಭಾಷಾ ಅಲ್ಪಸಂಖ್ಯಾತ ತಾಲೂಕು ಗಳಾದ ಕಾಸರಗೋಡು ಮತ್ತು ಮಂಜೇಶ್ವರದಲ್ಲಿ ಅತ್ಯಧಿಕ ಗುಂಪು ಗ್ರಾಮಗಳಿವೆ.

ಮಂಜೇಶ್ವರ ತಾಲೂಕಿನ ಇಚ್ಲ೦ಗೋಡು ಗ್ರಾಮ ಕಚೇರಿ ಗೆ ಮಾತ್ರ ಬೇಕೂರು , ಇಚ್ಲಂಗೋಡು, ಹೇರೂರು, ಶಿರಿಯ, ಕುಬಣೂರು ಸೇರಿದಂತೆ ಐದು ಗ್ರಾಮಗಳು ಸೇರುತ್ತಿವೆ. ಮಿಂಜ ಗ್ರಾಮ ಕಚೇರಿಗೆ ಕಳಿಯೂರು, ಕೋಳಿಯೂರು, ತಲೆಕ್ಕಳ, ಕಡಂಬಾರಿಗೆ ಕಡಂಬಾರ್, ಕೂಳೂರು, ಮೂಡಂಬೈಲ್, ಮಜಿಬೈಲ್, ಉಪ್ಪಳಕ್ಕೆ ಕೋಡಿಬೈಲು, ಮಂಗಲ್ಪಾಡಿ, ಹೊಸಬೆಟ್ಟು ಗೆ ಬಂಗ್ರ ಮಂಜೇಶ್ವರ, ಬಡಾಜೆ, ಹೊಸಬೆಟ್ಟು ಮೊದಲಾದ ಗ್ರಾಮಗಳು ಸೇರುತ್ತಿವೆ.

ಆದರೆ ಇದರಿಂದ ಜನರಿಗೆ ಉಂಟಾಗುವ ಸಮಸ್ಯೆಗಳ ಬಗ್ಗೆ ಇನ್ನೂ ಗಮನಹರಿಸಿಲ್ಲ. ಮಾತ್ರವಲ್ಲ ಕೆಲ ಗ್ರಾಮ ಕಚೇರಿಗಳಲ್ಲಿ ಗ್ರಾಮಾಧಿಕಾರಿ, ಸಿಬಂದಿಗಳಿಲ್ಲ.
ಕಾಸರಗೋಡು ಅಭಿವೃದ್ಧಿಗಾಗಿ ವರದಿ ನೀಡಲು ನೇಮಿಸಿದ ಡಾ . ಪ್ರಭಾಕರನ್ ಆಯೋಗ ವರದಿಯಲ್ಲೂ ಗುಂಪು ಗ್ರಾಮ ಕಚೇರಿಗಳ ವಿಭಜನೆಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ. ಜಿಲ್ಲೆಯಲ್ಲಿನ ಅದರಲ್ಲೂ ಮಂಜೇಶ್ವರ, ಕಾಸರಗೋಡು ತಾಲೂಕು ನಲ್ಲಿರುವ 13 ಗ್ರಾಮ ಕಚೇರಿಗಳನ್ನು ಕೂಡಲೇ ವಿಭಜಿಸಬೇಕು ಎಂದು 2012 ರಲ್ಲಿ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ . ಆದರೆ ಆರು ವರ್ಷ ಕಳೆದರೂ ಇನ್ನೂ ಈ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ. ಗುಂಪು ಗ್ರಾಮ ಕಚೇರಿ ವಿಂಗಡಣೆ ಇನ್ನೂ ಕಡತದಲ್ಲೇ ಉಳಿದುಕೊಂಡಿದೆ. ಗ್ರಾಮ ಕಚೇರಿ ವಿಂಗಡಣೆಗೆ ನಾಗರಿಕರು, ಹಲವು ಸಂಘಟನೆಗಳು ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಆದರೆ ಇನ್ನೂ ಬೇಡಿಕೆ ಈಡೇರಿಲ್ಲ. ಜಿಲ್ಲೆಯವರೇ ರಾಜ್ಯ ಸಚಿವ ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದಾರೆ. ಸಚಿವರಾದ ಸಂದರ್ಭದಲ್ಲೇ ಇವರ ಗಮನಕ್ಕೂ ತರಲಾಗಿತ್ತು. ಆದರೆ ಸಚಿವರಾಗಿ ಎರಡು ವರ್ಷ ಕಳೆದರೂ ಪ್ರಾಥಮಿಕ ಹಂತದಲ್ಲೂ ಕೂಡಾ ಈ ಬಗ್ಗೆ ಸರಕಾರ ಗಮನ ಹರಿಸಿಲ್ಲ.

ಜಿಲ್ಲೆಯಲ್ಲಿ ಮಂಜೇಶ್ವರ ತಾಲೂಕಿನ ಕುಂಜತ್ತೂರು, ಹೊಸಬೆಟ್ಟು, ಕಡಂಬಾರ್, ಮಿಂಜ, ಕೊಡ್ಲಮೊಗರು, ವರ್ಕಾಡಿ, ವರ್ಕಾಡಿ, ಇಚ್ಲಂಗೋಡು, ಉಪ್ಪಳ, ಪೈವಳಿಕೆ ಕಯ್ಯಾರ್, ಬಂಬ್ರಾಣ, ಕೊಯಿಪಾಡಿ, ಎಡನಾಡು, ಬಾಡೂರು, ಪಡ್ರೆ, ಕಾಸರಗೋಡು ತಾಲೂಕಿನ ಕಾಸರಗೋಡು, ಚೆಂಗಳ, ಪಾಡಿ, ಕೂಡ್ಲು, ಆದೂರು, ಕುಂಬ್ಡಾಜೆ, ತೆಕ್ಕಿಲ್, ಕಳ್ನಾಡ್, ನೆಟ್ಟಣಿಗೆ, ಹೊಸದುರ್ಗ ತಾಲೂಕಿನ ಪಿಲಿಕ್ಕೋಡ್, ಪಳ್ಳಿಕೆರೆ, ಕ್ಲಾಯಿಕ್ಕೋಡ್, ವೆಳ್ಳರಿಕುಂಡು ತಾಲೂಕಿನ ಕರಿಂದಲ ಗುಂಪು ಗ್ರಾಮ ಕಚೇರಿಗಳಾಗಿವೆ. ಈ ಗ್ರಾಮ ಕಚೇರಿ ವ್ಯಾಪ್ತಿಯ ಬರುವ ಗ್ರಾಮಗಳನ್ನು ವಿಭಜಿಸಿ ಆಯಾ ಗ್ರಾಮಗಳಿಗೆ ಕಚೇರಿ ನಿರ್ಮಿಸಿದ್ದಲ್ಲಿ ಜನರಿಗೆ ಅನುಕೂಲ ವಾಗಲಿದೆ. ಆದರೆ ಈ ಬಗ್ಗೆ ಹಲವು ಪ್ರತಿಭಟನೆ , ಮನವಿ ಜೊತೆಗೆ ಪ್ರಭಾಕರನ್ ಆಯೋಗದ ವರದಿ ಯಲ್ಲಿ ಶಿಪಾರಸು ಮಾಡಿದ್ದರೂ ಇನ್ನೂ ಕಾರ್ಯಗತ ಗೊಂಡಿಲ್ಲ. ಇದರಿಂದ ಜಿಲ್ಲೆಯ ಅದರೆಯಲ್ಲೂ ಕನ್ನಡ ಭಾಷಾ ಅಲ್ಪಸಂಖ್ಯಾತ ಪ್ರದೇಶದದ ನಿರ್ಲಕ್ಷ್ಯವನ್ನು ಎತ್ತಿತೋರಿಸುತ್ತಿದೆ.

See also  ಅ.17ರಿಂದ ಭಕ್ತರಿಗೆ ಶ್ರೀ ಹಾಸನಾಂಬ ದೇವಿ ದರ್ಶನದ ಭಾಗ್ಯ

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು